ಕಲಬುರಗಿ: ಅಂಚೆ ವಿಭಾಗದಿಂದ 2020ರ ನವೆಂಬರ್ 1 ರಿಂದ 30ರವರೆಗೆ ಸುಕನ್ಯಾ ಸಮೃದ್ಧಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿ 10 ವರ್ಷದೊಳಗಿನ ಹೆಣ್ಣು ಮಕ್ಕಳ ಪಾಲಕರು, ಪೋಷಕರು ಖಾತೆಯನ್ನು ತೆರೆಯಬಹುದಾಗಿದೆ ಎಂದು ಕಲಬುರಗಿ ಅಂಚೆ ವಿಭಾಗದ ವರಿಷ್ಠ ಅಂಚೆ ಅಧೀಕ್ಷಕ ಬಿ.ಆರ್. ನನಜಗಿ ಅವರು ತಿಳಿಸಿದ್ದಾರೆ.
ನವಜಾತ ಶಿಶುವಿನಿಂದ 10 ವರ್ಷದೊಳಗಿನ ಎಲ್ಲಾ ಹೆಣ್ಣು ಮಕ್ಕಳಿಗೆ ಈ ಯೋಜನೆ ಅನ್ವಯವಾಗಲಿದೆ. ಹೆಣ್ಣು ಮಕ್ಕಳ ಪಾಲಕರು ಆರಂಭಿಕ ಮೊತ್ತ 250 ರೂ.ಗಳಿಂದ ಖಾತೆ ತೆರೆಯಬಹುದಾಗಿದೆ. ಒಂದು ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ. ಜಮೆ ಮಾಡಬಹುದಾಗಿದೆ. ಈ ಯೋಜನೆಯು ತೆರಿಗೆ ವಿನಾಯಿತಿಗೆ ಒಳಪಟ್ಟಿದೆ. ಈ ಖಾತೆಯು ಅವಧಿ 21 ವರ್ಷ ಇರುತ್ತದೆ.
ಹೆಣ್ಣು ಮಕ್ಕಳ ವಯಸ್ಸು 18ರ ನಂತರ ಮರಳಿ ಹಣ ಪಡೆಯಬಹುದಾಗಿದೆ. ಆಸಕ್ತ ಹೆಣ್ಣು ಮಕ್ಕಳ ಪಾಲಕರು, ಪೋಷಕರು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಅಂಚೆ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-263800ಗೆ ಸಂಪರ್ಕಿಸಲು ಕೋರಲಾಗಿದೆ.