ಕಲಬುರಗಿ: ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಹಾಗೂ ಅಂಜುಮನ್ ತರಕಿ ಉರ್ದು ಹಿಂದ್ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 26ಕ್ಕೆ ಮಧ್ಯಾಹ್ನ 2ಕ್ಕೆ ಕೆಬಿಎನ್ ಆಸ್ಪತ್ರೆ ಎದುರುಗಡೆ ಅಂಜುಮನ್ ತರಕಿ ಉರ್ದು ಹಿಂದ್ ಸಂವಿಧಾನ ದಿನಾಚರಣೆ ಆಯೋಜಿಸಲಾಗಿದೆ.
ಶ್ರೀಶೈಲ್ ಸಾರಂಗ ಮಠದ ಡಾ. ಮಹಾಂತ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಲ್ಲಿದ್ದು, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಉತ್ತರ ಕರ್ನಾಟಕದ ಉಸ್ತುವಾರಿ ಕಾರ್ಯದರ್ಶಿಯಾದ ಡಾ. ಮೊಹಮ್ಮದ ಅಸಗರ್ ಚುಲಬುಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಹಿರಿಯ ನ್ಯಾಯವಾದಿ ಸಾದತ್ ಹುಸೇನ್ ಉಸ್ತಾದ್, ಆಂಜುಮನ್ ತರಕಿ ಉರ್ದು ಅಧ್ಯಕ್ಷರಾದ ಅಮಜದ ಜಾವೇದ,ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಅಜಿಜುಲ್ಲಾ ಸರಮಸ್ತ್, ದಲಿತ ಸೇನಾ ರಾಜ್ಯಾಧ್ಯಕ್ಷರಾದ ಹಣಮಂತ ಯಳಸಂಗಿ, ಬಾಂಸೆಫ್ ರಾಜ್ಯಾಧ್ಯಕ್ಷರಾದ ಸುಭಾಷ ಶೀಲವಂತ, ಎ.ಐ.ಎಂ.ಸಿ ಜಿಲ್ಲಾ ಆಧ್ಯಕ್ಷ ಮೌಲಾನ ಗೌಸೋದ್ದಿನ್ ಖಾಸ್ಮಿ ನ್ಯಾಯವಾದಿ ಮಜರ್ ಹುಸೇನ್, ವ್ಯಾಸ, ಸೇವಾ ಸಂಗಂ ಅಭಿವೃದ್ಧಿ ಸಮಿತಿ ನಿರ್ದೇಶಕ ಫಾದರ ಅನಿಲ ವೇಕ್ಚರ್ , ಹೈ.ಕ, ಹೋರಾಟ ಸಮತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ, ಎ.ಐ.ಎಂ.ಸಿ ಉಪಾಧ್ಯಕ್ಷ ಮೌಲಾನಾ ಜಾವೀದ ಆಲಂ ಖಾಸ್ಮಿ, ಮಾಜಿ ಮಹಾಪೌರರಾದ ಶರಣಕುಮಾರ ಮೊದಿ, ಗುರುನಾನಕ ಮಠದ ಉಪಾಧ್ಯಕ್ಷರಾದ ಜಸವೀರ ಸಿಂಗ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಸದಸ್ಯರಾದ ಶಫಿಕ್ ಅಹ್ಮದ್ ಖಾಸ್ಮಿ, ನಜೀರ್ ಅಹ್ಮದ ರಷಾದಿ, ಖಾಸಿಮ್ ಜುನೇದಿ, ಮಸೂದ ಖಾಲಿದ್ ಜಾಗಿರದಾರ, ಅಲ್ಲಬಕ್ಷ, ಸಾಜಿದ್ ಖಾನ್, ಫಿರೋಜ್ ಖಾನ್, ಮಹಮ್ಮದ್ ಇಬ್ರಾಹಿಮ್, ಮಹ್ಮದ್ ಜಿಯೋದ್ದಿನ್ ಸ್ವಾಗತ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಕೌನ್ಸಿಲ್ ಪ್ರಕಟಣೆಯಲ್ಲಿ ತಿಳಿಸಿದೆ.