ಸುರಪುರ: ಜಯಕರ್ನಾಟಕ ಸಂಘಟನೆಯ ಸುರಪುರ ತಾಲೂಕು ಘಟಕದಿಂದ ತಾಲೂಕಿನ ಶಿಬಾರಬಂಡಿ ಗ್ರಾಮದ ಮಹಿಳೆಯರಿಗೆ ಬಟ್ಟೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ರವಿಕುಮಾರ ನಾಯಕ ಬೈರಿಮಡ್ಡಿ ಮಾತನಾಡಿ,ನಮ್ಮ ಸಂಘಟನೆ ರಾಜ್ಯಾಧ್ಯಕ್ಷರಾದ ಬಿ.ಎನ್.ಜಗದೀಶ ಅವರ ಮಾರ್ಗದರ್ಶನ ಹಾಗು ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಗೋಪಾಲ ಅವರ ನೆರವಿನಲ್ಲಿ ಇಂದು ಶಿಬಾರಬಂಡಿ ಗ್ರಾಮದ ಬಡ ಜನತೆಗೆ ಬಟ್ಟೆಗಳನ್ನು ವಿತರಿಸಲಾಗುತ್ತಿದೆ.ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಸೀರೆ ರವಿಕೆ ವಿತರಿಸುವ ಮೂಲಕ ಬಡ ಜನತೆಯ ನೆರವಿಗೆ ಸಂಘಟನೆ ನಿಲ್ಲುತ್ತಿದೆ ಎಂದರು.
ನಗರ ಘಟಕದ ಕಾರ್ಯಾಧ್ಯಕ್ಷ ಯಲ್ಲಪ್ಪ ಕಲ್ಲೋಡಿ ಮಾತನಾಡಿ,ಜಯಕರ್ನಾಟಕ ಸಂಘಟನೆ ಸದಾಕಾಲ ಜನರೊಂದಿಗೆ ಇರಲಿದೆ.ಕೇವಲ ಹೋರಾಟ ಮಾತ್ರವಲ್ಲದೆ ಅನೇಕ ಜನಪರವಾದ ಕೆಲಸಗಳನ್ನು ಮಾಡುತ್ತಾ ಬಂದಿದೆ ಅದರಂತೆ ಇಂದು ನಮ್ಮ ಗ್ರಾಮದಲ್ಲಿ ಜನರಿಗೆ ಬಟ್ಟೆ ವಿತರಿಸುವ ಮೂಲಕ ಜನರೊಂದಿಗೆ ಸಂಘಟನೆ ಸದಾಕಾಲ ಇರಲಿದೆ ಎಂದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ಶಿಬಾರಬಂಡಿ ತಾಲೂಕು ಕಾರ್ಯಾಧ್ಯಕ್ಷ ಶರಣು ಬೈರಿಮಡ್ಡಿ ರಾಘವೇಂದ್ರ ಗೋಗಿಕೇರಾ ರವಿ ಹುಲಕಲ್ ಗ್ರಾಮ ಘಟಕದ ಅಧ್ಯಕ್ಷ ಅಂಬರೇಶ ಪೂಜಾರಿ ರಂಗನಾಥ ರಾಮಬಾಣ ಸೇರಿದಂತೆ ಅನೇಕರಿದ್ದರು.