ಕನ್ನಡದ ಜಂಗಮ ಭಾಲ್ಕಿ ಚೆನ್ನಬಸವ ಪಟ್ಟದ್ದೇವರು

78
96

ಕಲಬುರಗಿ: ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡದ ಮಠ.ಬಸವ ತತ್ತ್ವದ ಮಠ, ಇದುಜನತೆಯ ಮಠ, ಪೂಜ್ಯ ಲಿಂ.ಚನ್ನಬಸವ ಪಟ್ಟದೇವರು ನಡೆದಾಡುವದೇವರೆಂದೇ ಪ್ರಸಿದ್ಧರಾದವರು.ಬಸವಣ್ಣನವರನ್ನು ಹಾಸಿಕೊಂಡು, ಹೊದ್ದುಕೊಂಡು ಸಮಾಜಕ್ಕಾಗಿ ತಮ್ಮ ಇಡೀ ಜೀವನವನ್ನು ದೀನ ದಲಿತರಿಗೆ, ಅಂಗವಿಕಲರಿಗೆ, ಅನಾಥರಿಗೆ ಮುಡಿಪಾಗಿಟ್ಟಂತಹಅದಮ್ಯ ಶಕ್ತಿಯಾಗಿದ್ದವರು.

ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂ. ಚನ್ನಬಸಪ್ಪಗೌಡ ಮಲ್ಲೇಶಪ್ಪಗೌಡ ಮಾಲಿ ಪಾಟೀಲ ಸ್ಮರಣಾರ್ಥ ನಡೆದ ಅರಿವಿನ ಮನೆ೬೪೪ ನೆಯದತ್ತಿಕಾರ್ಯಕ್ರಮದಲ್ಲಿ ಲಿಂ.ಪೂಜ್ಯಶ್ರೀ ಡಾ.ಚನ್ನಬಸವ ಪಟ್ಟದೇವರಜೀವನ ಮತ್ತು ಸಾಧನೆ ಕುರಿತು ಅನುಭಾವ ನೀಡುತ್ತಾ ಮಾತನಾಡಿದ ಭಾಲ್ಕಿ ಹೀರೆಮಠ ಸಂಸ್ಥಾನದ ಪೀಠಾಧಿಪತಿಗಳಾದ  ಪೂಜ್ಯಶ್ರೀ ಡಾ. ಚನ್ನಬಸವಲಿಂಗ ಪಟ್ಟದೇವರು ತಮ್ಮ ಗುರುಗಳಾದ ಲಿಂ.ಚೆನ್ನಬಸವ ಪಟ್ಟದೇವರು ಬಾಲ್ಯದಲ್ಲಿಯೇತಂದೆ-ತಾಯಿಗಳುನ್ನು ಕಳೆದುಕೊಂಡು ಕಡುಕಷ್ಟದಲ್ಲಯೇ ಬೆಳೆದರು.ಹೀಗಾಗಿ ಅವರು ಹುಟ್ಟುತ್ತಲೇ ವೀರಕ್ತರಾಗಿದ್ದರು.ಅವರ ಪೂರ್ವಶ್ರಮದ ಹೆಸರು ಮಹಾರುದ್ರ.ತಂದೆ-ತಾಯಿಗಳನ್ನು ಕಳೆದುಕೊಂಡ ಮಹಾರುದ್ರನಿಗೆಊರಿನಜನರು ಕಮಲನಗರದಲ್ಲಿದ್ದ ಭಾಲ್ಕಿ ಮಠದ ಶಾಖಾ ಮಠ ಶಂಕ್ರಯ್ಯ ಸ್ವಾಮಿ ದೇಶಿಕರಿಗೆ ಬಾಲಕ ಮಹಾರುದ್ರನ ಪಾಲನೆ-ಪೋಷಣೆಯಜವಾಬ್ದಾರಿ ವಹಿಸಿದ್ದರು.ನಂತರ ಈ ಬಾಲಕ ದನ-ಕರುಗಳನ್ನು ಕಾಯುವ, ಕುದುರೆಗಳಿಗೆ ಮೇವು ತರುವಇನ್ನಿತರಾದಿ ಕೆಲಸಗಳನ್ನು ಮಾಡತೊಡಗಿದ್ದರು.ನಂತರಅವರಿಗೆಜಂಗಮ ದೀಕ್ಷೆಯನ್ನುಕೊಟ್ಟುಕಂತೆ ಭಿಕ್ಷೆಗಾಗಿ ಕಳಿಸುತ್ತಾರೆ.ವಿದ್ಯಾಭ್ಯಾಸಕ್ಕೆಆಸೆಪಟ್ಟು ಆಗಿನ ಭಾಲ್ಕಿಯ ಪೀಠಾಧಿಪತಿ ಸಿದ್ಧಬಸವ ಪಟ್ಟಾಧ್ಯಕ್ಷರಿಗೆತಮ್ಮ ಮನದಇಂಗಿತವನ್ನುಅರುಹುತ್ತಾರೆ.ನಂತರಅವರಆಣತಿಯಂತೆ ಮುಧೋಳಕ್ಕೆ ತೆರಳಿ ವಿದ್ಯೆಕಲಿಯುತ್ತಾರೆ.

Contact Your\'s Advertisement; 9902492681

ಸಂಗಮದಲ್ಲಿಅನುಗ್ರಹ ದೀಕ್ಷೆಯನ್ನು ಪಡೆದು ಭಾಲ್ಕಿಗೆ ಆಗಮಿಸಿ ಕನ್ನಡದ ಶಬರ ಶಂಕರ ವಿಳಾಸ, ರಾಜಶೇಖರ ವಿಳಾಸ ಮುಂತಾದ ಕಾವ್ಯಗಳನ್ನು ಅಧ್ಯಯನ ಮಾಡಿದರು.ಸಿದ್ಧಬಸವ ಪಟ್ಟದೇವರ ನಂತರ ಭಾಲ್ಕಿಯ ಹಿರೇಮಠದ ಹೊಣೆಗಾರಿಕೆಯನ್ನು ಹೊತ್ತುಕೊಂಡುತಮ್ಮಅನನ್ಯ ಸೇವೆಯನ್ನು ಪ್ರಾರಂಭಿಸುತ್ತಾರೆ. ಹೈದ್ರಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟ ಪ್ರಾಂತ್ಯವಾಗಿದ್ದುದರಿಂದ ೧೯೩೬ ರಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕನ್ನಡದ ಸೇವೆ ಮಾಡುತ್ತಾರೆ. ಮಠದ ಹೊರಗಡೆಉರ್ದು ಬೋರ್ಡ ಹಾಕಿ ಒಳಗೆ ಕನ್ನಡವನ್ನು ಮಕ್ಕಳಿಗೆ ಕಲಿಸಿದರು.ಹೀಗಾಗಿ ಭಾಲ್ಕಿ ಸಂಸ್ಥಾನಕ್ಕೆ ಕನ್ನಡ ಮಠ’ ಹಾಗೂ ಪೂಜ್ಯರಿಗೆಕನ್ನಡದ ಪಟ್ಟದ್ದೇವರು ಎಂಬ ಖ್ಯಾತಿ ಸಿಗುತ್ತದೆ. ತಮ್ಮ ಆಯುಷ್ಯದುದ್ದಕ್ಕೂ ಸಾವಿರ ಕುಟುಂಬಗಳಿಗೆ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯಲ್ಲಿಆಶ್ರಯ ನೀಡಿಅವರ ಬಾಳಿಗೆ ಬೆಳಕು ನೀಡಿದರು.

ಜಾತಿ, ಧರ್ಮರಹಿತ ಸಮಾಜ ನಿರ್ಮಾಣಕ್ಕಾಗಿ ೧೨ ನೇ ಶತಮಾನದಲ್ಲಿ ನಡೆದ ಬಸವಾದಿಶರಣರ ವೈಚಾರಿಕಕ್ರಾಂತಿಯನ್ನು ಲಿಂ. ಡಾ. ಚನ್ನಬಸವ ಪಟ್ಟದ್ದೇವರು ೨೧ ನೇ ಶತಮಾನದಲ್ಲಿ ಮುಂದುವರೆಸಿ ಬಸವಣ್ಣ ಹಾಗೂ ಅಲ್ಲಮಪ್ರಭುದೇವರ ಪ್ರತಿರೂಪದ ಮಹಾನ್ ಸಂತರಾಗಿದ್ದರುಎಂದರು.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ.ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ.ಜಯಶ್ರೀದಂಡೆ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದ ಡಾ.ವೀರಣ್ಣದಂಡೆ ಮತ್ತುದತ್ತಿ ದಾಶೋಹಿಗಳಾದ ಶ್ರೀ ಶಂಕರಗೌಡ ಪಾಟೀಲ, ಶ್ರೀ ರಮೇಶ ಮಾಲಿ ಪಾಟೀಲ ಉಪಸ್ಥಿತ್ತರಿದ್ದರು.ಶ್ರೀ ಹೆಚ್.ಕೆ.ಉದ್ದಂಡಯ್ಯಕಾರ್ಯಕ್ರಮ ನಿರೂಪಿಸಿದರು.

78 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here