ನಾಳೆ ಕಲಬುರಗಿಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ: ಡಿಸಿ

1
1229

ಕಲಬುರಗಿ: ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತದಾನದ ಪಾವಿತ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ಕಲಬುರಗಿ ಜಿಲ್ಲೆಯ ಮತದಾನ ಕೇಂದ್ರಗಳ ಸುತ್ತಲು ದಿನಾಂಕ 27.10.2020ರ ಬೆಳಿಗ್ಗೆ 6 ಗಂಟೆಯಿಂದ 28.10.2020ರ ಮಧ್ಯರಾತ್ರಿ 12 ಗಂಟೆಯವರೆಗೆ ಸಿ.ಆರ್.ಪಿ.ಸಿ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಆದೇಶಿಸಿದ್ದಾರೆ.

ಎಣಿಕೆ ಕೇಂದ್ರಕ್ಕೆ ಆಯುಧ, ಮೊಬೈಲ್ ನಿಷೇಧ: ಮತ ಎಣಿಕೆ ದಿನಾಂಕವಾದ 02.11.2020 ರಂದು ಕಲಬುರಗಿ ವಿಶ್ವವಿದ್ಯಾಲಯದ ಸುತ್ತಲು ಹಾಗೂ ಮತ ಎಣಿಕೆ ಕೇಂದ್ರದ ಒಳಗಡೆ ಇಂಕ್ ಪೆನ್/ಸ್ಕೆಚ್ ಪೆನ್, ಹರಿತವಾದ ಆಯುಧ, ಸ್ಪೋಟಕ ವಸ್ತುಗಳು, ಮೊಬೈಲ್, ಸಿಗರೇಟ್, ಗುಟಕಾ ಮತ್ತು ನೀರಿನ ಬಾಟಲ್‍ಗಳನ್ನು ತರುವುದನ್ನು ಸಿ.ಆರ್.ಪಿ.ಸಿ ಕಾಯ್ದೆ ಕಲಂ 144 ರನ್ವಯ ನಿಷೇಧಿಸಲಾಗಿದೆ.

Contact Your\'s Advertisement; 9902492681

ಮದ್ಯ ಮಾರಾಟ ನಿಷೇಧ: ಜಿಲ್ಲೆಯಲ್ಲಿ ಮತದಾನಕ್ಕೆ ಸ್ಥಾಪಿಸಿರುವ ಕೇಂದ್ರಗಳ ಸುತ್ತಮುತ್ತ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 27.10.2020ರ ಬೆಳಿಗ್ಗೆ 6 ಗಂಟೆಯಿಂದ 28.10.2020ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ತರಹದ ಮದ್ಯ ಮಾರಾಟವನ್ನು ಸಹ ನಿಷೇಧಿಸಲಾಗಿದೆ. ಇನ್ನು ನವೆಂಬರ್ 2 ರಂದು ಕಲಬುರಗಿ ನಗರದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿರುವ ಹಿನ್ನೆಲೆಯಲಿ ಕಲಬುರಗಿ ನಗರ ವ್ಯಾಪ್ತಿಯಲ್ಲಿ ದಿನಾಂಕ 01.11.2020ರ ಮಧ್ಯರಾತ್ರಿಯಿಂದ ದಿನಾಂಕ 02.11.2020ರ ಮಧ್ಯ ರಾತ್ರಿಯವರೆಗೆ ಕರ್ನಾಟಕ ಅಬಕಾರಿ ಸನ್ನದುಗಳು (ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ-10 (ಬಿ) ರನ್ವಯ ಎಲ್ಲಾ ತರಹದ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here