ಯಂತ್ರೋಪಕರಣ ಖರೀದಿಗೆ ಸಹಾಯಧನ: ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ

0
84

ಕಲಬುರಗಿ: ಪ್ರಸಕ್ತ 2020-21ನೇ ಸಾಲಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್.ಕೆ.ವಿ.ವೈ.) ಯ “ತೋಟಗಾರಿಕೆಯಲ್ಲಿ ಯಾಂತ್ರೀಕರಣ” ಯೋಜನೆಯಡಿ ವಿವಿಧ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಅರ್ಹ ಫಲಾನುಭವಿಗಳು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಭೂಮಿ ಸಿದ್ಧತೆಗೆ, ಬೆಳೆ ಕಟಾವಿಗೆ ಮತ್ತು ಬೆಳೆ ಕಟಾವಿನ ನಂತರ ಉಪಯೋಗಿಸುವ ವಿವಿಧ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಪಡೆಯಬಹುದಾಗಿದೆ. ದಿನಾಂಕ:01-04-2020 ರ ನಂತರ ಖರೀದಿಸಿದ ಯಂತ್ರಗಳಿಗೆ ಮಾತ್ರ ಸಹಾಯಧನ ಪರಿಗಣಿಸಲಾಗುವುದು. ಸರ್ಕಾರದ ಮಾರ್ಗಸೂಚಿಯನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿ ಸಣ್ಣ ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇ.50 ರಷ್ಟು ಸಹಾಯಧನ ಹಾಗೂ ಇತರೆ ವರ್ಗದ ಫಲಾನುಭವಿಗೆ ಶೇ.40 ರಷ್ಟು ಸಹಾಯಧನ ನೀಡಲಾಗುತ್ತದೆ.

Contact Your\'s Advertisement; 9902492681

ಅರ್ಹ ಫಲಾನುಭವಿಗಳು ನಿಗದಿತ ಅರ್ಜಿ ನಮೂನೆಯನ್ನು ಆಯಾ ತಾಲೂಕುಗಳ ಸಂಬಂಧಪಟ್ಟ ತೋಟಗಾರಿಕೆ ಇಲಾಖೆಯ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳಾದ ರೈತರ ಪಹಣಿ, ನೀರು ಬಳಕೆ ಪ್ರಮಾಣಪತ್ರ, ತೋಟಗಾರಿಕೆ ಬೆಳೆ ದೃಢೀಕರಣ ಹಾಗೂ ಕೃಷಿ ಇಲಾಖೆಯಿಂದ ಪಡೆದ ನಿರಾಪೇಕ್ಷಣಾ ಪ್ರಮಾಣ ಪತ್ರ (ಎನ್.ಓ.ಸಿ.) ಮತ್ತಿತರ ದಾಖಲೆಗಳನ್ನು ಲಗತ್ತಿಸಿ 2020ರ ನವೆಂಬರ್ 21 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಫಲಾನುಭವಿಗಳು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಅಫಜಲಪುರ ತಾಲೂಕು: ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 08470-283542, ಮೊಬೈಲ್ ಸಂಖ್ಯೆ 7760969088, ಆಳಂದ ತಾಲೂಕು: ದೂರವಾಣಿ ಸಂಖ್ಯೆ 08477-203155, ಮೊಬೈಲ್ ಸಂಖ್ಯೆ 8095143035. ಚಿಂಚೋಳಿ ತಾಲೂಕು: ದೂರವಾಣಿ ಸಂಖ್ಯೆ 08475-273341, ಮೊಬೈಲ್ ಸಂಖ್ಯೆ 8095143035.

ಚಿತ್ತಾಪುರ ತಾಲೂಕು: ದೂರವಾಣಿ ಸಂಖ್ಯೆ 08474-236446. ಮೊಬೈಲ್ ಸಂಖ್ಯೆ 9449004777. ಕಲಬುರಗಿ ತಾಲೂಕು: 08472-231230, ಮೊಬೈಲ್ ಸಂಖ್ಯೆ 9986211661. ಜೇವರ್ಗಿ ತಾಲೂಕು: 08442-236446 ಹಾಗೂ ಮೊಬೈಲ್ ಸಂಖ್ಯೆ 9448651017. ಸೇಡಂ ತಾಲೂಕು: ದೂರವಾಣಿ ಸಂಖ್ಯೆ 08441-276810, ಮೊಬೈಲ್ ಸಂಖ್ಯೆ 9731439282 /9480633045ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here