ಆಮ್ ಆದ್ಮಿ ಪಕ್ಷದಿಂದ ನ. 26ಕ್ಕೆ ಕೊರೋನಾ ಯೋಧರಿಗೆ ಸನ್ಮಾನ

0
30

ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ಸ್ವರಾಜ್ಯ ಕಲ್ಪನೆಯ ಮೇಲೆ ಸ್ಥಾಪಿತವಾದ ಆಮ್ ಆದ್ಮಿ ಪಕ್ಷ ಇಂದು ದೇಶದಲ್ಲೇ ವೇಗವಾಗಿ ಬೆಳೆಯುತ್ತಿರುವ ರಾಜಕೀಯ ಪಕ್ಷವಾಗಿದ್ದು ಇದೇ ಗುರುವಾರ 26 ರಂದು ಸಂಜೆ 4 ಗಂಟೆಗೆ ಹಲಸೂರು ಕೆರೆ ಬಳಿಯ ಆರ್‌ಬಿಎನ್‌ಎಂಎಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮಾಹಿತಿ ನೀಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ವರ್ಷ ಎಂಟು ಸಾಧನೆ ನೂರೆಂಟು ಎನ್ನುವ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ವೇಳೆ ತಮ್ಮ ಪ್ರಾಣದ ಹಂಗನ್ನು ತೊರೆದು ಲಾಕ್‌ಡೌನ್ ವೇಳೆ ದುಡಿದ ಕರ್ನಾಟಕದ ಕೊರೋನಾ ಯೋದರಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಇಡೀ ಭಾರತದ ರಾಜಕೀಯ ಇತಿಹಾಸದಲ್ಲಿ ಇಷ್ಟು ವೇಗವಾಗಿ ಬೆಳೆದ ರಾಜಕೀಯ ಪಕ್ಷ ಇನ್ನೊಂದಿಲ್ಲ ಕೇವಲ ಎಂಟು ವರ್ಷದಲ್ಲಿ ನೂರೆಂಟು ಸಾಧನೆ ಮಾಡಿದ ಆಮ್ ಆದ್ಮಿ ಪಕ್ಷ ಭಾರತದ 130 ಕೋಟಿ ಜನರಲ್ಲಿ ಬದಲಾವಣೆಯ ಭರವಸೆ ಮೂಡಿಸಿದೆ ಎಂದರು.

ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಅವರು ಮಾತನಾಡಿ, ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ನಾಯಕರಾದ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಗದ್ದುಗೆಯನ್ನು 3 ಬಾರಿ ಏರಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ದೆಹಲಿಯ ಜನರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮಾಡಿದ ಕ್ರಾಂತಿಕಾರಕ ಬದಲಾವಣೆಗಳಿಂದ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಸರ್ಕಾರ ವಿಶ್ವದರ್ಜೆಯ ಸವಲತ್ತುಗಳನ್ನು ತನ್ನ ಜನರಿಗೆ ಪರಿಚಯಿಸಿದೆ. ಈ ಸಾಧನೆಗಳ ಕುರಿತು ತಯಾರಿಸಿರುವ “ಇನ್‌ಸಿಗ್ನಿಫಿಕೆಂಟ್ ಮ್ಯಾನ್” ಎನ್ನುವ ಚಲನಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.

ಆರ್.ಬಿ.ಎನ್.ಎಂ.ಎಸ್ ಪ್ರಥಮ ದರ್ಜೆ ಕಾಲೇಜು ಸಭಾಂಗಣ, ಹಲಸೂರು ಕೆರೆ ಹತ್ತಿರ, 26ಕ್ಕೆ ಗುರುವಾರ ಸಮಯ ಸಂಜೆ 5.30 ಸಾಂಸ್ಕೃತಿಕ ಕಾರ್ಯಕ್ರಮಗಳು, ಇನ್‌ಸಿಗ್ನಿಫಿಕೆಂಟ್ ಮ್ಯಾನ್ ಚಲನಚಿತ್ರ ಪ್ರದರ್ಶನ ಮತ್ತು ಏಷ್ಯಾದ ಬಲಶಾಲಿ ವ್ಯಕ್ತಿ ಮನೋಜ್ ಚೋಪ್ರಾ ಅವರಿಂದ ಶಕ್ತಿ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here