ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ನವೆಂಬರ್ 10ಕ್ಕೆ ಮುಂದೂಡಿಕೆ

0
66

ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಅಕ್ಟೋಬರ್ 28 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನವೆಂಬರ್ 2ರ ಬದಲಾಗಿ ನ.10ಕ್ಕೆ ಮುಂದೂಡಲಾಗದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ ತಿಳಿಸಿದ್ದಾರೆ.

ನ.10 ರಂದು ಬೆಳಿಗ್ಗೆ 8 ಗಂಟೆಯಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಪೂರ್ವ ನಿಗದಿಯಂತೆ ಇದೇ‌ ನವೆಂಬರ್ 2 ಕ್ಕೆ ಮತ ಎಣಿಕೆ ಕಾರ್ಯ ನಡೆಯಬೇಕಿತ್ತು. ಇದೀಗ ಭಾರತ ಚುನಾವಣಾ ಆಯೋಗವು ನ.2 ರ ಬದಲಾಗಿ ನ.10 ರಂದು ಮತ ಎಣಿಕೆ ನಡೆಸುವಂತೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ನ.10ಕ್ಕೆ‌ ಮತ ಎಣಿಕೆ‌ ಕಾರ್ಯ ನಡೆಯಲಿದೆ ಎಂದು ಡಾ.ಎನ್.ವಿ‌.ಪ್ರಸಾದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here