ರಾಜ್ಯೋತ್ಸವ ನಿರ್ಲಕ್ಷ್ಯ: ಜಿಟಿಟಿ ಸಂಸ್ಥೆ ವಿರುದ್ಧ ಪ್ರತಿಭಟನೆ

0
106

ಕಲಬುರ್ಗಿ: ನಗರದ ರಾಜಾಪೂರ್ ರಸ್ತೆಯಲ್ಲಿರುವ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದ ಹಿಂದೆ ಇರುವ ಜರ್ಮನ್ ತಾಂತ್ರಿಕ ಸಂಸ್ಥೆ (ಜಿಟಿಟಿ)ಯಲ್ಲಿ ಭಾನುವಾರ ೬೫ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿಲ್ಲ ಎಂದು ಆರೋಪಿಸಿ ಭಾರತೀಯ ಪ್ರಜಾಸೇನೆ ಅಂಬೇಡ್ಕರ್ ವಾದ ಸಂಘಟನೆಯ ಕಾರ್ಯಕರ್ತರು ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ತಹಸಿಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸಂಸ್ಥೆಯ ಕಚೇರಿಯಲ್ಲಿ ರಾಜ್ಯೋತ್ಸವದಂದು ರಾಷ್ಟ್ರಧ್ವಜಾರೋಹಣ ನೆರವೇರಿಸದೇ, ಕನ್ನಡಾಂಭೆಯ ಭಾವಚಿತ್ರ ಇಡದೇ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಅದೇ ರೀತಿ ಕಲ್ಯಾಣ ಕರ್ನಾಟಕ ಉತ್ಸವವನ್ನೂ ಸಹ ಮಾಡಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಗೂಂಡಾ ಪ್ರವೃತ್ತಿಯೊಂದಿಗೆ ಕಾಲಹರಣ ಮಾಡುತ್ತಿರುವ ಸಂಸ್ಥೆಯ ನಿರ್ದೇಶಕರು ಹಾಗೂ ಇಲಾಖೆಯ ಮುಖ್ಯಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸಂಘಟನೆಯ ದತ್ತು ಭಜಂತ್ರಿ ಹಾಗೂ ಜಿಲ್ಲಾ ಯುವ ಘಟಕದ ಅಧ್ಯಕ್ಷ ಯಶವಂತ್ (ಯಲ್ಲಾಲಿಂಗ್), ಸಂಜಯ್ ಗುತ್ತೇದಾರ್, ಮೋಹನ್ ಆಳಂದಕರ್, ಭಗವಂತ್ ಜಮಾದಾರ್, ಅಶೋಕ್ ಗುಲ್ಲಾವಾಡಿ, ರಾಮ್‌ಜ್ಯೋತಿ ಜಮಾದಾರ್, ರಾಜಶೇಖರ್ ತಳವಾರ್, ಬಾಬು ಬಜಂತ್ರಿ, ಅಭಿಜಿತ್ ಭಂತೆಕರ್, ಪ್ರಭಾಕರ್ ಮಾನ್ಯ ಮುಂತಾದವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here