ಎ.ಐ.ಯು.ಟಿ.ಯು.ಸಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರಿಗೆ ಲೇಬರ್ ಕಾರ್ಡ್ ವಿತರಣೆ

0
24

ಕಲಬುರಗಿ: ಎ.ಐ.ಯು.ಟಿ.ಯು.ಸಿ ಜಿಲ್ಲಾ ಸಮಿತಿ ವತಿಯಿಂದ ಗೊಬ್ಬುರ ಬಿ. ಗ್ರಾಮದಲ್ಲಿ ಕಟ್ಟಡ ಕಾರ್ಮಿಕರಿಗೆ ಲೇಬರ್ ಕಾರ್ಡ್ ವಿತರಿಸಲಾಯಿತು.

ಅಫಜಲ್‌ಪುರ ತಾಲೂಕಿನ ಗೊಬ್ಬುರ ಬಿ. ಗ್ರಾಮದಲ್ಲಿ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಸೌಲಭಗಳು ತಳಮಟ್ಟಲ್ಲಿರುವಂತಹ ಕಾರ್ಮಿಕರಿಗೆ ತಲುಪಬೇಕೆಂದು ಕಾರ್ಮಿಕ ಸಂಘಟನೆ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Contact Your\'s Advertisement; 9902492681

ಭಾಷಣಕಾರರಾಗಿ ಆಗಮಿಸಿದ ಎ.ಐ.ಯು.ಟಿ.ಯು.ಸಿ ಜಿಲ್ಲಾ ಕಾರ್ಯದರ್ಶಿಗಳಾದ ಎಸ್.ಎಂ. ಶರ್ಮಾ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಸರಕಾರದ ಸಾಕಷ್ಟು ಸೌಕರ್ಯಗಳು ಬಡ ಕಾರ್ಮಿಕರಿಗೆ ತಲುಪುತ್ತಿಲ್ಲ. ಇಂದಿನ ಸರ್ಕಾರಗಳು ಬಡವರ ಬಗ್ಗೆ ಯಾವುದೇ ಕಾಳಜಿಯಿಲ್ಲದೆ ಬಂಡವಾಳಿಗರ ಗುಲಾಮರಂತೆ ವರ್ತಿಸುತ್ತಿವೆ. ಇದರಿಂದಾಗಿ ನಿರುದ್ಯೋಗ, ಬಡತನ, ದೇಶದಲ್ಲಿ ತಾಂಡವವಾಡುತ್ತಿದೆ. ರೈತರ ಪರಿಸ್ಥಿತಿ ದಿನೆದಿನೆ ಹಾಳಾಗುತ್ತಿದೆ. ಹಿಗಿರುವಾಗ ಸರ್ಕಾರಿ ಸ್ವಾಮ್ಯದ ಕ್ಷೇತ್ರಗಳು ಖಾಸಗಿ ಮಾಲಿಕರಿಗೆ ನೀಡುವ ಮೂಲಕ ದೇಶ ಕೊಳ್ಳೆ ಹೊಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಂವಿಧಾನ ನಿಯಮದ ಪ್ರಕಾರ ಎಲ್ಲಾ ಹಕ್ಕುದಾರರಿಗೆ ಸಿಗಲೇಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿಯ ಕಾರ್ಯಕಾರಿನಿ ಸಮಿತಿಯ ಸದಸ್ಯರಾದ ಮಲ್ಲಿನಾಥ ಸಿಂಘೆ ರವರು ವಹಿಸಿಕೊಂಡಿದ್ದರು. ವೇದಿಕೆ ಮೇಲೆ ಮಹಿಳಾ ಸಂಘಟನೆಯ ಜಿಲ್ಲಾ ನಾಯಕರಾದ  ರಾಧಾ ಬಿ. ಉಪಸ್ಥಿತರಿದ್ದರು.

ರಾಜು ಪಡಪಟ್ಟಿ, ಮಂಜುಳಾ, ಪ್ರೀತಿ, ಶಿಲ್ಪಾ, ಚನ್ನಮಲ್ಲಪ್ಪ ಶಾಂತಪ್ಪ, ಮೀನಾಕ್ಷಿ, ಲಕ್ಷ್ಮೀ, ಕಸ್ತೂರಿಬಾಯಿ, ಶಿವಾನಂದ, ಮಲ್ಲಪ್ಪ ಚಂದ್ರಕಾಂತ, ಯಲ್ಲಾಬಾಯಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here