ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಲು ಹುಣಸಗಿಯಲ್ಲಿ ಪ್ರತಿಭಟನೆ

0
19

ಸುರಪುರ: ರಾಜ್ಯದಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ತೀರಾ ಹಿಂದುಳಿದಿದ್ದು ಸರಕಾರ ಈ ಸಮಾಜವನ್ನು ನಿರ್ಲಕ್ಷ್ಯ ತೋರಿದೆ ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಲ್ಲನಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದರು.

ಹುಣಸಗಿ ತಹಸೀಲ್ ಕಚೇರಿ ಮುಂದೆ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ನಮ್ಮ ಪಂಚಮಸಾಲಿ ಸಮಾಜವನ್ನು ೨ಎಗೆ ಸೇರಿಸುವಂತೆ ಅನೇಕ ವರ್ಷಗಳಿಂದ ಸರಕಾರಕ್ಕೆ ಆಗ್ರಹಿಸುತ್ತಿದ್ದೇವೆ ,ಆದರೆ ಸರಕಾರದ ನಿರ್ಲಕ್ಷ್ಯ ದಿಂದಾಗಿ ಇಂದು ಸಮಸ್ಯೆ ಉಂಟಾಗಿದೆ.ಕೂಡಲೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವನ್ನು ೨ಎಗೆ ಸೇರಿಸಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ವಿನಯಕುಮಾರ ಪಾಟೀಲ್ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಮರಿಗೆಣ್ಣ ದೇಸಾಯಿ ಬಸವರಾಜ ಮಲಗಲದಿನ್ನಿ ಹೊನ್ನಕೇಶವ ದೇಸಾಯಿ ನಂದನಗೌಡ ಬಿರಾದಾರ ಸಿದ್ದನಗೌಡ ಮೈಲೇಶ್ವರ ಟಿ.ಜಿ.ಕಾರನೂರ ಬಸವರಾಜ ಕವಿತಾಳ ಬಸನಗೌಡ ತಾಳಿಕೋಟೆ ಗೌಡಪ್ಪಗೌಡ ಬಿರಾದಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here