ಆಳಂದ ಪುರಸಭೆ ಬಿಜೆಪಿ ತೆಕ್ಕೆಗೆ

0
223

ಆಳಂದ: ತೀವ್ರ ಕೂತುಹಲ ಕೆರಳಿಸಿದ್ದ ಆಳಂದ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಸುಭಾಷ್ ಗುತ್ತೇದಾರ ಅವರ ಸಾಂಘಿಕ ಪ್ರಯತ್ನದ ಫಲವಾಗಿ ಬಿಜೆಪಿ ಜಯಗಳಿಸುವುದರ ಮೂಲಕ ಪುರಸಭೆ ಆಡಳಿತ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಎರಡು ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ೧೩, ಕಾಂಗ್ರೆಸ್‌ನ ೧೩ ಹಾಗೂ ಜೆಡಿಎಸ್ ನಿಂದ ೧ ಸದಸ್ಯ ಚುನಾಯಿತಗೊಂಡಿದ್ದರು. ಆದರೆ ಮೀಸಲಾತಿ ಗೊಂದಲದಿಂದ ರಾಜ್ಯದ್ಯಂತ ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಕುಂಠಿತಗೊಂಡಿತ್ತು. ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಅಧಿಕಾರ ಪಡೆಯುವುದರ ಮೂಲಕ ಜಯ ತಮ್ಮದಾಗಿಸಿಕೊಂಡರು.

Contact Your\'s Advertisement; 9902492681

ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯಿಂದ ರಾಜಶ್ರೀ ಶ್ರೀಶೈಲ ಖಜೂರಿ ಕಾಂಗ್ರೆಸನಿಂದ ಕವಿತಾ ನಾಯಕ, ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯಿಂದ ಚಂದ್ರಕಾಂತ ಹತ್ತರಕಿ ಕಾಂಗ್ರೆಸನಿಂದ ನಾಮಪತ್ರ ಧೋಂಡಿಬಾ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ೧೩ಜನ ಸದಸ್ಯರು ಹಾಗೂ ಬೀದರ್ ಸಂಸದ ಭಗವಂತ ಖುಬಾ, ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅಧ್ಯಕ್ಷ ಸ್ಥಾನಕ್ಕಾಗಿ ರಾಜಶ್ರೀ ಪರವಾಗಿ, ಉಪಾಧ್ಯಕ್ಷ ಸ್ಥಾನಕ್ಕಾಗಿ ಚಂದ್ರಕಾಂತ ಹತ್ತರಕಿ ಪರವಾಗಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.

ಅಂತಿಮವಾಗಿ ಕಾಂಗ್ರೆಸ್‌ನ ೧೨ ಜನ ಸದಸ್ಯರು ಕಾಂಗ್ರೆಸ್ ಪರವಾಗಿ ಕೈ ಎತ್ತಿದರು ಒಬ್ಬ ಸದಸ್ಯ ಗೈರು ಹಾಜರಾಗಿದ್ದರು. ಇನ್ನೂ ಜೆಡಿಎಸ್ ಸದಸ್ಯ ತಟಸ್ಥವಾಗಿ ಉಳಿದರು. ಶಾಸಕ, ಸಂಸದರ ಬೆಂಬಲದೊಂದಿಗೆ ಬಿಜೆಪಿ ೧೫ ಮತಗಳನ್ನು ಪಡೆಯುವುದರ ಮೂಲಕ ಪುರಸಭೆಯಲ್ಲಿ ತನ್ನ ಪಾರಮ್ಯ ಮೆರೆಯಿತು.

ನಂತರ ಸಂಸದ ಭಗವಂತ ಖೂಬಾ, ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನಿಸಿ ಅಭಿನಂದಿಸಿದರು.

ನಂತರ ನಡೆದ ವಿಜಯೋತ್ಸವದಲ್ಲಿ ಮುಖಂಡರಾದ ಮಾಜಿ ವಿಪ ಸದಸ್ಯ ಅಮರನಾಥ ಪಾಟೀಲ, ಸಂತೋಷ ಹಾದಿಮನಿ, ವೀರಣ್ಣ ಮಂಗಾಣೆ, ಹಣಮಂತರಾವ ಮಲಾಜಿ, ಮಲ್ಲಣ್ಣ ನಾಗೂರೆ, ಅಶೋಕ ಗುತ್ತೇದಾರ, ಮಲ್ಲಿಕಾರ್ಜುನ ಕಂದಗೂಳೆ, ಮಹಿಬೂಬ್ ನಿಂಬರ್ಗಾ, ಗುರುಶಾಂತ ಪಾಟೀಲ ನಿಂಬಾಳ, ಗುರುನಾಥ ಪಾಟೀಲ, ಆಳಂದ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ, ಚೆನ್ನವೀರ ಪಾಟೀಲ, ನಿಜಲಿಂಗಪ್ಪ ಕೊರಳ್ಳಿ, ಗೌರಿ ಚಿಚಕೋಟಿ, ಪ್ರಕಾಶ ಮಾನೆ, ಶರಣು ಕುಮಸಿ, ಸುನೀಲ ಹಿರೋಳಿಕರ್, ಸೇರಿದಂತೆ ಪುರಸಭೆ ಸದಸ್ಯರು, ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.

ಅಭಿನಂದನೆ: ಚುನಾವಣಾ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟ ತಹಸೀಲದಾರರಿಗೂ ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಶ್ರಮಿಸಿದ ಪೊಲೀಸ್ ಇಲಾಖೆಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here