ಸರಳ ಜೀವನಕ್ಕೆ ಮತ್ತೊಂದು ಹೆಸರು ನಾರಾಯಣ ರಾವ್: ಡಿ.ಕೆ ಶಿವಕುಮಾರ್

0
110

ಬಸವಕಲ್ಯಾಣ: ನಾರಾಯಣ ಅವರು ಪಕ್ಷ, ಜಾತಿ ಭೇದ ಮರೆತು ಪ್ರತಿಯೊಬ್ಬರಿಗಾಗಿ ಕೆಲಸ ಮಾಡಿ, ಸರಳ ಜೀವನಕ್ಕೆ ಮತ್ತೊಂದು ಹೆಸರು ನಾರಾಯಣ ರಾವ್ ಎಂಬಂತೆ ಬದುಕಿದರು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೀದರ್ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಬಸವಕಲ್ಯಾಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

‘ನಾರಾಯಣ ರಾವ್ ಅವರ ಬಗ್ಗೆ ನಮ್ಮ ಕಾರ್ಯಾಧ್ಯಕ್ಷರು ಹಾಗೂ ವಿಜಯ್ ಸಿಂಗ್ ಅವರ ಬಳಿ ವಿಚಾರಿಸಿದಾಗ, ಅವರು ಇನ್ನಷ್ಟೇ ಮನೆ ಕಟ್ಟಿಕೊಳ್ಳಲು ಜಾಗ ಖರೀದಿಸಿದ್ದರು. ಕೊನೆಗೆ ಅವರನ್ನು ಅದೇ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದರು.

ನಾರಾಯಣ ರಾವ್ ಅವರು ಶಾಸಕರಾಗಿ ತಮ್ಮ ಕರ್ತವ್ಯವನ್ನು ನಿರ್ವಹಣೆ ಮಾಡುತ್ತಿದ್ದರು. ಅವರು ಒಂದು ಮನೆಯನ್ನೂ ಬಿಟ್ಟು ಹೋಗಲಿಲ್ಲ. ನಾರಾಯಣ್ ಅವರು ನನಗೆ ಆತ್ಮೀಯ ಸ್ನೇಹಿತರೂ ಆಗಿದ್ದರು. ನಾನು ಅವರನ್ನು ಹತ್ತಿರದಿಂದ ಬಲ್ಲೆ,ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯದಲ್ಲಿ ಏನಾಗುತ್ತದೆ ಎಂಬುದು ಮುಖ್ಯ. ಅದೇ ರೀತಿ ನಾರಾಯಣ ರಾವ್ ಅವರು ಬದುಕಿದ್ದಾಗ ಮಾಡಿದ ಹೋರಾಟ, ನಮ್ಮ ಸರ್ಕಾರ ಬೀಳುವ ಸಂದರ್ಭದಲ್ಲಿ ಅವರು ವಿಧಾನಸಭೆಯಲ್ಲಿ ಮಾಡಿದ ಭಾಷಣ, ಇಲ್ಲಿ ನಡೆಸಿರುವ ಕಾರ್ಯಕ್ರಮ ಮರೆಯಲು ಸಾಧ್ಯವಿಲ್ಲ ಎಂದರು.

ಇಂತಹ ದುಸ್ಥಿತಿ ಬರುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಅವರ ಭಾವನೆ, ಚಿಂತನೆ, ಹೋರಾಟ ಈ ಕ್ಷೇತ್ರದಲ್ಲಿ ಶಾಶ್ವತವಾಗಿ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾವು ಕೆಲಸ ಮಾಡಬೇಕಿದೆ.ನಾರಾಯಣ ಅವರು ಪಕ್ಷ, ಜಾತಿ ಭೇದ ಮರೆತು ಪ್ರತಿಯೊಬ್ಬರಿಗಾಗಿ ಕೆಲಸ ಮಾಡಿ, ಸರಳ ಜೀವನಕ್ಕೆ ಮತ್ತೊಂದು ಹೆಸರು ನಾರಾಯಣ ರಾವ್ ಎಂಬಂತೆ ಬದುಕಿದ್ದಾರೆ. ಇಂದು ನಾವು ಅವರ ಉಸಿರು, ಜೀವನ, ಬದುಕು ನೆನಪಿಟ್ಟುಕೊಳ್ಳಬೇಕಾದರೆ ಈ ಕ್ಷೇತ್ರದ ಜನ ಯಾವುದೇ ಆಮಿಷಕ್ಕೆ ಒಳಗಾಗದೆ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಬೇಕಾಗಿದೆ ಎಂದರು.

ಮುಂಬರುವ ಉಪಚುನಾವಣೆಯಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದು ಇಲ್ಲಿ ಪ್ರಶ್ನೆ ಅಲ್ಲ. ಯಾರೇ ಅಭ್ಯರ್ಥಿ ಆದರೂ, ಎಲ್ಲ ಕಾರ್ಯಕರ್ತರು, ಮತದಾರ, ಜನತೆ ಶ್ರಮಿಸಬೇಕು. ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಸಿದ್ಧಾಂತ ಹಾಗೂ ಪಕ್ಷ ಮುಖ್ಯ.ಕಾಂಗ್ರೆಸ್ ಪಕ್ಷದಲ್ಲಿ ಹೊಸ ಪದ್ಧತಿ ಆರಂಭಿಸಿದ್ದೇವೆ. ನಾನು ಸೇರಿದಂತೆ ಇಲ್ಲಿ ಯಾರೂ ನಾಯಕರಿಲ್ಲ, ಎಲ್ಲರೂ ಕಾರ್ಯಕರ್ತರೆ. ಇದು ನಮ್ಮ ಸಂಪ್ರದಾಯ. ನಾವು ಚುನಾವಣೆ ಮಾಡುವಾಗ ಯಾರು ಎಷ್ಟೇ ದೊಡ್ಡ ನಾಯಕನಾದರೂ ಆತ ತನ್ನ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು ಆಗ ಮಾತ್ರ ನಾಯಕನಾಗಲು ಸಾಧ್ಯ ಎಂದು ತಿಳಿಸಿದ್ದರು.

ನಾನು, ನನ್ನ ಜತೆಗೆ ಬಂದಿರುವ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಎಲ್ಲರೂ ಕಾರ್ಯಕರ್ತರಾಗಿ ಬಂದಿದ್ದೇವೆ.’ಈ ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಮಾಜಿ ಸಚಿವ ರಹೀಮ್ ಖಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ, ಶಾಸಕ ಅಜಯ್ ಸಿಂಗ್, ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್, ರಾಜಶೇಖರ್ ಪಾಟೀಲ್, ದಿವಂಗತ ಶಾಸಕ ನಾರಾಯಣ ರಾವ್ ಅವರ ಪತ್ನಿ ಮಲ್ಲಮ್ಮ ಹಾಗೂ ಪುತ್ರ ಗೌತಮ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here