ಬೆಂಗಳೂರು: ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಗ್ರಾಮ ಪಂಚಾಯತಿ ಚುನಾವಣೆಗೆ ಕೊನೆಗೂ ನ್ಯಾಯಲ ಚುನಾವಣೆ ಆಯೋಗಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ನ್ಯಾಯಲದ ಮೂರುವಾರಗಳಲ್ಲಿ ಚುನಾವಣೆ ವೇಳಾಪಟ್ಟಿ ಪ್ರಕಟಿಸುವಂತೆ ಆದೇಶಿಸಿದ್ದ ಬೆನ್ನಲ್ಲೇ ಆಯೋಗ ಅಗತ್ಯ ಸಿದ್ಧತೆಗಳು ಮತಷ್ಟು ಚುರುಕು ಗೊಳಿಸಿದೆ.
ಈಗಾಗಲೇ ಆಯೋಗ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ಸೂಕ್ತ ವ್ಯವಸ್ಥೆ ಹಾಗೂ ಬಂದೋಬಸ್ತಗಾಗಿ ಕೋರಿದ್ದು, ಅಲ್ಲದೇ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಆಯೋಗ ಮಾಹಿತಿ ಪಡೆದುಕೊಂಡಿದೆ.
ರಾಜ್ಯ ಸರಕಾರ ಮಸ್ಕಿ ಮತ್ತು ಬಸವಕಲ್ಯಾಣ ಎರಡು ಕ್ಷೇತ್ರಗಳ ಉಪ ಚುನಾವಣೆ ಬಳಿಕ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಸಹಮತ ಸೂಚಿಸಿದೆ ಎನ್ನಲಾಗಿದೆ.
ಆಯೋಗದ ಮಾಹಿತಿಯ ಪ್ರಕಾರ ಡಿಸೆಂಬರ್ ಮೊದಲ ವಾರದ ವರೆಗೆ ಪಂಚಾಯತ್ ಚುನಾವಣೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ರಾಜ್ಯದ ಒಟ್ಟು 5800 ಗ್ರಾಮ ಪಂಚಾಯತಗಳ ಚುನಾವಣೆ ನಡೆಯಲಿದೆ.
ಈ ಬಾರಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆ ಬಹುತೇಕ ಎಲ್ಲ ಗ್ರಾಮದಲ್ಲಿ ಭಾರಿ ಕುತೂಹಲ ಹಾಗೂ ಭಾರಿ ನಿರೀಕ್ಷೆಗಳನ್ನು ಹೊತ್ತು ತರಲಿದ್ದು, ಸ್ಥಳೀಯ ನಾಯಕರು ಈಗಾಗಲೇ ಸಕಲ ತಯಾರಿ ಮತ್ತು ರಾಜಕೀಯ ಲೆಕ್ಕಾಚಾರ ನಡೆಸುತ್ತಿರುವುದು ಕಂಡುಬರುತ್ತಿದೆ.