ಸುರಪುರ: ಕರ್ನಾಟಕ ನವ ನಿರ್ಮಾಣ ವೇದಿಕೆ ಹಾಗು ಶರಣ ಸೇವಾ ಸಂಸ್ಥೆಯಿಂದ ನಗರದ ಬಸ್ ಡಿಪೋ ಬಳಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರುನಾಡ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರುಕ್ಮಾಪುರ ಹಿರೇಮಠ ಸಂಸ್ಥಾನದ ಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ನಗರಸಭೆ ನೂತನ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿಯವರು ಮಾತನಾಡಿ,ಮಹರ್ಷಿ ವಾಲ್ಮೀಕಿಯವರು ಜಗತ್ತೆ ಆರಾಧಿಸುವಂತೆ ರಾಮಾಯಣ ಗ್ರಂಥವನ್ನು ರಚಿಸಿ ಜಗತ್ತಿಗೆ ಮಾದರಿಯಾಗಿದ್ದಾರೆ.ಅದರಂತೆ ಇಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರಲ್ಲಿ ಕನ್ನಡ ಜಾಗೃತಿ ಮೂಡಿಸಲು ಮುಂದಾಗಿರುವ ಕರ್ನಾಟಕ ನವ ನಿರ್ಮಾಣ ವೇದಿಕೆ ಹಾಗು ಶರಣ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನಿಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರ ಯೋಜನಾ ಪ್ರಾಧಿಕಾರಿದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ,ಜಗತ್ತಿಗೆ ಶರಣ ಸಾಹಿತ್ಯ ಮತ್ತು ದಾಸ ಜನಪದ ಹಾಗು ಇನ್ನೂ ಅನೇಕ ಪ್ರಕಾರದ ಸಾಹಿತ್ಯಗಳ ಮೂಲಕ ಚಿರಪರಿಚಿತವಾಗಿರುವ ಕನ್ನಡ ಭಾಷೆ ನಮ್ಮದು.ಕನ್ನಡ ನೆಲ ದೇಶಕ್ಕೆ ಮಾದರಿಯಾದುದಾಗಿದೆ.ಇಂತಹ ನಾಡಿನಲ್ಲಿ ನಾವೆಲ್ಲರು ಜನಸಿರುವುದು ನಮ್ಮ ಪುಣ್ಯವಾಗಿದೆ.ಆದ್ದರಿಂದ ಕನ್ನಡಿಗರಾದ ನಾವೆಲ್ಲರು ಈ ನಾಡು ನುಡಿ ಸಂಸ್ಕೃತಿಯ ಉಳಿವಿಗಾಗಿ ಸೇವೆ ಮಾಡೋಣ ಎಂದರು.
ಇದೇ ಸಂದರ್ಭದಲ್ಲಿ ಅನೇಕ ಜನ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಯಕರ್ನಾಟಕ ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ ರಾಮ್ ಸೇನಾ ಅಧ್ಯಕ್ಷ ಶರಣು ನಾಯಕ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಸಂಚಾಲಕ ಚಂದ್ರಶೇಖರ ಡೊಣೂರ ಕಾಯಕ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಾಗಭೂಷಣ ಯಾಳಗಿ ಆಕಾಶ ಕಟ್ಟಿಮನಿ ವೇದಿಕೆ ಮೇಲಿದ್ದರು.ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷ ಶಿವರಾಜ ಕಲಕೇರಿ ನೇತೃತ್ವವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾಸುದೇವ ನಾಯಕ ಆನಂದ ಮಡ್ಡಿ ಮಲ್ಲಿಕಾರ್ಜುನ ಸುಬೇದಾರ ದೇವು ನಾಯಕ ಆನಂದ ನಾಯಕ ದಾಸೇಗೌಡ ಶಿವು ಹೂಗಾರ ಮಂಜುನಾಥ ಬ್ಯಾಳಿ ವೆಂಕಟೇಶ ನಾಯಕ ವಿಶಾಲ್ ಬಸನಗೌಡ ಬಿರನೂರ ಗಂಗಾ ಡೊಣೂರ ಸ್ಪೂರ್ಥಿ ಕಲಕೇರಿ ಶ್ರೀ ಶಾಂತಾ ಸೇರಿದಂತೆ ಅನೇಕರಿದ್ದರು.