ಸುರಪುರ: ಅಶೋಕ ವಿಜಯ ದಶಮಿ ಆಚರಿಸಿ ಬೌಧ್ಧ ಧರ್ಮ ಪ್ರಚಾರ

0
23

ಸುರಪುರ: ನಗರದ ಡಾ:ಬಿ.ಆರ್.ಅಂಬೇಡ್ಕರ ವೃತ್ತ ಮತ್ತು ಗೋಲ್ಡನ್ ಕೇವ್ ಗವಿ ಬುದ್ಧವಿಹಾರದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರಿಂದ ಅಶೋಕ ವಿಜಯ ದಶಮಿ ಆಚರಿಸಲಾಯಿತು.ಮೊದಲಿಗೆ ಬಸ್ ನಿಲ್ದಾಣ ಬಳಿಯ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸೇರಿದ್ದ ಅನೇಕ ಮುಖಂಡರು ಧಮ್ಮ ಧ್ವಜಾರೋಹಣ ನೆರವೇರಿಸಿ ನಂತರ ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಯಘೋಷ ಕೂಗಿದರು.

ನಂತರ ಗೋಲ್ಡನ್ ಕೇವ್ ಗವಿ ಬುದ್ಧ ವಿಹಾರದಲ್ಲಿ ಸಭೆ ನಡೆಸಿ ಧಮ್ಮ ವಂದನೆ ನಡೆಸಿ ನಂತರ ಡಾ:ಬಿ.ಆರ್.ಅಂಬೇಡ್ಕರ ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷ ವೆಂಕಟೇಶ ಹೊಸ್ಮನಿ ಮಾತನಾಡಿ,ತಥಾಗತ ಗೌತಮ್ ಬುದ್ಧ ರಿಂದ ಜಗತ್ಪ್ರಸಿದ್ಧವಾಗಿರುವ ಬೌಧ್ಧ ಧರ್ಮವನ್ನು ಸಾಮ್ರಾಟನಾಗಿದ್ದ ಅಶೋಕ ಚಕ್ರವರ್ತಿಯು ಕಳಿಂಗ ಯುದ್ಧದ ನಂತರ ಪರಿವರ್ತನೆಗೊಂಡು ಬೌಧ್ಧ ಧರ್ಮವನ್ನು ಸ್ವೀಕರಿಸಿದ ಈ ದಿನ ಹಾಗು ಬಾಬಾ ಸಾಹೇಬ್ ಅಂಬೇಡ್ಕರರು ತಮ್ಮ ೮ ಲಕ್ಷ ಉಪಾಸಕರೊಂದಿಗೆ ಬೌಧ್ಧ ಧರ್ಮ ಸ್ವೀಕರಿಸಿ ಧಮ್ಮ ಪರಿವರ್ತನ ದಿನಾಗಿದ್ದು, ಬಾಬಾ ಸಾಹೇಬರು ಹೇಳಿದಂತೆ ನಾನು ಹಿಂದುವಾಗಿ ಹುಟ್ಟಿದ್ದೇನೆ ಆದರೆ ಹಿಂದುವಾಗಿ ಸಾಯಲಾರೆ ಎಂದಿರುವಂತೆ ನಾವಾರು ಹಿಂದುಗಳಲ್ಲ ನಮ್ಮ ಧರ್ಮ ಬೌಧ್ಧ ಧರ್ಮವಾಗಿದೆ,ನಮ್ಮ ಮಕ್ಕಳ ಶಾಲಾ ದಾಖಲಾತಿಗಳಲ್ಲಿ ಧರ್ಮ ಬೌಧ್ಧ ಎಂದು ಬರೆಯಿಸುವಂತೆ ಸಲಹೆ ನೀಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮೂಲನಿವಾಸಿ ಅಂಬೇಡ್ಕರ ಸೇನೆಯ ರಾಜ್ಯ ಕಾರ್ಯದರ್ಶಿ ರಾಹುಲ್ ಹುಲಿಮನಿ ಮೂರ್ತಿ ಬೊಮ್ಮನಹಳ್ಳಿ ಮಹೇಶ ಕರಡಕಲ್ ಇತರರು ಮಾತನಾಡಿದರು.ರಾಜು ಕಟ್ಟಿಮನಿ ವಂದಿಸಿದರು.ಸಭೆಯಲ್ಲಿ ಮಾಳಪ್ಪ ಕಿರದಹಳ್ಳಿ ಧರ್ಮಣ್ಣ ಹುಲಿ ಹಣಮಂತ ಬೊಮ್ಮನಹಳ್ಳಿ ನಿಂಗಣ್ಣ ಗೋನಾಲ ಮಹಾದೇವಪ್ಪ ಬೊಮ್ಮನಹಳ್ಳಿ ಶ್ರೀಮಂತ ಚಲುವಾದಿ ವಿಶ್ವನಾಥ ಹೊಸ್ಮನಿ ಕೆಎಂ ಪಟೇಲ್ ಮಲ್ಲು ಕೆಸಿಪಿ ಚಂದಪ್ಪ ಪಂಚಮ್ ಖಾಜಾ ಅಜ್ಮೀರ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here