ಸುರಪುರ: ನಗರದ ಸರಕಾರಿ ಪ್ರೌಢ ಶಾಲೆಯಲ್ಲಿ ಅನೇಕ ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ರೇವಣಸಿದ್ದಯ್ಯ ಸ್ಥಾವರಮಠ ನಿಧನರಾದರು.ಅವರಿಗೆ ೯೨ ವರ್ಷ ವಯಸ್ಸಾಗಿತ್ತು.ಪತ್ನಿ ೩ ಜನ ಗಂಡು ಹಾಗು ಒಬ್ಬಳು ಹೆಣ್ಣು ಮಗಳಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ನಿವೃತ್ತ ಎಸ್ಪಿ ಚಂದ್ರಕಾಂತ ಭಂಡಾರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು,ರೇವಣಸಿದ್ದಯ್ಯ ಸ್ಥಾವರಮಠರು ನನ್ನ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದು ಅವರು ಕಲಿಸಿದ ಇಂಗ್ಲೀಷ್ ಗ್ರಾಮರ್‌ನಿಂದಾಗಿ ಇಂದು ನಾವೆಲ್ಲ ಒಳ್ಳೆ ಹುದ್ದೆಗಳನ್ನು ಅಲಂಕರಿಸಲು ಕಾರಣವಾಗಿದೆ.ನಮ್ಮ ಈ ಮೆಚ್ಚಿನ ಶಿಕ್ಷಕರಿಂದ ಕಲಿತ ಅನೇಕರು ಇಂದು ಡಾಕ್ಟರ್ ಇಂಜಿನಿಯರ್ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿದ್ದಾರೆ.ಇಂದು ಅವರ ನಿಧನದ ಸುದ್ದಿ ತಿಳಿದು ದುಃಖವಾಗಿದೆ ಎಂದು ತಮ್ಮ ಸಂತಾಪ ಸೂಚಿಸಿದ್ದಾರೆ.
ಅಲ್ಲದೆ ಕಸಾಪ ಮಾಜಿ ಅಧ್ಯಕ್ಷ ಶಾಂತಪ್ಪ ಬೂದಿಹಾಳ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುರೇಶ ಸಜ್ಜನ್ ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ ರಾಜ್ಯ ಸಂಚಾಲಕ ಚಂದ್ರಶೇಖರ ಡೊಣೂರ ಜಿಲ್ಲಾಧ್ಯಕ್ಷ ಪ್ರದೀಫ ಕದರಾಪುರ ಬಸವರಾಜ ಬೂದಿಹಾಳ ಸೇರಿದಂತೆ ತಾಲೂಕಿನ ವೀರಶೈವ ಲಿಂಗಾಯತ ಸಮುದಾಯ ತೀವ್ರ ಸಂತಾಪ ಸೂಚಿಸಿದೆ.