ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಸಮೂಹ ಸಾರಿಗೆ ಬಳಸಿರಿ: ಆರ್‍ಟಿಓ ಕೆ. ದಾಮೋದರ

1
28

ಕಲಬುರಗಿ: ವಾಯುಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ಅನಾವಶ್ಯಕವಾಗಿ ವಾಹನವನ್ನು ಬಳಸದೆ, ಸಮೂಹ ಸಾರಿಗೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಲಬುರಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ನವೆಂಬರ್ 1 ರಿಂದ 30 ವರೆಗೆ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಅಂಗವಾಗಿ ಗುರುವಾರ ಜಗತ್ ವೃತ್ತದಿಂದ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಹಮ್ಮಿಕೊಂಡಿದ್ದ ಬೈಕ್ ಜಾಥಾಕ್ಕೆ ಜಗತ್ ವೃತ್ತದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಓಡಾಡಲು ಎಲೆಕ್ಟ್ರಿಕಲ್ ವಾಹನಗಳನ್ನು ಬಳಸಬೇಕು. ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಕೆಂಪು ದೀಪ ಇದ್ದಾಗ ಇಂಜಿನ್ ಬಂದ್ ಮಾಡಬೇಕು. ವಾಹನಗಳು ಸಮಯಕ್ಕೆ ಸರಿಯಾಗಿ ದುರಸ್ತಿ ಮಾಡಿಸಿಕೊಳ್ಳಬೇಕು. ಒಳ್ಳೆಯ ಇಂಧÀನ ಹಾಗೂ ಇಂಜಿನ್ ಆಯಿಲ್ ಬಳಸಬೇಕು. ಇದರಿಂದ ವಾಯುಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.

ವಾಹನಗಳ ಕೆಟ್ಟ ರೀತಿಯ ನಿರ್ವಹಣೆ, ಕಲಬೆರೆಕೆ ಇಂಧನ ಬಳಸುವುದು, ಪೆಟ್ರೋಲ್ ಮತ್ತು ಡಿಸೇಲ್‍ನಲ್ಲಿ ಸೀಮೆ ಎಣ್ಣೆ ಬೆರೆಸುವುದು, ಕಡಿಮೆ ಬೆಲೆಯ ಕಳಪೆ ಮಟ್ಟದ ಇಂಜಿನ್ ಆಯಿಲ್ ಬಳಸುವುದು, ಏರ್ ಫಿಲ್ಟರ್ ಮತ್ತು ಸ್ಪಾರ್ಕ್ ಪ್ಲಗ್‍ಗಳನ್ನು ಬದಲಾಯಿಸದೆ ಇರುವುದು, ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಕೆಂಪು ದೀಪ ಇದ್ದಾಗ ಇಂಜಿನ್ ಬಂದ್ ಮಾಡದಿರುವುದು, ಇಂಜಿನ್ ಆಯಿಲ್‍ನ್ನು ನಿಗದಿತ ಅವಧಿಯಲ್ಲಿ ಬದಲಾಯಿಸದೇ ಇರುವುದು ಇವೆಲ್ಲ ಕಾರಣದಿಂದಾಗಿ ವಾಯು ಮಾಲಿನ್ಯ ಉಂಟಾಗುತ್ತದೆ ಎಂದು ಅವರು ವಿವರಿಸಿದರು.

ವಾಯುಮಾಲಿನ್ಯದಿಂದ ಅಸ್ತಮಾ ಮತ್ತು ಉಸಿರಾಟ ತೊಂದರೆ, ಚಾಲಕರನ್ನು ಚಿತ್ತಬ್ರಾಂತರನ್ನಾಗಿಸುವುದು, ಮಕ್ಕಳಲ್ಲಿ ಮಾನಸಿಕ ದುರ್ಬಲತೆ, ಬುದ್ಧಿಮಾಂದ್ಯತೆ, ಮೆದುಳಿನ ಕುಂಠಿತತೆ, ದೃಷ್ಠಿ ಮುಂದಾಗುವಿಕೆ, ಗರ್ಭಿಣಿ ಸ್ತ್ರೀಯರಿಗೆ ಗರ್ಭಸ್ರಾವ ಹಾಗೂ ಹುಟ್ಟುವ ಮಕ್ಕಳಿಗೆ ಆರೋಗ್ಯಕ್ಕೆ ಹಾನಿಯಂತಹ ಇನ್ನು ಅನೇಕ ರೋಗಗಳು ಉಂಟಾಗುವ ಸಾಧ್ಯತೆಗಳಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ವಾಯುಮಾಲಿನ್ಯ ನಿಯಂತ್ರಣ, ಪ್ರಕೃತಿಯ ಸಂರಕ್ಷಣೆ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಮಾಸಾಚರಣೆ ಅಂಗವಾಗಿ ವಾಯುಮಾಲಿನ್ಯ ನಿಯಂತ್ರಣದ ಕುರಿತು ಜನರಲ್ಲಿ ಅರಿವು ಮೂಡಿಸುವುದು, ವಾಯು ಮಾಲಿನ್ಯ ನಿಯಂತ್ರಣ ಮಾಹಿತಿವುಳ್ಳ ಬಿತ್ತಿ ಪತ್ರ ಹಂಚುವುದು, ಕಾಲೇಜು ಹಾಗೂ ಆನ್‍ಲೈನ್ ಕ್ಲಾಸ್ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಜಿ.ಎಸ್ ಕೆರೋರ್, ಹಿರಿಯ ಮೋಟಾರು ವಾಹನ ನಿರೀಕ್ಷಕ ಈರಣ್ಣ, ಮೋಟಾರ ವಾಹನ ನಿರೀಕ್ಷಕ ಪ್ರಭಾಕರ ಚವ್ಹಾಣ್ ಮುಂತಾದವರು ಇದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here