ಬುದ್ಧ ಬೆಳಗಿಸಿದ ಜ್ಞಾನದೀಪ ಶಾಂತಿಗಾಗಿ ಹಚ್ಚೋಣ: ಧಮ್ಮ ಪರಿವರ್ತನಾ ಮಾಸಾಚರಣೆ

0
46

ವಾಡಿ: ಜಗತ್ತಿನ ಅಂಧಕಾರ ಅಳಿಸಲು ಗೌತಮ ಬುದ್ಧರು ಪ್ರಜ್ಞೆಯ ಮಾರ್ಗ ಹುಡುಕುವ ಮೂಲಕ ಜ್ಞಾನದೀಪ ಬೆಳಗಿಸಿದರು. ಸಮಾಜದ ಶಾಂತಿಗಾಗಿ ನಾವು ಶೋಷಿತರು ಮನ ಮನೆಗಳಲ್ಲಿ ಧಮ್ಮ ಜ್ಯೋತಿ ಹಚ್ಚೋಣ ಎಂದು ಬೌದ್ಧ ಭಿಕ್ಕು ಬುದ್ದರತ್ನ ಭಂತೇಜಿ ನುಡಿದರು.

ಡಾ.ಬಿ.ಆರ್.ಅಂಬೇಡ್ಕರ್ ತರುಣ ಸಂಘದ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ರವಿವಾರ ಏರ್ಪಡಿಸಲಾದ ಧಮ್ಮ ಪರಿವರ್ತನಾ ಮಾಸಾಚರಣೆಯ ತಿಂಗಳ ಧಮ್ಮ ದೀಪ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಮಾನಸಿಕ ಗುಲಾಮಗಿರಿಯಲ್ಲಿ ಬದುಕುತ್ತಿರುವ ದಲಿತರು, ಅಂಬೇಡ್ಕರರ ಅಭಿಮಾನಿಗಳಾಗುತ್ತಿದ್ದಾರೆ ಹೊರೆತು ಧಮ್ಮಚಕ್ರ ಮುನ್ನೆಡೆಸುವ ಅನುಯಾಯಿಗಳಾಗುತ್ತಿಲ್ಲ. ಬುದ್ಧ ಮತ್ತು ಬಾಬಾಸಾಹೇಬರ ಭಾವಚಿತ್ರಗಳೊಂದಿಗೆ ಹಿಂದೂ ದೇವ ದೇವತೆಗಳ ಭಾವಚಿತ್ರಗಳನ್ನಿಟ್ಟು ಪೂಜಿಸುವ ಮೂಲಕ ಬುದ್ಧ ಭೀಮರ ಆಶಯಗಳಿಗೆ ಧಕ್ಕೆಯುಂಟುಮಾಡುತ್ತಿದ್ದಾರೆ ಎಂದು ಅಸಮಾದಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಬಾಬಾಸಾಹೇಬರು ಕಂಡ ಪ್ರಭುದ್ಧ ಭಾರತ ನಿರ್ಮಾಣ ಕನಸು ಕೇವಲ ಭಂತೇಜಿಗಳಿಂದ ಮಾತ್ರ ಸಾಧ್ಯವಿಲ್ಲ. ಪ್ರತಿಯೊಬ್ಬ ಶೋಷಿತನೂ ಪ್ರಜ್ಞೆಯ ಮಾರ್ಗ ತುಳಿಯಬೇಕು. ಬೌದ್ಧ ಭಿಕ್ಕುಗಳ ಹೊರೆತಾಗಿಯೂ ಬುದ್ಧನ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸುವ ನಾಯಕರು ಮತ್ತು ವೇದಿಕೆಗಳು ಹುಟ್ಟಿಕೊಳ್ಳಬೇಕು. ಶಾಹುಮಹಾರಾಜ್, ಜ್ಯೋತಿಬಾಫುಲೆ, ಸಾವಿತ್ರಿಬಾಯಿ ಫುಲೆ ಅವರಂತಹ ಸಮಾಜ ಸುಧಾರಕರು ಈ ವ್ಯವಸ್ಥೆಯಿಂದಲೇ ಹುಟ್ಟಿಕೊಳ್ಳಬೇಕು. ಹಿಂದೂ ಧರ್ಮದಲ್ಲಿ ನಾನು ಸಾಯುವುದಿಲ್ಲ ಎಂಬ ಕಠಿಣ ತೀರ್ಮಾನ ಕೈಗೊಂಡು ಪರಿಪೂರ್ಣ ಬೌದ್ಧರಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.

ಬೌದ್ಧ ಉಪಾಸಕರಾದ ಸಂತೋಷ ಜೋಗೂರ, ರವಿ ಕೋಳಕೂರ ಮಾತನಾಡಿದರು. ಅಂಬೇಡ್ಕರ್ ಗೀತೆಗಳನ್ನು ಪ್ರಸ್ತುತಪಡಿಸಿದ ಯುವ ಗಾಯಕ ಸಿದ್ಧಾರ್ಥ ಚಿಮ್ಮಾಯಿದಲಾಯಿ ಅವರನ್ನು ಹಾಗೂ ಒಂದು ತಿಂಗಳ ಕಾಲ ಧಮ್ಮದೀಪ ಬೆಳಗಲು ಅವಕಾಶ ನೀಡಿದವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷ ಸಂದೀಪ ಕಟ್ಟಿ, ಬೌದ್ಧ ಸಮಾಜದ ಕಾರ್ಯಾಧ್ಯಕ್ಷ ಇಂದ್ರಜೀತ ಸಿಂಗೆ, ಕಾರ್ಯದರ್ಶಿ ಶರಣಬಸು ಸಿರೂರಕರ, ಮುಖಂಡರಾದ ಸುರೇಶ ಬನಸೋಡೆ, ಖೇಮಲಿಂಗ ಬೆಳಮಗಿ, ದಶರಥ ಗಾಯಕವಾಡ, ಮಾರುತಿ ಗೋಪಾಳೆ, ಗೌತಮ ಕಟ್ಟಿ, ಮಲ್ಲಿಕಾರ್ಜುನ ಕಟ್ಟಿ, ಬಾಬು ಮಂಗಳೂರಕರ ಪಾಲ್ಗೊಂಡಿದ್ದರು. ಸಂತೋಷ ಕೋಮಟೆ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here