ಶಹಾಪುರ: ಮಹಾಕಾವ್ಯ ರಾಮಾಯಣದ ಸೃಷ್ಟಿಕರ್ತ ಮಹರ್ಷಿ ವಾಲ್ಮೀಕಿಯಾಗಿದ್ದು.ಇದು ಸಂಪೂರ್ಣ ಸಂಸ್ಕೃತ ಭಾಷೆಯಲ್ಲಿರುವುದರಿಂದ ಅವರನ್ನು ಆದಿಕವಿ ಎಂತಲೂ ಕರೆಯುತ್ತಾರೆ ಎಂದು ಬಸವರಾಜ ಭಂಗಿ ಹೇಳಿದರು.
ಶಹಾಪುರ ತಾಲ್ಲೂಕಿನ ಕೊಳ್ಳೂರು ಗ್ರಾಮದಲ್ಲಿ ಶಾಲೆಯಲ್ಲಿಹಮ್ಮಿಕೊಂಡಿರುವ ವಾಲ್ಮೀಕಿ ಜಯಂತಿ ಆಚರಣೆ ಯಲ್ಲಿ ಭಾಗವಹಿಸಿ ಮಾತನಾಡಿದರು.ರಾಮಾಯಣದ ಮೂಲಕ ಜೀವನದ ಮೌಲ್ಯ ಜಗತ್ತಿಗೆ ಪಸರಿಸಿದ ಆದಿಕವಿ ಮಹರ್ಷಿ ವಾಲ್ಮೀಕಿಯ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಪಡಿಸಿದರು.
ಗ್ರಾಮದ ಮುಖಂಡರಾದ ಹಣಮಂತ್ರಾಯ ಬೆನಕಲ ಮಾತನಾಡುತ್ತಾ ಪ್ರತಿಯೊಬ್ಬರು ಜೀವನದಲ್ಲಿ ಮಹರ್ಷಿ ವಾಲ್ಮೀಕಿಯ ತತ್ವಾದರ್ಶಗಳನ್ನು ಪಾಲಿಸಿಕೊಂಡು ನಡೆದಾಗ ಮಾತ್ರ ಬದುಕು ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು.ತಪ್ಪು ಮಾಡೋದು ಸಹಜ ಕಣೋ ತಿದ್ದಿ ನಡೆಯೋನು ಮನುಜ ಕಣೋ ಎಂಬಂತೆ ಬದುಕಬೇಕು ಎಂದು ನುಡಿದರು.
ನಂತರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಿತು ಡೊಳ್ಳು ಬಾಜಾಭಜಂತ್ರಿ ಸಮೇತ ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಆಚರಿಸಲಾಯಿತು.ಈ ಸಂದರ್ಭ ಮಲ್ಲಮ್ಮ ಮಲ್ಲಪ್ಪ ಗಟ್ಟಿ,ರಾಮು ನಾಯಕ,ರಾಘವೇಂದ್ರ ಹೊಸಪೇಟೆ,ಮಹೇಶ್ ಬಂಗಿ ಮತ್ತು ವಾಲ್ಮೀಕಿ ಯುವಕ ಸಂಘದ ಸದಸ್ಯರು ಹಾಗೂ ಗ್ರಾಮದ ಯುವಕರು ಪಾಲ್ಗೊಂಡಿದ್ದರು.