ಗ್ರಾಮ ಪಂಚಾಯತಗಳಿಗೆ ಶೀಘ್ರ ಚುನಾವಣೆ ಘೋಷಿಸಿ

0
79

ಕಲಬುರಗಿ: ಕರ್ನಾಟಕದಲ್ಲಿ ಈಗಾಗಲೇ ಚುನಾವಣಾ ಪರ್ವ ಆರಂಭವಾಗಿರುವ ಬೆನ್ನಲ್ಲೇ ಒಂದರ ಮೇಲೊಂದರಂತೆ ಚುನಾವಣೆಗಳು ನಡೆಯುತ್ತಿರುವುದು ಸಂತೋಷದ ವಿಷಯ. ಆದರೆ ಈಗಾಗಲೇ ಗ್ರಾಮ ಪಂಚಾಯತ್ ಅವಧಿ ಮುಗಿದು ಐದು ತಿಂಗಳು ಕಳೆದರು ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಸರಕಾರ ಆಸಕ್ತಿ ತೋರಿಸದೆ ನಿರ್ಲಕ್ಷಿಸಿ ಈವರೆಗೂ ಚುನಾವಣಾ ದಿನಾಂಕ ಘೋಷಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಶರಣು ಹೊಸಮನಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಹೇಳಿಕೆ ನೀಡಿದ ಅವರು , ಗ್ರಾಮೀಣ ಭಾಗಗಳಲ್ಲಿ ಜನಪ್ರತಿನಿಧಿಗಳಿಲ್ಲದ ಕ್ಷೇತ್ರಗಳು ಕಿಂಚಿತ್ತು ಅಭಿವೃದ್ಧಿ ಕಾಣದೇ ಮೂಲ ಸೌಕರ್ಯದಿಂದ ವಂಚಿತವಾಗಿವೆ. ಜೊತೆಗೆ ಆಗಬೇಕಾಗಿರುವ ಕೆಲಸಗಳು ಹಾಗೇಯೇ ನಿಂತಿವೆ. ಸರಕಾರ ಕೇವಲ ಕೊರೊನಾ ನೆಪವೊಡ್ಡಿ ಗ್ರಾಮ ಪಂಚಾಯತ್ ಚುನಾವಣೆ ನಡೆಸದಿರುವುದು ನಿಜಕ್ಕೂ ದುಃಖಕರವಾಗಿದೆ ಎಂದರು.

Contact Your\'s Advertisement; 9902492681

ಈಗಾಗಲೇ ವಿಧಾನ ಪರಿಷತ್ ಚುನಾವಣೆ ನಡೆದು ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆಯು ಮುಗಿಯುತ್ತಾ ಬಂದಿದೆ. ಈ ಚುನಾವಣೆಗಳಿಗೆ ಎದುರಾಗದೇ ಇರುವ ಕೊರೊನಾ ‌, ಗ್ರಾಮ ಪಂಚಾಯತಿ ಚುನಾವಣೆಗಳಿಗೆ ಮಾತ್ರ ಅಡಿಯಾಗುತ್ತದೆಯೇ ? ಎಂದು ಪ್ರಶ್ನಿಸಿದರು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಆಡಳಿತ ವಿಕೆಂದ್ರೀಕರಣ ಪರಿಣಾಮಕಾರಿಯಾಗಿ ಕೆಲಸ ಮಾಡಲು ರಾಜ್ಯ ಸರಕಾರ ದಯಮಾಡಿ 6,021 ಗ್ರಾಮ ಪಂಚಾಯತಿಗಳಿಗೆ ಶೀಘ್ರವೇ ಚುನಾವಣೆಗೆ ದಿನಾಂಕ ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here