ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರಷಿ ಆಧುನಿಕ ತಾಂತ್ರಿಕತೆ ಕುರಿತು ಸಂವಾದ

0
56

ಸುರಪುರ: ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿನ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಸುರಪುರದಲ್ಲಿ ಒಂದು ದಿನದ ಕೃಷಿ ಆಧುನಿಕ ತಾಂತ್ರಿಕತೆ ವಿಷಯದ ಮೇಲೆ ವಿಡಿಯೋ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡ್ರೋಣ್ ಯಂತ್ರದ ಸಹಾಯದಿಂದ ಕೀಟನಾಶಕವನ್ನು ಸಿಂಪಡಿಸುವ ಪ್ರಾಯೋಗಿಕ ಮತ್ತು ಪ್ರಾತ್ಯಕ್ಷಿತವಾಗಿ ತೋರಿಸಲಾಯಿತು.

ಈ ಕುರಿತು ಪ್ರಾಂಶುಪಾಲರಾದ ಡಾ: ರವೀಂದ್ರಕುಮಾರ ನಾಗರಾಳೆ ಅವರು ಮಾತನಾಡಿ, ಈಗಾಗಲೇ ನಮ್ಮ ಮಹಾವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿ ಮತ್ತು ಕೃಯೋಜನ್ ಅಗ್ರಿ ಮತ್ತು ಬಯೋಟೆಕ್ ಪ್ರೈವೇಟ್ ಲಿಮಿಟೆಡ್‌ನ ಸಂಯುಕ್ತಾಶ್ರಯದಲ್ಲಿ ಇನ್‌ಕ್ಯುಬೆಷನ್ ಕೇಂದ್ರವನ್ನು ತೆರೆಯಲು ಒಪ್ಪಂದವನ್ನು ಮಾಡಿಕೊಳ್ಳಲಾಗಿದ್ದು. ಮುಂದಿನ ದಿನಗಳಲ್ಲಿ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಇನ್‌ಕ್ಯುಬೆಷನ್ ಕೇಂದ್ರದ ಅಡಿಯಲ್ಲಿ ಪ್ರಾಯೋಗಿಕ ಡ್ರೋಣ್ ಕ್ಲಬ್ ತೆರೆಯಲು ನಿರ್ಧರಿಸಲಾಯಿತು. ಇದರಿಂದ ಈ ಭಾಗದ ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಕೃಷಿ ಆಧಾರಿತ ಉದ್ಯಮಿಗಳಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಮುಖ್ಯ ಸಂವಾದಕರಾದ ಡಾ. ಬಸವರಾಜ ಗಿರೆನವರ್ ಮ್ಯಾನೆಜಿಂಗ್ ಡೈರೆಕ್ಟರ್ ಕೃಯೋಜನ ಅಗ್ರಿ ಮತ್ತು ಬಯೋ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ರವರು ಕೃಷಿಯಲ್ಲಿ ಡ್ರೋಣ್ ತಂತ್ರಜ್ಞಾನವನ್ನು ಸರಳ ರೀತಿಯಲ್ಲಿ ಅಳವಡಿಸಿಕೊಳ್ಳವ ಬಗ್ಗೆ ಮಾತನಾಡಿದರು.

ಡಾ. ಅಮರೇಶ ವಾಯ್ ಎಸ್ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿ ಇವರು ಇವತ್ತಿನ ದಿನಗಳಲ್ಲಿ ಕೃಷಿಯ ಮಾನವ ಸಂಪನ್ಮೊಲ ಕೊರತೆ ಹಾಗೂ ಅತಿ ಹೆಚ್ಚು ಖರ್ಚಿನಿದ್ದ ರೈತರ ಬದುಕು ಕಷ್ಟಮಯವಾಗಿದೆ. ಇಂತಹ ಆಧುನಿಕ ಯಂತ್ರೋಪಕರಣಗಳು ಬಳಸಿಕೊಂಡು ಕೃಷಿಯಲ್ಲಿಯೂ ಕೂಡ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದೆಂದು ಮಾರ್ಗದರ್ಶನವನ್ನು ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಹಾಗೂ ಪ್ರಗತಿಪರ ರೈತರಾದ, ನಮ್ಮ ಸಂಸ್ಥೆಯ ಜಂಟಿ ನಿರ್ದೇಶಕರಾದ ದೊಡ್ಡಪ್ಪ ಎಸ್ ನಿಷ್ಠಿ ಜಹಾಗೀರದಾರ ರವರು ನಮ್ಮ ಭಾಗದ ರೈತರು ಆಧುನಿಕ ಯಂತ್ರೋಪಕರಣಗಳು ಹಾಗೂ ಇತರ ತಂತ್ರಜ್ಞಾನ ಬಳಸಿಕೊಂಡು ಉತ್ತಮ ಇಳುವರಿಯನ್ನು ಹೇಗೆ ಪಡೆಯಬೇಕು ಮತ್ತು ಮುಂದಿನ ದಿನಗಳಲ್ಲಿ ನಮ್ಮ ಮಹಾವಿದ್ಯಾಲಯದ ಇನ್‌ಕ್ಯುಬೆಷನ್ ಕೇಂದ್ರದ ಅಡಿಯಲ್ಲಿ ಪ್ರಾಯೋಗಿಕ ಡ್ರೋಣ್ ಕ್ಲಬ್ ಪ್ರಾರಂಭಿಸುವ ಬಗ್ಗೆ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿ ವಿಜ್ಞಾನಿಗಳಾದ ಡಾ. ಸತೀಶ್ ಕಾಳೆ, ಡಾ. ಬಾರಿಕಾರ ಉಮೇಶ ಮತ್ತು ಮಹಾವಿದ್ಯಾಲಯದ ಎಲ್ಲಾ ಮುಖ್ಯಸ್ಥರು, ಪಾಂಶುಪಾಲರು ಮತ್ತು ಈ ಭಾಗದ ಪ್ರಗತಿಪರ ರೈತರು, ರಸಗೊಬ್ಬರ ಮತ್ತು ಕೀಟನಾಶಕ ವಿತರಕರು ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕಾಗಿ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜೀ, ಕಾರ್ಯದರ್ಶಿಗಳಾದ ಶ್ರೀ ಶರಣಬಸಪ್ಪ ವ್ಹಿ ನಿಷ್ಠಿ ಜಹಾಗೀರದಾರ, ಜಂಟಿ ಕಾರ್ಯದರ್ಶಿಗಳಾದ ಶ್ರೀ ದೊಡ್ಡಪ್ಪ ಎಸ್ ನಿಷ್ಠಿ ಮತ್ತು ನಮ್ಮ ಸಂಸ್ಥೆಯ ಎಲ್ಲಾ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ವರ್ಗದವರು ಹರ್ಷವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here