“ಸಿಂಧ್ ಮಾದಿಗರ ಸಂಸ್ಕೃತಿ” ಪುಸ್ತಕ ನಿಷೇಧಿಸುವಂತೆ ಸುತಾರ ಆಗ್ರಹ

0
152

ಕಲಬುರಗಿ: ವಿಶ್ವಕರ್ಮ ಸಮಾಜದವರನ್ನು ಮಾದಿಗರ ಮೂಲದವರು ಹಾಗೂ ಅಸ್ಪೃಶ್ಯರು ಎಂದು ಕೋಟಗಾನಹಳ್ಳಿ ರಾಮಯ್ಯ ಇವರು ಬರೆದಿರುವ ಸಿಂಧ್ ಮಾದಿಗರ ಸಂಸ್ಕೃತಿ ಪುಸ್ತಕವನ್ನು ಕೂಡಲೇ ನಿಷೇಧಿಸಿ ರಾಮಯ್ಯ ಅವರು ಸಾರ್ವಜನಿಕವಾಗಿ ಬಹಿರಂಗ ಕ್ಷಮೆ ಕೇಳಬೇಕು ಎಂದು ವಿಶ್ವಕರ್ಮ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ದೇವಿಂದ್ರ ಜಿ. ಸುತಾರ ಅವರು ಆಗ್ರಹಿಸಿದರು.

ವಿಶ್ವಕರ್ಮ ಸಮಾಜವು ಹಳೆಯ ಪುರಾತನ ಹಾಗೂ ಸನಾತನ ಧರ್ಮವಾಗಿದೆ, ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಅವರು ಸಿಂಧ್ ಮಾದಿಗರ ಸಂಸ್ಕೃತಿ ಎಂಬ ಶೀರ್ಷಿಕೆಯ ಪುಸ್ತಕವನ್ನು ಬರೆದು ವಿಶ್ವಕರ್ಮ ಸಮುದಾಯವನ್ನು ಮಾದಿಗರ ಮೂಲದವರು ಹಾಗೂ ಅಸ್ಪೃಶ್ಯರು ಎಂದು ನಮೂದಿಸಿ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂದು ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ವಿಶ್ವಕರ್ಮ ಸಮುದಾಯದ ಬಗ್ಗೆ ಯಾವುದೇ ನಿಖರವಾದ ಇತಿಹಾಸದಲ್ಲಿ ಉಲ್ಲೇಖವೇ ಇಲ್ಲದ ವಿಷಯಗಳನ್ನು ತಮ್ಮ ಪುಸ್ತಕದಲ್ಲಿ ಇಲ್ಲ-ಸಲ್ಲದ ರೂಪದಲ್ಲಿ ಬರೆದು ವಿಶ್ವಕರ್ಮ ಜಾತಿಗೆ ಕಪ್ಪು ಮಸಿ ಬಳಿಯಲು ಯತ್ನಿಸಿರುತ್ತಾರೆ, ಆದ್ದರಿಂದ ಕನ್ನಡ ಸಾಹಿತ್ಯ ಪರಿಷತ್ತು ಪುಸ್ತಕದ ಮಾರಾಟವನ್ನು ಕೂಡಲೇ ತಡೆಹಿಡಿಯಬೇಕು ಮತ್ತು ಪುಸ್ತಕವನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕೆಂದು ಆಗ್ರಹಿಸಿದರು.

ಒಂದು ವೇಳೆ ಈ ವಿಷಯದ ಕುರಿತು ಕನ್ನಡ ಸಾಹಿತ್ಯ ಪರಿಷತ್ ಸದರಿ ಪುಸ್ತಕವನ್ನು ನಿಷೇಧಗೊಳಿಸದೇ ಹೋದಲ್ಲಿ ಮತ್ತು ಕೋಟಗಾನಹಳ್ಳಿ ರಾಮಯ್ಯ ಇವರು ಸಾರ್ವಜನಿಕವಾಗಿ ವಿಶ್ವಕರ್ಮ ಸಮಾಜಕ್ಕೆ ಕ್ಷಮೆ ಕೇಳದೇ ಹೋದಲ್ಲಿ ಮುಂಬರುವ ದಿನಗಳಳಲ್ಲಿ ವಿಶ್ವಕರ್ಮ ಹೋರಾಟ ಸಮಿತಿಯ ವತಿಯಿಂದ ಹಂತ ಹಂತವಾಗಿ ಕರ್ನಾಟಕ ರಾಜ್ಯಾದ್ಯಂತ, ವಿಶ್ವಕರ್ಮದ ಹಿರಿಯ ಮುಖಂಡರು, ರಾಜಕಾರಣಿಗಳು, ಮಠಾಧೀಶರು ಹಾಗೂ ವಿಶ್ವಕರ್ಮ ಚಿಂತಕರು, ಸಾಹಿತಿಗಳ ಒಳಗೊಂಡು ನಿರಂತರ ಹೋರಾಟವನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ವಿಶ್ವಕರ್ಮ ಹೋರಾಟ ಸಮಿತಿಯ ಅಧ್ಯಕ್ಷ ದೇವಿಂದ್ರ ಜಿ. ಸುತಾರ ಅವರು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here