ಕುಡಿಯುವ ನೀರು ಮತ್ತು ಮೇವು ಕೊರತೆಯಾಗದಂತೆ ನೋಡಿಕೊಳ್ಳಿ

0
28

ಕಲಬುರಗಿ: ಕಲಬುರಗಿ ಜಿಲ್ಲೆ ಸೇರಿದಂತೆ ವಿಭಾಗದ ಜಿಲ್ಲೆಗಳಲ್ಲಿ ಮೇ-೨೦೧೯ರ ಅಂತ್ಯದವರೆಗೆ ವಾಡಿಕೆಗಿಂತ ಶೇ 40 ರಿಂದ 60ರಷ್ಟು ಮಳೆ ಕಡಿಮೆಯಾಗಿದೆ. ಹೀಗಾಗಿ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗುರುವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಕಲಬುರಗಿ, ಬೀದರ ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಇನ್ನಿತರ ಅಧಿಕಾರಿಗಳೊಂದಿಗೆ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಲಬುರಗಿ ಜಿಲ್ಲೆ ಬರ ಪೀಡಿತ ಜಿಲ್ಲೆ ಎಂದು ಈಗಾಗಲೆ ಸರ್ಕಾರ ಘೋಷಣೆ ಮಾಡಿದೆ. ಇದಲ್ಲದೆ ಹೈ.ಕ.ಭಾಗದ ಬಹುತೇಕ ತಾಲೂಕುಗಳಲ್ಲಿ ಬರ ಕಾಮಗಾರಿಗಳು ಎಲ್ಲೆಡೆ ಭರದಿಂದ ಸಾಗಿವೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿರುವ ಗ್ರಾಮೀಣ ಭಾಗದ ೨೧೨ ಗ್ರಾಮಗಳಿಗೆ 197 ಟ್ಯಾಂಕರ್ ಮತ್ತು 121 ಖಾಸಗಿ ಬೋರವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅದೇ ರೀತಿ ಯಾದಗಿರಿ ಜಿಲ್ಲೆಯ ೨೪ ಗ್ರಾಮಗಳಿಗೆ 31 ಟ್ಯಾಂಕರ್ ಮತ್ತು ೨೫ ಖಾಸಗಿ ಬೋರವೆಲ್‌ದಿಂದ ಮತ್ತು ಬೀದರ ಜಿಲ್ಲೆಯ 112 ಗ್ರಾಮಗಳಿಗೆ 126 ಟ್ಯಾಂಕರ್ ಮತ್ತು 295 ಖಾಸಗಿ ಬೋರವೆಲ್‌ದಿಂದ ನೀರು ಸರಬರಾಜು ಮಾಡಲಾಗುತ್ತಿದೆ.

Contact Your\'s Advertisement; 9902492681

ಇದಲ್ಲದೆ ಮೂರು ಜಿಲ್ಲೆಗಳ ಪಟ್ಟಣ ಪ್ರದೇಶದ 77 ವಾರ್ಡುಗಳಿಗೆ ಪ್ರತಿನಿತ್ಯ 27 ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜಿಗೆ ಕ್ರಮ ವಹಿಸಿದೆ. ಇದಕ್ಕಾಗಿ ಮೂರು ಜಿಲ್ಲೆಗಳಲ್ಲಿ ಇದೂವರೆಗೆ 20.71 ಕೋಟಿ ರೂ. ಖರ್ಚು ಮಾಡಲಾಗಿದೆ. ಜಿಲ್ಲೆಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಕೊರತೆಯಿಲ್ಲ ಎಂದು ಅವರು ಸ್ಪಷ್ಠಪಡಿಸಿದರು.
ಜೂನ್ 12 ಮತ್ತು 13 ರಂದು ಸಿ.ಎಂ ನೇತೃತವ್ದಲ್ಲಿ ಸಭೆ:- ರಾಜ್ಯದ ಮುಖ್ಯಮಂತ್ರಿಗಳು ಇದೇ ಜೂನ್ 12 ಮತ್ತು 13 ರಂದು ಜಿಲ್ಲೆಗಳ ಪ್ರಗತಿ ಪರಿಶಿಲನೆ ಕೈಗೊಳ್ಳಲು ಬೆಂಗಳೂರಿನಲ್ಲಿ ಪ್ರಾದೇಶಿಕ ಆಯುಕ್ತರ, ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ.ಗಳ ಸಭೆ ಕರೆದಿದ್ದು, ಎಲ್ಲಾ ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದರು.

೨೦೧೮-೧೯ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಲಬುರಗಿ ಮತ್ತು ಬೀದರ ಜಿಲ್ಲೆಗಳಲ್ಲಿ ವಾರ್ಷಿಕ ಗುರಿಗೆ ಮೀರಿ ಸಾಧನೆ ಮಾಡಿದರೆ ಯಾದಗಿರಿಯಲ್ಲಿ ಶೇ.೯೮.೮೩ ಸಾಧನೆ ಸಾಧಿಸಿದೆ. ೨೦೧೯-೨೦ನೇ ಸಾಲಿನಲ್ಲಿ ಇದೂವರೆಗೆ ಈ ಜಿಲ್ಲೆಗಳಲ್ಲಿ ಮಾನವ ಸೃಜನೆಯನ್ನು ಸರಾಸರಿ ಶೇ.೧೫ಕ್ಕೂ ಹೆಚ್ಚು ಸಾಧನೆ ಮಾಡಲಾಗಿದೆ ಎಂದರು.

ವಾಣಿಜ್ಯ ಬ್ಯಾಂಕುಗಳಿಗೆ ಸಾಲ ಮನ್ನಾದ ೫೧೬.೮೦ ಕೋಟಿ ರೂ. ಪಾವತಿ:- ಸಾಲ ಮನ್ನಾ ಯೋಜನೆಯಡಿ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆದ ಕಲಬುರಗಿ ಜಿಲ್ಲೆಯ ೧೫೫೯೮೬ ರೈತ ಫಲಾನುಭವಿಗಳ ೬೫೯.೨೯ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದ್ದು, ಈ ಪೈಕಿ ೨೪೭.೨೯ ಕೊಟಿ ರೂ. ಹಣ ಬ್ಯಾಂಕುಗಳಿಗೆ ಸರ್ಕಾರದಿಂದ ಪಾವತಿ ಮಾಡಲಾಗಿದೆ. ಬೀದರ ಜಿಲ್ಲೆ ೫೩೫೨೧ ಫಲಾನುಭವಿಗಳ ೪೨೮.೧೭ ಕೋಟಿ ರೂ. ಸಾಲ ಮನ್ನಾ ಮೊತ್ತದಡಿ ೬೫.೫೧ ಕೊಟಿ ರೂ. ಹಾಗೂ ಯಾದಗಿರಿ ಜಿಲ್ಲೆಯ ೬೯೯೬೫ ಫಲಾನುಭವಿಗಳ ೫೨೮ ಕೋಟಿ ರೂ. ಸಾಲ ಮನ್ನಾ ಮೊತ್ತದಡಿ ೨೦೪ ಕೊಟಿ ರೂ. ಹಣ ಬ್ಯಾಂಕುಗಳಿಗೆ ಪಾವತಿ ಮಾಡಲಾಗಿದೆ.

ಸಹಕಾರಿ ಬ್ಯಾಂಕುಗಳಿಗೆ 218.45 ಕೋಟಿ ರೂ. ಬಿಡುಗಡೆ:- ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದ ಕಲಬುರಗಿ ಜಿಲ್ಲೆಯ ೫೧೬೭೨ ರೈತ ಫಲಾನುಭವಿಗಳ ೧೪೫.೨೧ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದ್ದು, ಈ ಪೈಕಿ ೬೧.೭೪ ಕೊಟಿ ರೂ. ಹಣ ಬ್ಯಾಂಕುಗಳಿಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಬೀದರ ಜಿಲ್ಲೆ ೧೧೭೬೧೬ ಫಲಾನುಭವಿಗಳ ೫೦೪ ಕೋಟಿ ರೂ. ಸಾಲ ಮನ್ನಾ ಮೊತ್ತದಡಿ ೧೪೫.೮೨ ಕೊಟಿ ರೂ. ಹಾಗೂ ಯಾದಗಿರಿ ಜಿಲ್ಲೆಯ ೧೩೯೪೪ ಫಲಾನುಭವಿಗಳ ೩೦.೪೧ ಕೋಟಿ ರೂ. ಸಾಲ ಮನ್ನಾ ಮೊತ್ತದಡಿ ೧೦.೮೯ ಕೊಟಿ ರೂ.ಹಣ ಬ್ಯಾಂಕುಗಳಿಗೆ ಈಗಾಗಲೆ ಬಿಡುಗಡೆ ಮಾಡಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ರೈತ ಕುಟಂಬಕ್ಕೆ 5.80 ಕೋಟಿ ರೂ. ಪರಿಹಾರ ವಿತರಣೆ:- ೨೦೧೮-೧೯ನೇ ಆರ್ಥಿಕ ವರ್ಷ ಸೇರಿದಂತೆ ಮೇ-೨೦೧೯ರ ಅಂತ್ಯದ ವರೆಗೆ ಕಲಬುರಗಿ ಜಿಲ್ಲೆಯಲ್ಲಿ ವರದಿಯಾದ ೪೮ ರೈತ ಆತ್ಮಹತ್ಯೆ ಪ್ರಕರಣದಲ್ಲಿ ೪೨ ಕುಟಂಬಗಳಿಗೆ, ಬೀದರ ಜಿಲ್ಲೆಯ ೫೧ ರೈತ ಆತ್ಮಹತ್ಯೆ ಪ್ರಕರಣದಲ್ಲಿ ೩೭ ಕುಟಂಬಗಳಿಗೆ ಮತ್ತು ಯಾದಗಿರಿ ಜಿಲ್ಲೆಯ ೪೮ ರೈತ ಆತ್ಮಹತ್ಯೆ ಪ್ರಕರಣದಲ್ಲಿ ೩೭ ಕುಟಂಬಗಳಿಗೆ ತಲಾ ೫ ಲಕ್ಷ ರೂ. ಗಳಂತೆ ಮೂರು ಜಿಲ್ಲೆಗಳಲ್ಲಿ ಒಟ್ಟು ೫.೮೦ ಕೋಟಿ ರೂ. ಪರಿಹಾರ ಮೊತ್ತವನ್ನು ಸಂತ್ರಸ್ತ ಕುಟಂಬಕ್ಕೆ ವಿತರಣೆ ಮಾಡಲಾಗಿದೆ
ಕರ್ನಾಟಕ ಲ್ಯಾಂಡ್ ರೆವೆನ್ಯೂ ಕಾಯ್ದೆಯ ನಿಯಮ ೯೪ರ ಪ್ರಕಾರ ಸಾಗುವಳಿ ಭೂಮಿ ಒತ್ತುವರಿ ಸಕ್ರಮಕ್ಕೆ ಕೋರಿ ೩ ಜಿಲ್ಲೆಗಳಿಂದ ಸಲ್ಲಿಸಲಾದ ೬೦೮೭೨ ಅರ್ಜಿಗಳ ಪೈಕಿ ಮೇ-೨೦೧೯ರ ಅಂತ್ಯಕ್ಕೆ ೫೬೪೫೬ ಅರ್ಜಿಗಳನ್ನು ವಿಲೇವಾರಿ ಮಾಡಿ ಸಾಗುವಳಿ ಚೀಟಿ ನೀಡಲಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡವರಿಗೆ ಸಕ್ರಮಗೊಳಿಸಿ ಕಾಯ್ದೆಯ ೯೪(ಸಿ)ರನ್ವಯ ಸ್ವೀಕೃತ ೩೬೯೪೧ರಲ್ಲಿ ೩೩೫೯೬ ಅರ್ಜಿಗಳನ್ನು ವಿಲೇವಾರಿ ಮಆಡಿ ಹಕ್ಕು ಚೀಟಿ ವಿತರಿಸಲಾಗಿದೆ. ಇನ್ನು ನಗರ-ಪಟ್ಟಣ ಪ್ರಕರಣಗಳಲ್ಲಿ ಕಾಯ್ದೆಯ ೯೪(ಸಿಸಿ) ರನ್ವಯ ಸ್ವೀಕೃತ ೩೭೯೩ರಲ್ಲಿ ೩೪೨೮ ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಸರಾಸರಿ ಶೇ.೯೦ರಷ್ಟು ಪ್ರಗತಿ ಸಾಧಿಸಿದೆ ಎಂದರು.

ಸಭೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್, ಯಾದಗಿರಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಬೀದರ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಕಲಬುರಗಿ ಜಿ.ಪಂ ಸಿ.ಇ.ಓ ಡಾ.ಎ.ರಾಜಾ., ಯಾದಗಿರಿ ಜಿ.ಪಂ ಸಿ.ಇ.ಓ ಕವಿತಾ ಮನ್ನಿಕೇರಿ, ಬೀದರ ಜಿ.ಪಂ ಸಿ.ಇ.ಓ ಮಹಾಂತೇಶ ಬೀಳಗಿ, ಕಲಬುರಗಿ ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಬೀದರ ಸಹಾಯಕ ಆಯುಕ್ತ ಡಾ.ಶಂಕರ ವಣಿಕ್ಯಾಳ, ಬಸವಕಲ್ಯಾಣ ಸಹಾಯಕ ಆಯುಕ್ತ ಜ್ಞಾನೇಂದ್ರ ಗದ್ವಾರ, ಯಾದಗಿರಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here