ವಾಡಿ ರೈಲು ನಿಲ್ದಾಣದಲ್ಲಿ ವಾಲ್ಮಿಕಿ ಭಾವಚಿತ್ರ ಅನಾವರಣ

0
21

ವಾಡಿ: ಪಟ್ಟಣದ ರೈಲು ನಿಲ್ದಾಣದಲ್ಲಿ ಮಹರ್ಷಿ ವಾಲ್ಮೀಕಿ ಋಷಿಗಳ ಭಾವಚಿತ್ರ ಅನಾವರಣಗೊಳಿಸುವ ಮೂಲಕ ಬೇಡ ಸಮುದಾಯದ ಮುಖಂಡರು ವಾಲ್ಮೀಕಿ ಜಯಂತಿ ಆಚರಿಸಿದರು. ರೈಲ್ವೆ ಠಾಣೆಯ ಪಿಎಸ್‌ಐ ವೀರಭದ್ರಪ್ಪ ಹಾಗೂ ವಾಲ್ಮೀಕಿ ಸಮಾಜದ ಹಿರಯ ಮುಖಂಡ ಭೀಮರಾವ ದೊರೆ ಅವರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದರು.

ರೈಲು ನಿಲ್ದಾಣ ವ್ಯವಸ್ಥಾಪಕ ವಿವೇಕಕುಮಾರ, ಮಹರ್ಷಿ ವಾಲ್ಮೀಕಿ ಸಮಾಜದ ಮುಖಂಡರಾದ ಸುಭಾಷ ಚಾಮನೂರ, ಸಾಬಣ್ಣ ಮುಸ್ಲಾ, ಕರಣಪ್ಪ ದೇಸಾಯಿ, ಭಾಗಣ್ಣ ದೊರೆ, ಭೀಮಣ್ಣ ಹವಾಲ್ದಾರ, ಬೀಮರಾಯ ಅಂದೋಲಾ, ನಾಗರಾಜ ಜಮಾದಾರ, ವೆಂಕಟೇಶ ದೊರೆ, ದೇವಿಂದ್ರ ದೊರೆ, ವಿಜಯಕುಮಾರ ಚಟ್ಟಳ್ಳಿ, ಅಬ್ದುಲ್ ರಶೀದ್, ಹಣಮಂತರಾಯ, ಸುನೀಲ ದೊರೆ ಸೇರಿದಂತೆ ಚೈಲ್ಡ್‌ಲೈನ್ ಸಿಬ್ಬಂದಿಗಳು ಮತ್ತಿತರರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪುರಸಭೆ ಕಚೇರಿ: ನಗರ ಆಡಳಿತ ಸಂಸ್ಥೆ ಪುರಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಪೂಜೆ ನೆರವೇರಿಸಿದರು.

ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ವಾಲ್ಮೀಕಿ ಸಮಾಜದ ಮುಖಂಡ ಭೀಮರಾವ ದೊರೆ, ಪುರಸಭೆ ಸದಸ್ಯರಾದ ಪೃಥ್ವಿರಾಜ ಸೂರ್ಯವಂಶಿ, ಮಹ್ಮದ್ ಗೌಸ್, ದೇವಿಂದ್ರ ಕರದಳ್ಳಿ, ಭೀಮರಾಯ ಸುಬೇದಾರ, ಮರಗಪ್ಪ ಕಲಕುಟಗಿ, ಮುಖಂಡರಾದ ನಾಗೇಂದ್ರ ಜೈಗಂಗಾ, ತುಕಾರಾಮ ರಾಠೋಡ, ಶರಣಪ್ಪ ವಾಡೇಕರ ಪಾಲ್ಗೊಂಡಿದ್ದರು. ಸಿಬ್ಬಂದಿ ಮಲ್ಲಿಕಾರ್ಜುನ ಯಳಸಂಗಿ ನಿರೂಪಿಸಿ, ವಂದಿಸಿದರು.

ಬಿಜೆಪಿ ಕಚೇರಿ: ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರು ಮಹರ್ಷಿ ವಾಲ್ಮಿಕಿ ಜೀವನ ಕುರಿತು ವಿವರಿಸಿದರು. ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಯುವ ಮೋರ್ಚಾ ಅಧ್ಯಕ್ಷ ರವಿ ಕಾರಬಾರಿ, ಪುರಸಭೆ ಸದಸ್ಯ ಭೀಮಶಾ ಜಿರೊಳ್ಳಿ, ಭೀಮರಾಯ ಸುಬೇದಾರ, ಹರಿ ಗಲಾಂಡೆ, ಗಿರಿಮಲ್ಲಪ್ಪ ಕಟ್ಟಿಮನಿ, ಕಿಶನ ಜಾಧವ, ರಿಚ್ಚರ್ಡ್ ಮರೆಡ್ಡಿ, ದೌಲತರಾವ ಚಿತ್ತಾಪುರಕರ, ಅಂಬಾದಾಸ ಜಾಧವ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here