ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ

0
17

ಸುರಪುರ: ಕೃಷಕ್ ಭಾರತಿ ಕೋ-ಆಪರೇಟಿವ್ ಹಾಗು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಜಂಟಿಯಾಗಿ ನಗರದ ಹಸನಾಪುರ ಗಂಜ್‌ನಲ್ಲಿರುವ ಟಿಎಪಿಸಿಎಮ್‌ಎಸ್ ಕಚೇರಿ ಸಭಾಂಗಣದಲ್ಲಿ ೬೭ನೇ ಅಖಿಲ ಭಾರತ ಸಹಕಾರ ಸಪ್ತಾಹ-೨೦೨೦ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟಿಎಪಿಸಿಎಮ್‌ಎಸ್‌ನ ಉಪಾಧ್ಯಕ್ಷ ರಾಜಾ ಸಂತೋಷ ನಾಯಕ ಅವರು ಮಾತನಾಡಿ,ಸಹಕಾರ ಕ್ಷೇತ್ರದ ಮೂಲಕ ಪ್ರತಿಯೊಂದು ರಂಗವನ್ನು ಅಭಿವೃಧ್ಧಿ ಪಡಿಸಲು ಸಾಧ್ಯವಿದೆ.ಆದರೆ ಸಹಕಾ ರಂಗದಲ್ಲಿ ಲೇವಾ ದೇವಿಯಂತೆ ಸಾಲಗಾರರು ಕೂಡ ಸಕಾಲದಲ್ಲಿ ಮರಳಿ ಭರಿಸುತ್ತಿದ್ದರೆ ಆ ಸಹಕಾರಿ ಸಂಘವು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಿದೆ ಎಂದರು.

Contact Your\'s Advertisement; 9902492681

ಕೃಷಕ್ ಭಾರತಿ ಕೋ-ಆಪರೇಟಿವ್ ಲಿಮಿಟೆಡ್‌ನ ಕ್ಷೇತ್ರ ಅಧಿಕಾರಿ ತಿಪ್ಪೆಸ್ವಾಮಿ ಆರ್.ಮಾತನಾಡಿ,ಸಹಕಾರ ಸಂಘಗಳ ಮೂಲಕ ಇಂದು ಜನರಿಗೆ ಹಣಕಾಸಿನ ವ್ಯವಹಾರದಲ್ಲಿ ಡಿಜಿಟಲಿಕರಣವನ್ನು ಹೇಗೆ ಬಳಸಿಕೊಂಡು ಪಾರದರ್ಶಕವಾದ ವ್ಯವಹಾರವನ್ನು ನಡೆಸಬಹುದು ಹಾಗು ಸಾಮಾಜಿಕ ಮಾದ್ಯಮಗಳಲ್ಲಿಯೂ ಸಹಕಾರ ಸಂಘಗಳು ತೊಡಗುವ ಮೂಲಕ ಸಮಾಜದ ಏಳಿಗೆಗೆ ಕೆಲಸ ಮಾಡುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾರಣ್ಣ ಎನ್.ಹೆಚ್. ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಿ ಶಹಾಪುರ, ಶಿವಲಿಂಗಪ್ಪ ವ್ಯವಸ್ಥಾಪಕರು ಡಿಸಿಸಿ ಬ್ಯಾಂಕ್ ಶಾಖೆ ಸುರಪುರ ಹಾಗು ಗದ್ದೆಪ್ಪ ರೋಡಲಬಂಡಿ ವ್ಯವಸ್ಥಾಪಕರು ಕೆಎಸ್‌ಡಬ್ಲ್ಯೂಸಿ ಸುರಪುರ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಶಿವರುದ್ರು ಉಳ್ಳಿ ಎಲ್ಲರನ್ನು ಸ್ವಾಗತಿಸಿ ನಿರೂಪಿಸಿದರು,ಮಲ್ಲು ಚೊಕ್ಕಾ ಸತ್ಯಂಪೇಟೆ ವಂದಿಸಿದರು.ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಮತ್ತು ಅನೇಕ ಜನ ರೈತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here