ಸುರಪುರ: ಸ್ಥಳೀಯ ಗೃಹ ರಕ್ಷಕ ದಳ ಕಾರ್ಯಾಲಯದಲ್ಲಿ ಪಂಚ ಕಮೀಟಿ ಹಾಗೂ ಗೆಳೆಯರ ಬಳಗದ ವತಿಯಿಂದ ವಿಜಯ ದಶಮಿ ನಿಮಿತ್ತ ಆಯುಧ ಪೂಜೆ ಕಾರ್ಯಕ್ರಮವನ್ನು ರವಿವಾರದಂದು ಭಕ್ತಿ-ಶ್ರದ್ಧೆಯಿಂದ ಆಚರಿಸಲಾಯಿತು, ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್ ನೇತೃತ್ವದಲ್ಲಿ ಪೂಜೆ ಹಾಗೂ ಇನ್ನೀತರ ಕಾರ್ಯಕ್ರಮಗಳು ನಡೆದವು ನಂತರ ಸಮಸ್ತ ಗೃಹ ರಕ್ಷಕದಳ ಸಿಬ್ಬಂದಿಗಳು ಸುರಪುರ ಸಂಸ್ಥಾನದ ಆರಾಧ್ಯ ದೈವ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಕಚೇರಿಯಿಂದ ದೇವಸ್ಥಾರವರೆಗೆ ಕಾಲ್ನಡಿಗೆ ಮೂಲಕ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ಕಚೇರಿಯಲ್ಲಿ ನಡೆದ ಪೂಜೆ ಕಾರ್ಯಕ್ರಮದ ನಂತರ ಈ ಸಂದರ್ಭದಲ್ಲಿ ಯಲ್ಲಪ್ಪ ಹುಲಿಕಲ್‌ರವರು ಮಾತನಾಡಿ ಈ ಕೊರೋನಾ ಸೋಂಕಿನ ಹಾವಳಿಯಿಂದಾಗಿ ಎಲ್ಲಾ ಕ್ಷೇತ್ರಗಳಿಗೆ ಹೊಡೆತ ಬಿದ್ದಿದ್ದು ರೈತರು, ಸಾರ್ವಜನಿಕರು ಎಲ್ಲರೂ ಸಂಕಷ್ಟದಲ್ಲಿದ್ದು ಎಲ್ಲರ ಸುಖ ಸಂತೋಷಗಳನ್ನು ಕಸಿದುಕೊಂಡಿದೆ ಹೀಗಾಗಿ ಹಬ್ಬ ಹರಿದಿನಗಳನ್ನು ವಿಜೃಂಭಣೆಯಿಂದ ಆಚರಿಸಲು ಆಗುತ್ತಿಲ್ಲ ಕಾರಣ ನಮ್ಮ ನಾಡು, ದೇಶ ಹಾಗೂ ಇಡೀ ಪ್ರಪಂಚಶದಿಂದ ಈ ಸೋಂಕು ಸಂಪೂರ್ಣ ತೊಲಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದರು.
ಅಲ್ಲದೆ ಜನರು ಕೂಡಾ ನಮ್ಮ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ಧರ್ಮದ ದಾರಿಯಲ್ಲಿ ಸಾಗಬೇಕು ಅಂದಾಗ ಮಾತ್ರ ಸುಭಿಕ್ಷೆ ನೆಲೆಸಲು ಸಾಧ್ಯ ಒಂದು ವೇಳೆ ಇದೇ ರೀತಿಯಾಗಿ ಮನುಷ್ಯ ಅಹಂಕಾರದಿಂದ ನಡೆದುಕೊಂಡಲ್ಲಿ ಜಗತ್ತು ಅವನತಿಯತ್ತ ಸಾಗುತ್ತದೆ ಇನ್ನಷ್ಟು ಸಂಕಷ್ಟಗಳನ್ನು ಎಲ್ಲರೂ ಅನುಭವಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಹಾಪುರ ಘಟಕಾಧಿಕಾರಿ ಮಾರ್ಥಂಡಪ್ಪ ಮುಂಡಾಸ,ಪ್ಲಾಟೂನ್ ಕಮಾಂಡರ್ ದೇವಿಂದ್ರಪ್ಪ ನಾಶಿ,ಹುಣಸಗಿ ಘಟಕಾಧಿಕಾರಿ ಅಲಿ ಆಶೀಕ್, ಕೆಂಭಾವಿ ಘಟಕಾಧಿಕಾರಿ ಮುರ್ತುಜಾ ಖಾದರ್, ಸುರಪುರ ಘಟಕದ ವೆಂಕಟೇಶ್ವರ ಸುರಪುರಕರ್, ರಮೇಶ ಅಂಬೂರೆ ಹಾಗೂ ಇತರರು ಇದ್ದರು.