ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ ರವರ ಸಮ್ಮುಖದಲ್ಲಿ ಆಳಂದ ಮಾಜಿ ಶಾಸಕ ಬಿ.ಆರ್. ಪಾಟೀಲ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕರಾದ ಅಶೋಕ ಸಾವಳೇಶ್ವರ ರವರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಆಳಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನೀಲ ರಾಜೋಳೆ, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ದೇವೆಂದ್ರಪ್ಪ ಮರತೂರ, ಮುಖಂಡರಾದ ಶಂಕರರಾವ ದೇಶಮುಖ ಹಿರೋಳ್ಳಿ, ಶಂಕರರಾವ ದೇಶಮುಖ ನಿರಗುಡಿ, ಮಜರಹುಸೇನ, ರಾಜಶೇಖರ ಪಾಟೀಲ ಚಿತಲಿ, ಶರಣಬಸಪ್ಪ ವಾಗೆ, ಸಂತೋಷ ಪಾಟೀಲ ಧನ್ನೂರ, ಹಣಮಂತರಾವ ಭೂಸನೂರ, ಗಣೇಶ ಪಾಟೀಲ, ಗುರಶಾಂತ ಪಾಟೀಲ, ಬಸವರಾಜ ವಾಲಿ, ಶರಣು ಪಾಟೀಲ ಆಳಂದ, ಕಲ್ಲಪ್ಪ ಹತ್ತರಕಿ, ಜೈಚಿತ್ರ ವೇದಶೆಟ್ಟಿ ಇದ್ದರು.