ಜಾನಪದ ಸಾಹಿತ್ಯದಲ್ಲಿ ಮಾನವಿಯ ಮೌಲ್ಯವಿದೆ: ಸೂಗುರೇಶ ವಾರದ್

0
33

ಸುರಪುರ: ಜಾನಪದ ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ಸುರಪುರ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ಹೇಳಿದರು.

ನಗರದ ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಯಾದಗಿರಿ, ಜಾನಪದ ಕಲಾಲೋಕ ರಂಗಂಪೇಟ ಸಹಯೋಗದೊಂದಿಗೆ ಆಯೋಜಿಸಿದ್ದ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿ ಸಮುದಾಯ ಹಾಗೂ ಯುವ ಪೀಳಿಗೆ ಜನಪದದ ಆಸಕ್ತಿ ಬೇಳೆಸಿಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಉಪನ್ಯಾಸಕ ವಿರೇಶ ಹಳೀಮನಿ ಮಾತನಾಡಿ ಇಂದಿನ ಯುವಜನರು ಮತ್ತು ವಿದ್ಯಾರ್ಥಿ ಸಮುದಾಯ ನಮ್ಮ ಸ್ಥಳಿಯು ಕಲೆಗಳ ಬಗ್ಗೆ, ಕಲಾವಿಧರಬಗ್ಗೆ ಹಾಗೂ ಜಾನಪದ ಕಲೆ, ಪರಂಪರೆ ಬಗ್ಗೆ ಹೆಚ್ಚು ಆಳವಾಗಿ ಅಧ್ಯಾಯನ ಮಾಡಬೇಕು ಜೋತೆಗೆ ಜಾನಪದ ಸಾಹಿತ್ಯ ಅಧ್ಯಾಯನದಲ್ಲಿ ಹೆಚ್ಚು-ಹೆಚ್ಚು ತೊಡಗಿಸಿಕೊಂಡಾಗ ನಮ್ಮ ನೇಲ ಮೂಲ ಸಂಸ್ಕೃತಿಯಾದ ಜಾನಪದಪದವನ್ನು ಉಳಿಸಿ ಬೇಳೆಸುವುದರ ಜೋತೆಗೆ ಮುಂದಿನ ಪೀಳಿಗೆಗು ಪರಿಚಯಿಸಲು ಸಾಧ್ಯವಾಗುತ್ತದೆ ಇಲ್ಲವಾದಲ್ಲಿ ನಗರಿಕರಣ, ಪಾಶ್ಚಾತಿಕರಣ, ವಿದೇಶಿಕರಣ ಈ ಸಂದರ್ಭದಲ್ಲಿ ಬೇರೆ ಸಂಸ್ಕೃತಿಗಳು ನಮ್ಮ ಮೇಲೆ ಪ್ರಭಾವ ಬಿರುತ್ತದೆ.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ದುಂದುಮೆ ಕಲಾವಿಧ ಲಕ್ಷ್ಮಣ ಗುತ್ತೆದಾರ ಸುರಪುರ ಹಾಗೂ ಶ್ರೀಗುರು ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪೂರ ವೇದಿಕೆಮೇಲಿದ್ದರು, ಸಮಾರಂಭದ ಸಾನಿದ್ಯ ವಹಿಸಿದ್ದ ನಾಗನಟಗಿ ವೀರಭದ್ರೇಶ್ವರ ಮಠದ ಪೂಜ್ಯ ಶ್ರೀ ಸಿದ್ರಾಮೇಶ್ವರ ಸ್ವಾಮಿಗಳು ಆಶಿರ್ವಚನ ನೀಡಿದರು, ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿಧ ಶಿವಪ್ಪ ಹೆಬ್ಬಾಳ ವೇದಿಕೆಮೇಲಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ವಹಿಸಿದ್ದರು.

ಈ ಸಂದರ್ಭದಲ್ಲಿ ಜಾನಪದ ಕಲಾವಿದರುಗಳಾದ ಶಿವಪ್ಪ ಹೆಬ್ಬಾಳ ಕೋಡೆಕಲ್, ಬಸಪ್ಪ ಹಣಮಸಾಗರ, ನೀಲಪ್ಪ ಚೌದರಿ ಶಹಾಪೂರ, ಮನೋಹರ ವಿಶ್ವಕರ್ಮ ಸಗರ, ಬಸವರಾಜ ಜಾಯಿ ಸಗರ, ಬಸವರಾಜ ಯಳಸಂಗಿ, ಸಿದ್ದಾರೂಢ ನಾಗರಹಳ್ಳಿ ಇವರುಗಳಿಂದ ಜಾನಪದ ಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಪ್ರಕಾಶ ವಜ್ಜಲ್ ನಿರೂಪಿಸಿದರು, ಪ್ರವೀಣ ಜಕಾತಿ ಸ್ವಾಗತಿಸಿದರು, ಮೌನೇಶ ಐನಾಪೂರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here