ಸುರಪುರ: ತಹಸೀಲ್ ಕಚೇರಿಯಲ್ಲಿ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಣೆ

0
46

ಸುರಪುರ: ನಗರದ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಸರಳವಾಗಿ ೬೫ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ತಹಸೀಲ್ ಕಚೇರಿಯಲ್ಲಿ ಆವರಣದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಧ್ವಜಾರೋಹಣ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಮಾತನಾಡಿ,ನಮ್ಮ ಹೆತ್ತ ತಾಯಿಯಷ್ಟೆ ಗೌರವವನ್ನು ನಾವು ನಾಡು ನುಡಿಗೆ ನೀಡಬೇಕು,ಕನ್ನಡ ಭಾಷೆ ಇಲ್ಲದಿದ್ದರೆ ನಾಡಿನ ಜನರು ಬದುಕಲು ಸಾಧ್ಯವಾಗದು.ಅಲ್ಲದೆ ಕನ್ನಡ ಭಾಷೆಯು ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸವನ್ನು ಹೊಂದಿದ್ದು ದೇಶದಲ್ಲಿ ೮ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಏಕೈಕ ಭಾಷೆ ಮತ್ತು ನಾಡು ಎಂದರೆ ಅದು ಕನ್ನಡವಾಗಿದೆ.ಇಂತಹ ಪುಣ್ಯದ ನೆಲೆದಲ್ಲಿ ನೆಲಸಿರುವ ನಾವುಗಳು ಧನ್ಯರು. ಆದ್ದರಿಂದ ನಾವೆಲ್ಲರು ಸದಾಕಾಲ ಕನ್ನಡ ನಾಡು ನುಡಿಯ ಸೇವೆಗೆ ಪ್ರಥಮ ಆದ್ಯತೆ ನಿಡೋಣ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ತಹಸೀಲ್ ಸಿಬ್ಬಂದಿಗಳಾದ ಕೊಂಡಲ್ ನಾಯಕ ಸೋಮನಾಥ ನಾಯಕ ಸೋಮಶೇಖರ ಪತ್ತಾರ ಪ್ರದೀಪ ನಾಲ್ವಡೆ ಹಾಗು ಮುಖಂಡರಾದ ವಿರುಪಾಕ್ಷಿ ಕೋನಾಳ ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಭೀಮು ನಾಯಕ ಮಲ್ಲಿಬಾವಿ ಶಿವಮೋನಯ್ಯ ನಾಯಕ ಅಂಬ್ಲಯ್ಯ ಬೇಟೆಗಾರ ಸೇರಿದಂತೆ ಅನೇಕ ಜನ ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here