ನ.14ರಂದು ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ:ಎಲ್ಲಾ ಗ್ರಾ.ಪಂ.ಗಳಲ್ಲಿ “ನನ್ನ ಊರು-ನನ್ನ ಬೇರು” ಕಾರ್ಯಕ್ರಮ

0
118

ಕಲಬುರಗಿ: ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನದ ಅಂಗವಾಗಿ ನವೆಂಬರ್ 14 ರಂದು ಅಫಜಲಪುರ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಅಭಿಯಾನದ ಉದ್ಘಾಟನೆ, ಗೋಡೆ ಬರಹ ಮುಂತಾದ ವಿವಿಧ ಚಟುವಟಿಕಾ ಕಾರ್ಯಕ್ರಮಗಳÀನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಫಜಲಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ಡಾ. ಆಕಾಶ್ ಶಂಕರ್ ಅವರು ತಿಳಿಸಿದ್ದಾರೆ.

ಅಂದು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ 1 ರಿಂದ 7ನೇ ತರಗತಿಯ ಮಕ್ಕಳಿಗೆ “ನನ್ನ ಊರು” ವಿಷಯ ಕುರಿತು ಅಂದರೆ, ಈ ಭಾಗದ ಬಗ್ಗೆ ಪರಿಚಯಿಸುವ ಚಿತ್ರಕಲೆ ಬಿಡಿಸುವ (ಗೋಡೆ ಬರಹ) ಸ್ಪರ್ಧೆ ಹಾಗೂ 8 ರಿಂದ 10ನೇ ತರಗತಿಯ ಮಕ್ಕಳಿಗೆ “ನನ್ನ ಊರು-ನನ್ನ ಬೇರು” ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

Contact Your\'s Advertisement; 9902492681

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇದೇ ನವೆಂಬರ್ 14 ರಿಂದ 2021ರ ಜನವರಿ 24 ರವರೆಗೆ 10 ವಾರಗಳ ಕಾಲ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಹಕ್ಕುಗಳ ಸಭೆ ನಡೆಸಲಾಗುತ್ತಿದೆ. ಅಫಜಲಪುರ ಪಟ್ಟಣದ ಶಾಲೆಗಳಲ್ಲಿನ ಆಸಕ್ತಿ ಹೊಂದಿರುವ ಮಕ್ಕಳನ್ನು ಈ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಬೇಕೆಂದು ಅವರು ಅಫಜಲಪುರ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

“ಇಂದಿನ ಮಕ್ಕಳೇ ನಾಳಿನ ಪ್ರಜೆಗಳು”. ಇಂದು ಆಟವಾಡುತ್ತಾ, ಬೆಳೆಯುವ ಎಳೆ ಮನಸ್ಸುಗಳು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಊರಿನಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳಿಂದ ಅವರ ಗ್ರಹಿಕೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಪ್ರಸ್ತುತ ಕೋವಿಡ್ ಮಹಾಮಾರಿಯಿಂದಾಗಿ ಮಕ್ಕಳ ನಿಯಮಿತ ಶಿಕ್ಷಣದ ಮೇಲೆ ಹೊಡೆತ ಬಿದ್ದಿರುವುದು ದು:ಖಕರ ಸಂಗತಿ. ಆದ್ದರಿಂದ ಮಕ್ಕಳಿಗೆ ಎಲ್ಲಿ ನೋಡಿದರೂ ಕಲಿಕೆ ಎಂದಾಗಬೇಕು. ಅವರ ಪಾಠ-ಪ್ರವಚನ ನಿಲ್ಲಬಾರದು. ಇದು ಸರ್ಕಾರಿ ಕಟ್ಟಡಗಳ ಗೋಡೆಗಳ ಮೇಲೆ ಹಾಗೂ ಫಲಕಗಳ ಮೂಲಕ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.

ಈ ಅಭಿಯಾನವನ್ನು ಎಲ್ಲಾ ಗ್ರಾಮ ಪಂಚಾಯತ ಕಚೇರಿಗಳಲ್ಲೂ, ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಕಚೇರಿಗಳಲ್ಲೂ ಕೈಗೆತ್ತಿಕೊಂಡು ಊರಿನ ಜನರಿಗೆ ತಮ್ಮ ಬೇರಿನ ಅರಿವನ್ನು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಭಾಗವಹಿಸುವಿಕೆ ಹಕ್ಕು ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಸಭೆಯನ್ನು ನಡೆಸಲು 2006ರ ಸರ್ಕಾರದ ಸುತ್ತೋಲೆಯಂತೆ ಮತ್ತು ವಿಶ್ವ ಸಂಸ್ಥೆಯ ಒಡಂಬಡಿಕೆ 1989 ಹಾಗೂ ಭಾರತ ಸಂವಿಧಾನದಲ್ಲಿ ಮಕ್ಕಳಿಗಿರುವ ಹಕ್ಕುಗಳನ್ನು ಮಾನ್ಯ ಮಾಡುವುದರಲ್ಲಿ ಮಹತ್ತರವಾದ ಹೆಜ್ಜೆ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here