ಯಾಡ್ರಾಮಿ: ಅಕ್ರಮ ಮರಳಿನಿಂದ ಲಕ್ಷಾಂತರ ಬೆಳೆ ಹಾನಿ
ಪೋಟೋ08ವೈಡಿಮ್01ಯಡ್ರಾಮಿ ತಾಲ್ಲೂಕಿನ ದುಮ್ಮದ್ರಿ ಗ್ರಾಮದ ಹಳ್ಳದಲ್ಲಿ ಅಕ್ರಮ ಮರಳು ತುಂಬುತ್ತಿರುವುದು
08 ವೈಡಿಮ್ 02ಪಟ್ಟಣದ ಪೊಲೀಸ್ ಠಾಣೆ ಹಿಂದುಗಡೆ ಎರಡನೇ ವಾರ್ಡ್‍ನ ರಸ್ತೆಯಲ್ಲಿ ಟ್ರ್ಯಾಕ್ಟರ್‍ನಲ್ಲಿ ಅಕ್ರಮ ಮರಳು ತೆಗೆಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು ಈಗೆ: ತಾಲ್ಲೂಕಿನಲ್ಲಿ ಮರಳು ಮಾಫಿಯಾ ಜೋರಾಗಿ ನಡೆಯುತ್ತಿದ್ದು, ಇದಕ್ಕೆ ಪೊಲಿಸರೇ ಸಾಥ್ ನೀಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಯಡ್ರಾಮಿ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಾದ ದುಮ್ಮದ್ರಿ, ಕಡಕೋಳ, ಖೈನೂರ, ಯತ್ನಾಳ, ವಡಗೇರಾ, ಹಳ್ಳಗಳಿಂದ ನಿತ್ಯ ಸಾವಿರಾರು ಟ್ರ್ಯಾಕ್ಟರ್‍ಗಳು ಮರಳು ತುಂಬಿಕೊಂಡು ಹೋಗುತ್ತವೆ. ಪೊಲೀಸ್ ಠಾಣೆಯ ಎದುರೇ ಅಕ್ರಮ ಮರಳು ಸಾಗಿಸುತ್ತಿದ್ದರೂ ಸಹ ಪೊಲೀಸರು ಮಾತ್ರ ಮೂಕಪ್ರೇಕ್ಷಕಾಗಿ ನೋಡುತ್ತಾರೆ. ತಿಂಗಳಿಗೆ ಪ್ರತಿ ಟ್ರ್ಯಾಕ್ಟರ್‍ಗೆ 30 ಸಾವಿರ ರೂ. ಪಡೆಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಗ್ರಾಮದ ಬೀಟ್ ಪೊಲೀಸರೇ ಪ್ರತಿ ಟ್ರ್ಯಾಕ್ಟರ್‍ದಿಂದ ಮಾಮೂಲಿ ವಸೂಲಿ ಮಾಡುತ್ತಾರೆ. ಪೊಲೀಸರು ಪಡೆದ ಹಣವನ್ನು ಮೇಲಾಧಿಕಾರಿಯವರೆಗೆ ಮುಟ್ಟಿಸಲಾಗುತ್ತದೆ ಅಂತಾರೆ ಟ್ರ್ಯಾಕ್ಟರ್ ಮಾಲೀಕರು. ಯಡ್ರಾಮಿ ಠಾಣೆಗೆ ಪಿಎಸ್‍ಐ ಆಗಿ ಬರಲು ಬಹು ಬೇಡಿಕೆ ಇದೆ. ಇಲ್ಲಿ ಬರುವ 10 ಕ್ಕೂ ಹೆಚ್ಚು ಹಳ್ಳಗಳಿಂದ ತಿಂಗಳಿಗೆ ಮಾಮೂಲು ಬರುತ್ತಿರುವುದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಿದೆ.
ಜೇವರ್ಗಿಗೆ ಹೊಸದಾಗಿ ಬಂದ ವೃತ್ತನಿರಿಕ್ಷಕ ರಮೇಶ ರೊಟ್ಟಿ ಅವರು ಈ ಭಾಗದಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ ಎಲ್ಲ ಹಳ್ಳಗಳಿಗೆ ಭೇಟಿ ನೀಡಿದ್ದರು.
ಅಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಬಂದ್ ಮಾಡಿಸಿದ್ದರು. ನಂತರ ಮತ್ತೆ ಪ್ರಾರಂಭಿಸಲಾಗಿದೆ. ಹಗಲು ರಾತ್ರಿಯನ್ನದೆ ನಿತ್ಯ ನೂರಾರು ಟ್ರ್ಯಾಕ್ಟರ್‍ಗಳು ಸಂಚರಿಸುವುದರಿಂದ ವಡಗೇರಾ, ಮಳ್ಳಿ, ದುಮ್ಮದ್ರಿ, ಸುಂಬಡ, ಕಾಚಾಪುರ ಗ್ರಾಮಗಳ ಜನರಿಗೆ ರಾತ್ರಿ ಸಂಚರಿಸುವ ಟ್ರ್ಯಾಕ್ಟರ್‍ಗಳಿಂದ ನಿದ್ರೆಗೆ ಕಿರಿಕಿರಿಯಾಗುತ್ತಿದೆ ಅನ್ನುವುದು ಗ್ರಾಮಸ್ಥರ ಆರೋಪ.
ದುಮ್ಮದ್ರಿ ಗ್ರಾಮದ ಮರಳಿಗೆ ಭಾರಿ ಬೇಡಿಕೆ ಇರುವುದರಿಂದ ಬಿಜಾಪುರ ಜಿಲ್ಲೆಯ ಸಿಂದಗಿ, ಗೋಲಗೇರಿ, ಯಂಕಂಚಿ, ಯಾದಗಿರಿ ಜಿಲ್ಲೆಯ ಕೆಂಭಾವಿ, ಯಾಳವಾರ, ಹದನೂರ ಸೇರಿದಂತೆ ಹಲವು ಕಡೆ ಮರಳು ಇಲ್ಲಿಂದಲೇ ಹೋಗುತ್ತದೆ. ದುಮ್ಮದ್ರಿ ಗ್ರಾಮದಲ್ಲಿರುವ ಮನೆಗಳಿಗಿಂತಲೂ ಟ್ರ್ಯಾಕ್ಟರ್‍ಗಳ ಸಂಖ್ಯೆಯೇ ಜಾಸ್ತಿ ಇವೆ. ಗ್ರಾಮದ ಹಳ್ಳದಲ್ಲಿ ಕೆಂಪು ಮರಳು ಸಿಗುತ್ತಿರುವುದರಿಂದ ಪ್ರತಿ ಟ್ರ್ಯಾಕ್ಟರ್‍ಗೆ 5 ರಿಂದ 6 ಸಾವಿರ ರೂ. ತೆಗೆದುಕೊಳ್ಳಲಾಗುತ್ತಿದೆ. ಹಳ್ಳದ ಪಕ್ಕದಲ್ಲಿ ವ್ಯವಸಾಯ ಮಾಡುತ್ತಿರುವ ಹೊಲಗಳನ್ನು ಖರೀದಿ ಮಾಡಲಾಗುತ್ತದೆ.
ರೈತರು ಅಂತಹ ಹೊಲಗಳನ್ನು ಮಾರಾಟ ಮಾಡದಿದ್ದರೆ ದಮ್ಕಿ ಹಾಕಿ ಖರೀದಿ ಮಾಡಲಾಗುತ್ತಿದೆ. ಹಳ್ಳದ ಪಕ್ಕದಲ್ಲಿರುವ ಫಲವತ್ತಾದ ಜಮೀನಿನಲ್ಲಿ ಬೆಳೆ ಇದ್ದರೂ ಸಹ ನಡು ಹೊಲದಲ್ಲಿ ಟ್ರ್ಯಾಕ್ಟರ್ ಹಾದು ಹೋಗುತ್ತವೆ. ಕೇಳಿದರೆ ಜಗಳಕ್ಕೆ ಬರುತ್ತಾರೆ ಅನ್ನುವ ಗಂಭೀರ ಆರೋಪ ರೈತರದ್ದು. ಅಕ್ರಮ ಮರಳು ಸಾಗಾಟದಿಂದ ನೂರಾರು ಎಕರೆ ಬೆಳೆ ನಾಶವಾಗುತ್ತಿದೆ. ಬೀಜ ಗೊಬ್ಬರವನ್ನು ಹಾಕಿ ಉತ್ತಮ ಫಸಲಿನಲ್ಲಿದ್ದ ರೈತರಿಗೆ ಟ್ರ್ಯಾಕ್ಟರ್ ಹಾವಳಿಯಿಂದ ತುಂಬಾ ತೊಂದರೆ ಅನುಭವಿಸಬೇಕಾಗಿದೆ. ಯತ್ನಾಳ, ಕಡಕೋಳ, ಜಂಬೇರಾಳ, ಹಳ್ಳಗಳಿಂದ ಬರುವ ಟ್ರ್ಯಾಕ್ಟರ್‍ಗಳು ಪೊಲೀಸ್ ಠಾಣೆಯ ಎದುರುಗಡೆಯಿಂದಲೇ ಹಾದು ಹೋಗುತ್ತವೆ. ಪೊಲೀಸರು ನೋಡಿಯೂ ನೋಡದಂತೆ ಇರುತ್ತಾರೆ. ಕಾನೂನು ರಕ್ಷಕರೆ ಭಕ್ಷರಾದರೇ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಯಡ್ರಾಮಿ ಸಿಂಗಂ ಎಂದು ಕರೆಸಿಕೊಳ್ಳುವ ಪಿಎಸ್‍ಐ ಗಜಾನಂದ ಬಿರಾದಾರ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ ರೈತರ ಬೆಳೆಗಳನ್ನು ಹಾನಿಯಾಗದಂತೆ ನೋಡಿಕೊಳ್ಳಬೇಕಾಗಿದೆ.