ಆರ್.ಸಿ, ಡಿಸಿ ತಹಶೀಲ್ದಾರ ಮೇಲೆ ಕೇಸು ದಾಖಲು: ಡಾ. ಸರ್ದಾರ ರಾಯಪ್ಪ

0
121

ಕಲಬುರಗಿ: ಕೇಂದ್ರ ಸರಕಾರದ ಆದೇಶ ಹಾಗೂ ಸ್ಪಷ್ಟೀಕರಣದಂತೆ ರಾಜ್ಯ ಸರಕಾರ ಹೊರಡಿಸಿರುವ ಸುತ್ತೋಲೆಯ ಪ್ರಕಾರ ತಳವಾರ, ಪರಿವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಬೇಕು ಇಲ್ಲದಿದ್ದರೆ ಆರಸಿ,ಡಿಸಿ ಮತ್ತು ತಸಿಲ್ದಾರ ಮೇಲೆ ಕಲಂ 342 ಪ್ರಕಾರ ಕೇಸ್ ದಾಖಲು ಮಾಡುತ್ತೇವೆ ಎಂದು ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿಯ ಅಧ್ಯಕ್ಷರಾದ ಡಾ.ಸರ್ದಾರ ರಾಯಪ್ಪ ಆಗ್ರಹಿಸಿದರು.

ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಹಮ್ಮಿಕೊಂಡಿರುವ 68ನೇ ದಿನದ ಧರಣಿ ಸತ್ಯಾಗ್ರಹ ಹಾಗೂ 48ನೇ ಸರತಿ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದವರು, ರಾಜ್ಯಾದ್ಯಂತ ತಳವಾರ ಪರಿವಾರ ಸಮುದಾಯದವರು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಪಡೆಯುವುದಕ್ಕಾಗಿ ಕೂಡಲೇ ಅರ್ಜಿ ಸಲ್ಲಿಸಿ ಅದಕ್ಕೆ ರಾಜ್ಯ ಸರಕಾರದ 28-05-2020 ಮತ್ತು 31-08-2020ರ ಸುತ್ತೋಲೆಗಳು ಹಾಗೂ ಕೇಂದ್ರ ಸರಕಾರ ಸ್ಪಷ್ಟೀಕರಣ ನೀಡಿ 16-10-2020ರಂದು ಕಳುಹಿಸಿರುವ ಪತ್ರ ಅರ್ಜಿಗೆ ಲಗತ್ತಿಸಿ ಒಂದು ಕವರಿಂಗ್ ಲೆಟರ್ ಬರೆದು ನೇರವಾಗಿ ತಹಶೀಲ್ದಾರರಿಗೆ ಕೊಟ್ಟು ರಿಸೀವ್ಡ್ ತೆಗೆದುಕೊಳ್ಳಿ.

Contact Your\'s Advertisement; 9902492681

ತಹಶೀಲ್ದಾರರು ತಳವಾರ, ಪರಿವಾರ ಸಮುದಾಯ ಎಸ್.ಟಿ ಆಗೋಕಿಂತ ಮುಂಚೆ ಹೇಗೆ ಶಾಲಾ ದಾಖಲಾತಿಯ ಪ್ರಕಾರ ಕೊಡಲೇಬೇಕು. ಒಂದು ವೇಳೆ ಕೊಡದೇ ಹೋದಲ್ಲಿ ಸೂಕ್ತವಾದ ಕಾರಣ ಹೇಳಿ, ಕೊಡಲು ಬರುವುದಿಲ್ಲ ಎನ್ನುವುದಕ್ಕೆ ಸರಕಾರದ ಸುತ್ತೋಲೆ ಹಚ್ಚಿ ಸ್ಪಷ್ಟವಾದ ಹಿಂಬರ ಕೊಡಬೇಕು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಚೀಟಿಂಗ್ ಮಾಡಿದರೆ ತಾಸಿಲ್ದಾರರು ತಕ್ಷಣ ಕಾನೂನು ಕ್ರಮ ಕೈಗೊಂಡು ಯಾವ ಮುಲಾಜಿಲ್ಲದೆ ಅವರ ಮೇಲೆ ಕೆಎಸ್ ದಾಖಲಿಸಬಹುದು. ವಿನಾಕಾರಣ ಸರಕಾರದ ಯಾವುದು ಆದೇಶವಿಲ್ಲದೆ ನಮಗೆ ಸಿಗಬೇಕಾದ ಸೌಲಭ್ಯವನ್ನು ತಡೆಹಿಡಿದಿರುವ ತಲಾಟಿ ಇಂದ ಆರಿಸಿ ಅವರಿಗೆ ಎಲ್ಲಾ ಅಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಂತೆ ಕೇಸ್ ದಾಖಲಿಸುತ್ತೇವೆ.

ಅರ್ಜಿ ಸಲ್ಲಿಸುವರು ತಂಡ-ತಂಡವಾಗಿ ಒಟ್ಟಿಗೆ ಸೇರಿಕೊಂಡು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು. ರಾಜ್ಯ ಸರ್ಕಾರದ ಸುತ್ತೋಲೆಗಳು ಕೇಂದ್ರ ಸರ್ಕಾರದ ಸ್ಪಷ್ಟೀಕರಣ ಪತ್ರಗಳು ನಮ್ಮಲ್ಲಿವೆ. ಬೇಕಾದರೆ ನಮ್ಮನ್ನು ಸಂಪರ್ಕಿಸಿ ನಿಮಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ದಾಖಲಾತಿಗಳನ್ನು ನೀಡುತ್ತೇವೆ. ಅದಕ್ಕೆ ಬೇಕಾಗಿರುವ ಒಂದು ಮಾದರಿಯೇ ಅರ್ಜಿಯನ್ನು ತಯಾರು ಮಾಡಿ ಕೊಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶರಣ ಕೊತ್ತಲಪ್ಪ ಮುತ್ಯಾ ತೊನಸನಹಳ್ಳಿ ,ಸುನೀತಾ ತಳವಾರ್, ರಾಜೇಂದ್ರ ರಾಜವಾಳ, ದೇವೇಂದ್ರ ಚಿಗರಳ್ಳಿ, ರಾಜು ಸೊಪ್ಪಿ, ಚಂದ್ರಕಾಂತ್ ಗಂವ್ಹಾರ್, ಶರಣಪ್ಪ ನಾಟಿಕರ್, ಅಶೋಕ್ ಜಮಾದಾರ್, ಶರಣು ಎಸ್, ಮನೋಜ್ ತಳವಾರ್, ಸಂಗಮೇಶ್ ಕಪನೂರ್, ಅಂಬಣ್ಣ ನಾಯ್ಕೋಡಿ, ಮರಿಯಪ್ಪ ಜಮಾದಾರ್, ವಿಜಯಕುಮಾರ್ ಶಾಬಾದ್, ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here