ಶಹಾಬಾದ:ತಮಗಾಗಿ ಅಲ್ಲ, ಅನ್ಯರಿಗಾಗಿ ಬದುಕುವವರೇ ಮಹಾತ್ಮರು ಎಂಬ ಸ್ವಾಮಿ ವಿವೇಕಾನಂದರ ಸಿದ್ಧಾಂತವನ್ನು ಜೀವನದ ಉಸಿರಾಗಿಸಿಕೊಂಡ ಬದುಕಿದವರು ಸಿಸ್ಟರ್ ನಿವೇದಿತಾ.ಅವರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕೆಂದು ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಲಿಂಗರಾಜ ಬಿರಾದಾರ ಹೇಳಿದರು.
ಅವರು ಬುಧವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಲಾದ ಸಿಸ್ಟರ್ ನಿವೇದಿತಾ ಅವರ ಜನ್ಮದಿನದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಿವೇದಿತಾ ಅವರ ಮೂಲ ಹೆಸರು ಮಾರ್ಗರೆಟ್ ಎಲಿಜಬೆತಗ ನೊಬೆಲ್ ಅವರ ಸೇವಾ ಮನೋಭಾವನೆಯನ್ನು ಅರಿತು ವಿವೇಕಾನಂದರು ಅವರಿಗೆ ನಿವೇದಿತಾ ಎಂಬ ಹೆಸರನ್ನು ನೀಡಿದರು. ಅವರು ಜೀವನದಲ್ಲಿ ಎರಡು ಅಂಶಗಳನ್ನು ನಂಬಿದ್ದರು. ಒಂದು ವಿಶ್ವ ಕಲ್ಯಾಣಕ್ಕಾಗಿ ಶ್ರಮಿಸುವುದು.ಇನ್ನೊಂದು ಸತ್ಯಕ್ಕಾಗಿ ಹುಡುಕಾಟ.ಸರಳ ಜೀವನ ನಡೆಸುತ್ತಿದ್ದ ನಿವೇದಿತಾರವರು ಹೆಣ್ಣು ಮಕ್ಕಳಿಗಾಗಿ ಶಾಲೆ ಪ್ರಾರಂಭಿಸಿದ್ದರು.ಮಹಿಳೆಯರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.ಅಲ್ಲದೇ ಅವರು ಭಾರಯ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು.ಅವರು ಬರಹಗಳ, ಭಾಷಣಗಳ ಮುಳ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಯಾವುದೇ ಸೇವೆ ಮಾಡಲುದೇಶದ ಗಡಿ ಅಡ್ಡ ಬರಲಿಲ್ಲ.ಮಾನವ ಕುಲಕ್ಕೆ ಮಾಡುವ ಸೇವೆಯೇ ನಿಜವಾದ ಸೇವೆ ಎಂದು ನಂಬಿದ್ದರು ಎಂದು ಹೇಳಿದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಭಾಗಿರಥಿ ಗುನ್ನಾಪೂರ,ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ, ಮಹಿಳಾ ಮೋರ್ಚಾ ನಗರಾಧ್ಯಕ್ಷ ಜಯಶ್ರೀ ಸೂಡಿ, ಜಯಶ್ರೀ ಜಿಂಗಾಡೆ, ರತ್ನಮ್ಮ, ಆರತಿ, ಮಹಾಂತಮ್ಮ, ನೀಲಗಂಗಮ್ಮ, ಶಿಲ್ಪಾ,ಉಮಾಶ್ರೀ,ಸರಸ್ವತಿ, ರಾಜೇಶ್ವರಿ, ಚೆಲುವಿ, ಸುಖಲತಾ, ನಗರಸಭೆಯ ಸದಸ್ಯ ರವಿ ರಾಠೋಡ, ಮಂಡಲದ ಪ್ರಧಾನ ಕಾರ್ಯದರ್ಶಿ ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ,ಮಹಾದೇವ ಗೊಬ್ಬೂರಕರ್, ಬಸವರಾಜ ಮದ್ರಕಿ, ನಿಂಗಣ್ಣ ಹುಳಗೋಳಕರ್, ದುರ್ಗಪ್ಪ ಪವಾರ, ಸಂಜಯ ಸೂಡಿ, ಜಗದೇವ ಸುಭೇಧಾರ,ಕಾಶಣ್ಣ ಚನ್ನೂರ ಸೇರಿದಂತೆ ಅನೇಕ ಜನರು ಹಾಜರಿದ್ದರು.