ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ : ಶಾಂತಿಯುತ ಮತದಾನ

0
184

ಶಹಾಬಾದ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನಡೆದ ಮತದಾನ ಪ್ರಕ್ರಿಯೆ ಬಹುತೇಖ ಶಾಂತಿಯುತವಾಗಿ ನಡೆದಿದ್ದು, ಶೇ 61.84 %ರಷ್ಟು ಮತದಾನವಾಗಿದೆ.

ಒಟ್ಟು 173 ಶಿಕ್ಷಕ ಮತದಾರರಲ್ಲಿ 107 ಮತದಾರರು ಮತ ಚಲಾಯಿಸಿದರು. 63 ಪುರುಷ ಮತದಾರರು ಮತ್ತು 44 ಮಹಿಳಾ ಮತದಾರರು ಮತ ಚಲಾಯಿಸಿದರು.

Contact Your\'s Advertisement; 9902492681

ನಗರದ ತಹಸೀಲ್ದಾರ ಕಾರ್ಯಾಲಯದ ಮತದಾನ ಕೇಂದ್ರದಲ್ಲಿ ಬೆಳಿಗ್ಗೆ 8ಗಂಟೆಗೆ ಮತದಾನ ಪ್ರಾರಂಭಗೊಂಡಿದ್ದು, ಬೆಳಗಿನ ಜಾವದಲ್ಲಿಯೇ ಶಿಕ್ಷಕ ಮತದಾರರು ಬಂದು ಬಿರುಸಿನ ಮತ ಚಲಾಯಿಸಿದರು. ಮಧ್ಯಾಹ್ನ ಹೊತ್ತಿಗೆ ಮತದಾನ ನೀರಸ ಪ್ರಕ್ರಿಯೆ ಕಂಡುಬಂದಿತು.ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಕೆಲವು ಶಿಕ್ಷಕರು ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದ್ದರಿಂದ ಅವರನ್ನು ಕರೆಯಿಸಿ ಮತದಾನ ಮಾಡಲು ವಿವಿಧ ರಾಜಕೀಯ ಪಕ್ಷಗಳು ಹರಸಾಹಸ ಪಟ್ಟರು.

ಕೆಲವು ಖಾಸಗಿ ಸಂಸ್ಥೆಗಳ ಕೆಲವು ಶಿಕ್ಷಕರನ್ನು ಮತ ಚಲಾಯಿಸುವಂತೆ ಹೇಳಿದರೂ ಮತ ಚಲಾಯಿಸುವಲ್ಲಿ ನಿರ್ಲಕ್ಷ್ಯ ತೋರಿದರು. ಬೆಳಿಗ್ಗೆ ಬೇಗನೆ ಬಂದು ಮತ ಚಲಾಯಿಸಿ ಬೇರೆ ಕೆಲಸಕ್ಕೆ ಹೋಗುವಂತ ದೃಶ್ಯ ಕಂಡುಬಂದಿತು. ಶಿಕ್ಷಕ ಮತದಾರರು ಮತದಾನ ಕೇಂದ್ರಕ್ಕೆ ಬರುವ ಸಂಖ್ಯೆ ಕಡಿಮೆಯಾಗಿದ್ದರೂ, ಒಬ್ಬೊಬ್ಬರಾಗಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.

ಮತಗಟ್ಟೆಯ ದೂರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಟೆಂಟ್ ಹೊಡೆದು ಮತದಾರರನ್ನು ಓಲೈಸಲು ನಿರತರಾಗಿದ್ದರು. ಮತದಾರರನ್ನು ಮತ ಕೇಂದ್ರಗಳಿಗೆ ಕರೆ ತರಲು ವಿವಿಧ ಪಕ್ಷಗಳು ವಾಹನಗಳ ವ್ಯವಸ್ಥೆ ಮಾಡಿದ್ದರು.ಅಲ್ಲದೇ ವಿವಿಧ ಪಕ್ಷದ ಮುಖಂಡರು ಮತದಾರರಿಗೆ ಕರೆ ಮಾಡಿ ಮತ ಚಲಾಯಿಸಲು ಹೇಳುತ್ತಿರುವುದು ಕಂಡು ಬಂದಿತು.ಅಲ್ಲದೇ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತಗಟ್ಟೆಗೆ ಬರುತ್ತಿದ್ದ ಶಿಕ್ಷಕ ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದ ದೃಶ್ಯಗಳು ಕಂಡು ಬಂದವು.

ಮತದಾನದ ವೇಳೆ ಸ್ಯಾನಿಟೈಜರ್, ಸ್ಕ್ರೀನಿಂಗ್ ಮೂಲಕ ಪರೀಕ್ಷೆ ನಡೆಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಮತ ಚಲಾಯಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವಾಯ್ಎಸ್ಪಿ ವೆಂಕನಗೌಡ ಪಾಟೀಲ, ಪಿಐ ಅಮರೇಶ.ಬಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here