ಹಿರೇಮಠ ಸಂಸ್ಥಾನದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

0
19

ಭಾಲ್ಕಿ: ಕನ್ನಡ ನಾಡು ನುಡಿಯ ರಕ್ಷಣೆಗಾಗಿ ಹಿರೇಮಠ ಸಂಸ್ಥಾನದ ಕೊಡುಗೆ ಸ್ವಾತಂತ್ರ್ಯ ಪೂರ್ವಕ್ಕಿಂತಲೂ ಇಲ್ಲಿಯವರೆಗೆ ನಿರಂತರವಾಗಿ ನಡೆದಿದೆ. ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ನಿಜಾಮನ ಆಳ್ವಿಕೆಯಲ್ಲಿ ಹೊರಗಡೆ ಉರ್ದುಬೋರ್ಡ ಹಾಕಿ ಒಳಗೆ ಕನ್ನಡ ಕಲಿಸಿದರು. ಗಡಿಭಾಗದ ಬಡಮಕ್ಕಳಿಗೆ ಪ್ರಸಾದ ನಿಲಯವನ್ನು ಸ್ಥಾಪಿಸಿ, ಮುಷ್ಠಿಫಂಡ ಮೂಲಕ ಕನ್ನಡ ಶಿಕ್ಷಣ ನೀಡಿದರು.

ಅದೇ ಪರಂಪರೆಯನ್ನು ಮುಂದೂಡಿಸಿಕೊಂಡು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಈಗಿನ ಇಂಗ್ಲೀಷ ಶಿಕ್ಷಣ ಹಾವಳಿಯಲ್ಲಿಯೂ ಸುಮಾರು ೪೦ ಕನ್ನಡ ಮಾಧ್ಯಮದ ಶಾಲೆಗಳು ಪ್ರಾರಂಭಿಸುವ ಮೂಲಕ ಕನ್ನಡ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುತ್ತಿದ್ದಾರೆ ಎಂದು ಪೂಜ್ಯ ಗುರುಬಸವ ಪಟ್ಟದ್ದೇವರು ನುಡಿದರು. ಹಿರೇಮಠ ಸಂಸ್ಥಾನದಲ್ಲಿ ಕನ್ನಡ ರಾಜ್ಯೋತ್ಸವದ ದಿವ್ಯಸನ್ನಿಧಾನವಹಿಸಿದ ಆಶೀರ್ವದಿಸಿದರು.

Contact Your\'s Advertisement; 9902492681

ಭಾಲ್ಕಿಯ ತಹಸೀಲ್ದಾರರಾದ ಶ್ರೀ ಅಣ್ಣಾರಾವ ಪಾಟೀಲ ಅವರಿಂದ ರಾಷ್ಟ್ರಧ್ವಜಾರೋಹಣ ನೇರವರಿಸಿದರು. ಕು.ಸಾಗರ ಈಶ್ವರ ಖಂಡ್ರೆ ಅವರಿಂದ ಕರ್ನಾಟಕದ ಧ್ವಜಾರೋಹಣ ನೇರರಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಶಿಧರ ಕೋಸಂಬೆ, ಶಿವಶರಣ ಬಿರಾದಾರ, ಸಂಗಮೇಶ ಹುಣಜೆ, ವಿಜಯಕುಮಾರ ರಾಜಭವನ, ಅಶೋಕ ಮೈನ್ನಳ್ಳೆ, ಜಯಶ್ರೀ ಸುಕಾಲೆ, ರಾಜಕುಮಾರ ಪಾಟೀಲ ಕರಡ್ಯಾಳ ಗಣ್ಯಮಾನ್ಯರು ಮತ್ತು ಗುರುಪ್ರಸಾದ ಶಾಲೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here