ರಾಷ್ಟ್ರೀಯ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಿ: ದತ್ತಾತ್ರೇಯ ತುಗಾಂವಕರ್

0
42

ಕಲಬುರಗಿ: ಭಾರತೀಯ ಜನತಾ ಪಕ್ಷದ ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿ ಹಾಗೂ ಕಾರ್ಯಕರ್ತರು ತಮ್ಮ ಜೀವನದಲ್ಲಿ ಮುಂದೆ ಗುರಿ, ಹಿಂದೆ ಗುರು ಎನ್ನುವ ಯೋಚನೆಯನ್ನಿಟ್ಟುಕೊಂಡು ರಾಷ್ಟ್ರೀಯ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿಭಾಗೀಯ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ತುಗಾಂವಕರ್ ಅವರು ಉತ್ತರ ಮಂಡಲ ವತಿಯಿಂದ ಹಮ್ಮಿಕೊಂಡಿದ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಹೇಳಿದರು.

ಅವರು ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಲಬುರಗಿ ಉತ್ತರ ಮಂಡಲದ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ನ್ಯಾಯ ಸಿಗಲಿ ಎನ್ನುವ ಗುರಿ ನಮ್ಮದಾಗಿರಬೇಕೆಂದರು. ವಿಶ್ವದ ಅತೀ ಹೆಚ್ಚು ಕಾರ್ಯಕರ್ತರ ಹೊಂದಿರುವ ಏಕೈಕ ಪಕ್ಷ ನಮ್ಮದು, ಅನೇಕ ಸ್ಥರಗಳಲ್ಲಿ ನಮ್ಮ ಕಾರ್ಯಕರ್ತರು ವಿವಿಧ ಜವಾಬ್ದಾರಿಗಳನ್ನು ಹೊತ್ತುಕೊಂಡು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ಪ್ರೇರಣೆ ನಮ್ಮ ಹಿರಿಯರಾದ ದಿನ್ ದಯಾಳ ಉಪಾಧ್ಯಾಯರ ತತ್ವ ಹಾಗೂ ಸಿದ್ದಾಂತಗಳೆ ಪ್ರೇರಣೆ ಎಂದರು.

Contact Your\'s Advertisement; 9902492681

ಬಿಜೆಪಿ ಪಕ್ಷದಲ್ಲಿ ೮೦ ಲಕ್ಷ ಸಕ್ರೀಯ ಕಾರ್ಯಕರ್ತರು ರಾಷ್ಟ್ರೀಯ ವಿಚಾರಧಾರೆಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಪಕ್ಷವನ್ನು ಸಂಘಟಿಸಯತ್ತಾ ಬಂದಿದ್ದಾರೆ. ರಾಷ್ಟ್ರದ ಪರಮ ವೈಭವ ಸ್ಥಿತಿಯಲ್ಲಿ ನೋಡುವ ಕನಸು ಹೊತ್ತು ಲಕ್ಷಾಂತರ ಕಾರ್ಯಕರ್ತರು ತಮ್ಮ ಸೇವೆಯನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತಿದ್ದಾರೆ. ಬಿಜೆಪಿ ಪಕ್ಷವನ್ನು ಕಟ್ಟಲು ಸಾವಿರಾರೂ ಜನರು ತಮ್ಮ ಯವ್ವನವನ್ನು ಸಮರ್ಪಣೆ ಮಾಡಿದ್ದಾರೆ. ಸಿದ್ದಾಂತದೊಂದಿಗೆ ಯಾವತ್ತೂ ರಾಜೀಯಾಗದೇ ತನ್ನ ಸಂಘಟನೆಯ ಶೈಲಿಯಲ್ಲಿ ಇಂದು ವಿಶ್ವದ ಅತ್ಯಂತ ಪ್ರಭಾವ ಬೀರುವ ಪಕ್ಷ ಬಿಜೆಪಿಯಾಗಿದೆ ಎಂದ ಅವರು, ಇದರ ಸಾರಥ್ಯವನ್ನು ನಮ್ಮ ನೆಚ್ಚಿನ ಹೆಮ್ಮೆಯ ಪ್ರಧಾನಿಯಾದ ನರೇಂದ್ರ ಮೋದಿ ಅವರು ವಹಿಸಿದ್ದಾರೆ ಎಂದರು.

ಪ್ರಶಿಕ್ಷಣ ವರ್ಗದಿಂದ ಕೆಲಸಕ್ಕೆ ಉತ್ತೇಜನೆ ಎರಡು ದಿನಗಳ ಕಾಲ ನಡೆದ ಪ್ರಶಿಕ್ಷಣ ವರ್ಗದಿಂದ ನಮ್ಮೆಲ್ಲರ ಕಾರ್ಯಕರ್ತರಿಗೆ ಹಾಗೂ ಪದಾಧಿಕಾರಿಗಳಿಗೆ ಪಕ್ಷವನ್ನು ಸಂಘಟಿಸುವ ತಂತ್ರಗಾರಿಕೆ ಸಿಗಲಿದೆ ಎಂದರು. ಪ್ರಶಿಕ್ಷಣ ವರ್ಗದಲ್ಲಿ ಪಕ್ಷ ನಡೆದು ಬಂದ ದಾರಿ, ಸಮರ್ಪಣೆ, ಪಕ್ಷದ ವಿಚಾರಧಾರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ ಹೀಗೆ ಹತ್ತು ಹಲವು ವಿಷಯಗಳನ್ನು ತಾವು ಎಲ್ಲರೂ ಕೇಳಿದ್ದೀರಿ, ಇದರಿಂದ ಎಲ್ಲರೂ ಇಲ್ಲಿ ತಿಳೀದುಕೊಂಡ ವಿಷಯಗಳನ್ನು ತಮ್ಮಲ್ಲಿ ಅಳವಡಿಸಕೊಂಡು ಪಕ್ಷವನ್ನು ಮುಂಬರುವ ದಿನಗಳಲ್ಲಿ ಸಂಘಟಿಸಬೇಕಂದು ಮಾರ್ಗದರ್ಶನ ಮಾಡಿದರು.

ಪ್ರಶಿಕ್ಷಣ ವರ್ಗದ ಕೇಂದ್ರ ಬಿಂದುವಾದ ಯುವ ಮುಖಂಡ ಚಂದ್ರಕಾಂತ ಪಾಟೀಲ ಮಾತನಾಡಿ, ಅಭ್ಯಾಸ ವರ್ಗದಿಂದ ಸಾಕಷ್ಟು ಅನುಭವ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ವರ್ಗದಲ್ಲಿ ತಿಳಿದುಕೊಂಡ ವಿಷಯಗಳನ್ನು ಒಬ್ಬ ಕಾರ್ಯಕರ್ತನು ೫೦೦ ಕಾರ್ಯಕರ್ತರಿಗೆ ತಿಳಿಸಿಕೊಡಬೇಕೆಂದು ಹೇಳಿದರು. ನಗರದ ಅಧ್ಯಕ್ಷ ಸಿದ್ದಾಜೀ ಪಾಟೀಲ ಮಾತನಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಅಮರನಾಥ ಪಾಟೀಲ, ಅಶೋಕ ಮಾನಕರ್, ನಗರ ಪ್ರಧಾನ ಕಾರ್ಯದರ್ಶಿಯಾದ ಉಮೇಶ ಪಾಟೀಲ, ಅವಿನಾಶ ಕುಲಕರ್ಣಿ ಸೇರಿದಂತೆ ಪ್ರಶಿಕ್ಷಣ ವರ್ಗದ ಪಧಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here