ಕಲಬುರಗಿ: ಮಹಾನಗರ ಪಾಲಿಕೆಯ ಆಯುಕ್ತರು ನೇತೃತ್ವದಲ್ಲಿ ಸ್ಲಂನ ಕುಂದುಕೋರತೆಗಳ ಬಗ್ಗೆ ಸ್ಲಂ ಜನಾಂದೋಲನ ಸಂಘಟನೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.
ನಗರದಲ್ಲಿರುವ ಸ್ಲಂ ಘೋಷಣೆ ಯಾಗಿ ಸುಮಾರು ೫ವರ್ಷ ಕಳೆದರು ಇಲ್ಲಿಯವರೆಗೆ ಸ್ಲಂ ಘೋಷಣೆ ಪ್ರಕ್ರಿಯೆ ನಡೆದಿಲ್ಲ. ಮತ್ತು ೩೮ಸ್ಲಂಗಳು ೩ಪಿ ಅಡಿಯಲ್ಲಿ ಘೋಷಣೆ ಯಾಗಿ ಸುಮಾರು ೪೦ ವರ್ಷ ಆದರು ಸಹ ಇಲ್ಲಿಯವರೆಗೆ ೩ಎಫ್ ನಲ್ಲಿ ಘೋಷಣೆ ಮಾಡಿಲ್ಲ ಸೆಕ್ಷನ್ ೪ ಅನ್ವಯ ನೋಂದಣಿ ಪ್ರಮಾಣ ಪತ್ರ ವನ್ನು ಜಿಲ್ಲಾ ನೋಂದಣಿ ಕಛೆಯರಿಯಲ್ಲಿ ಅಥವಾ ಮಂಡಳಿಯ ಕಂದಾಯ ಇಲಾಖೆಯಲ್ಲಿ ದೃಢಿ ಕರಿಸಬೇಕೆಂದು ಸ್ಲಂ ಜನಾಂದೋಲನ ಸಂಘಟನೆಯ ಪದಾಧಿಕಾರಿಗಳು ಚರ್ಚೆ ಮಾಡಲಾಯಿತು.
ಪ್ರತಿ ಕೊಳಚೆ ಪ್ರದೇಶಗಳಲ್ಲಿ ಸಮುಹ ಶೌಚಾಲಯ ಗಳನ್ನು ನಿರ್ಮಾಣ ಮಾಡಬೇಕು. ಈಗಾಗಲೆ ಇದ್ದ ಶೌಚಾಲಯಗಳ ನಿರ್ವಹಣೆ ಮಾಡುವ ಬಗ್ಗೆ ಚರ್ಚಿಸಿದರು.
ಅದರಂತೆ ಪೈಲಟ ಯೋಜನೆಯ ಮನೆಗಳಲ್ಲಿ ೧೦೨೪ ರಲ್ಲಿ ೭೦೪ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಇನ್ನುಳಿದ ೩೨೦ ಮನೆಗಳನ್ನು ಸಂಪೂರ್ಣವಾಗಿ ಸ್ಲಂನಲ್ಲಿ ವಾಸಿಸುವ ಬಾಡಿಗೆದಾರರಿಗೆ ನೀಡಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಸಂಘಟನೆಯ ಸಂಚಾಲಕಿ ರೇಣುಕಾ ಸರಡಗಿ, ಸಂಘಟನಾ ಸಂಚಾಲಕರಾದ ವಿಕಾಸ ಸವಾರಿಕರ, ಬಸವರಾಜ ಪೂಜಾರಿ, ಖಜಾಂಚಿ ಗೌರಮ್ಮ ಮಾಕಾ, ಸುನಿತಾ ಕೂಲ್ಲೂರ, ಕೋಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಅರುಣಕುಮಾರ, ಮಹಾಶೆಟ್ಟಿ ಹಾಗೂ ಅಧಿಕಾರಿಗಳು ಇದ್ದರು.