ಮಹಿಳೆಯೊಬ್ಬಳು ಕಲಿತರೆ ವಿದ್ಯಾಲಯ ತೆರೆದಂತ: ಶಶಿಕಲಾ ಟೆಂಗಳಿ

0
57

ಕಲಬುರಗಿ: ಮಹಿಳೆಯೊಬ್ಬಳು ವಿದ್ಯೆ ಕಲಿತರೆ ವಿದ್ಯಾಲಯ ತೆರೆದಂತೆ ನಾನುಡಿಗೆ ಅರ್ಥವನ್ನು ಬರೆದವರು ನಮ್ಮ ಭಾಗದ ಶಿಕ್ಷಣ ಶಿಲ್ಪಿ ದಿ. ಸುರೇಖಾ ಶಂಕರ ಕೊಡ್ಲಾ ಅವರು ಎಂದರೆ ತಪ್ಪಾಗಲಾರದು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಶಿಕಲಾ ಟೇಂಗಳಿ ಅಭಿಪ್ರಾಯಪಟ್ಟರು.

ಕಲಬುರಗಿ ನಗರದ ಕುಸನೂರ ರಸ್ತೆಯಲ್ಲಿರುವ ಪ್ರೇಸ್ ಕ್ಲಬ್ ಸಂಭಾಗಣದಲ್ಲಿ ದಿ. ಬಿ.ಸುರೇಖಾ ಎಸ್ ಕೋಡ್ಲಾ ಸ್ಮಾರಕ ವೆಲ್ ಪೇರ್ ಸೋಸೈಟಿ ವತಿಯಿಂದ ಬಿ.ಸುರೇಖಾ ಶಂಕರ ಕೊಡ್ಲಾ ಅವರ ಪ್ರಥಮ ಪುಣ್ಯಾರಾಧನೆ ಹಾಗೂ ಬಿ ಸುರೇಖಾ ಎಸ್ ಕೊಡ್ಲಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಿ ಸುರೇಖಾ ಕೊಡ್ಲಾ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ, ಅವರ ಕೈಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನೀಡಿದ್ದಾರೆ. ಅವರ ಪುಣ್ಯರಾದನೆ ನಿಮಿತ್ಯ ಸುಸೈಟಿ ವತಿಯಿಂದ ನಗರದ ಸುರಕ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಬಡ ರೋಗಿಗಳಿಗೆ ಉಚಿತ ಹಾಸಿಗೆ ವ್ಯವಸ್ಥೆ ಕಲ್ಪಿಸಿರುವ ಶಾಘ್ಲನಿಯವಾಗಿದೆ ಎಂದು ಹೇಳಿದ್ದರು.

Contact Your\'s Advertisement; 9902492681

ಬಳಿಕ ಕಲಬುರಗಿಯ ಸ.ಪ.ಪೂ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಡಾ. ಸಂಗೀತಾ ಕಟ್ಟಿಮನಿ ಅವರು ಮಾತನಾಡಿ ಶಿಕ್ಷಣವೆ ಜೀವನ, ಜೀವನವೇ ಶಿಕ್ಷಣ ಎಂಬತೆ ಶಿಕ್ಷಣವೇ ತಮ್ಮ ಗುರಿಯಾಗಿಟ್ಟುಕೊಂಡ ಮಹಿಳೆ ಬಿ ಸುರೇಖಾ ಶಂಕರ ಕೊಡ್ಲಾ ಅವರಾಗಿದ್ದರು. ಈ ಭಾಗದ ಮಹಿಳಾ ಶಿಕ್ಷಣ ಶಿಲ್ಪಿ ಬಿ ಸುರೇಖಾ ಕೊಡ್ಲಾ ಅವರಾಗಿದ್ದರು ಎಂದು ಹೇಳಿದ್ದರು ತಪ್ಪಾಗಲಾರದು ಎಂದು ಸ್ಮರಿಸಿದ್ದರು.
ಈ ಸಂದರ್ಭದಲ್ಲಿ ಕೊಡ್ಲಾ ಉರಿಲಿಂಗ ಪೆದ್ದಿ ಸಂಸ್ಥಾನ ಮಠದ ಶ್ರಿ. ಮ.ನಿ.ಪ್ರ ನಂಜುಂಡ ಮಹಾಸ್ವಾಮಿಗಳು, ಕಲಬುರಗಿ ರೊಟರಿ ಕ್ಲಬ್ ಅಧ್ಯಕ್ಷರಾದ ಡಾ. ಪ್ರದೀಪ ಕುಮಾರ ಮುರುಡಕರ, ಪ್ರತಾಪಸಿಂಗ ತಿವಾರಿ, ಶಂಕರ ಕೊಡ್ಲಾ, ವಿನಾಯಕ ಕೊಡ್ಲಾ, ಡಾ. ಚಂದ್ರಿಕಾ ಕೊಡ್ಲಾ, ವಿಜೇಂದ್ರ ಕೊಡ್ಲಾ, ಪ್ರೋ ಶಿವರಾಜ ಪಾಟೀಲ, ರಾಜಶೇಖರಯ್ಯ ಸ್ವಾಮಿ, ಅಕ್ರಂಪಾಶಾ ಮೋಮಿನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಆಸ್ಪತ್ರೆಯಲ್ಲಿ ಒಂದು ಹಾಸಿಗೆ ಉಚಿತ ಸೇವೆ ಉದ್ಘಾಟನೆ: ದಿ.ಬಿ. ಸುರೇಖಾ ಎಸ್ ಕೋಡ್ಲಾ ಸ್ಮಾರಕ ವೆಲ್ ಫೇರ ಸೂಸೈಟಿ ವತಿಯಿಂದ ಕಲಬುರಗಿ ನಗರದ ಕುಸನೂರ ರಸ್ತೆಯಲ್ಲಿರುವ ಸುರಕ್ಷಾ ಆಸ್ಪತ್ರೆಯಲ್ಲಿ ಒಂದು ಹಾಸಿಗೆ ಬಡವರಿಗೆ ಉಚಿತ ಸೇವೆಗೆ ಮಿಸಲಿಟ್ಟಿದ್ದು ಕಲಬುರಗಿ ರೊಟರಿ ಕ್ಲಬ್ ಅಧ್ಯಕ್ಷರಾದ ಡಾ. ಪ್ರದೀಪ ಕುಮಾರ ಮುರುಡಕರ ಅವರು ಹಾಸಿಗೆ ಉದ್ಘಾಟನೆ ಮಾಡಿದ್ದರು.

ಬಿ.ಸುರೇಖಾ ಎಸ್ ಕೋಡ್ಲಾ ಪ್ರಶಸ್ತಿ ಪ್ರಧಾನ: ಕಲಬುರಗಿ ಸ.ಪ.ಪೂ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಭಾರತಿ ಪಾಂಡ್ವೆ, ಕಲಬುರಗಿ ರೊಟರಿ ಕ್ಲಬ್ ಪ್ರೌಢ ಶಾಲೆಯ ಮುಖ್ಯಾಪಾಧ್ಯಯರಾದ ಶ್ರೀಮತಿ ಬಸಮ್ಮ ಪಾಟೀಲ್, ಶಹಬಾದನ ಕುಟುಕುಂಟಾ ಅಕ್ಕನಾಗಮ್ಮ ಹಿ.ಪ್ರಾ.ಶಾಲೆಯ ಶಿಕ್ಷಕಿಯಾಗಿರುವ ಶ್ರೀಮತಿ ಅಕ್ಕಮ್ಮ ಮಲ್ಲೇಶಪ್ಪ ಅಡಕಿ, ಹಾಗೂ ಕಲಬುರಗಿ ಪ್ರತಿನಿಧಿ ಪತ್ರಿಕೆ ಸಂಪಾದಕರಾದ ಶ್ರೀಮತಿ ನಾಗಲಾಂಬಿಕಾ ರವಿಕುಮಾರ ಹೊನ್ನ, ಸಂಧ್ಯಾಕಾಲ ದಿನ ಪತ್ರಿಕೆಯ ಕಲಬುರಗಿ ವರದಿಗಾರರಾದ ಕು. ಅಸ್ಮಾಂ ಇನಾಮದಾರ ಹಾಗೂ ಪಿಯುಸಿ ಯಲ್ಲಿ ಉತ್ತಮ ಅಂಕ ಪಡೆದ ಶೃತಿ ಸಿದ್ದರಾಮ ತಳವಾರ , ಹಾಗೂ ಹತ್ತನೆ ತರಗತಿಯಲ್ಲಿ ಉತ್ತಮ ಅಂಕ ಪಡೆದ ಕು. ಸನಾ ಅಬ್ದುಲ್ ಅವರಿಗೆ ‘ಬಿ.ಸುರೇಖಾ ಎಸ್ ಕೊಡ್ಲಾ’ ಪ್ರಶಸ್ತಿ ಪ್ರಧಾನ ಮಾಡಲಾಯಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here