ಕಲಬುರಗಿ: ಸ್ವಾಮಿ ವಿವೇಕಾನಂದ ಸೇವಾಸಂಸ್ಥೆ ಹಾಗೂ ನೇಹರು ಯುವ ಕೇಂದ್ರ ಆಶ್ರಯದಲ್ಲಿ ಇಲ್ಲಿನ ಗಣೇಶ ನಗರದಲ್ಲಿ ೪೯ನೇ ನೇಹರು ಯುವ ಕೇಂದ್ರದ ಸಂಸ್ಥಾಪನಾ ದಿನ ಆಚರಿಸಲಾಯಿತು.
ಈ ವೇಳೆ ಜಿಲ್ಲಾ ನೇಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಹರ್ಸಲ್ ತಲಸ್ಕರ್ ಅವರು ಚಾಲನೆ ನೀಡಿ ಮಾತನಾಡಿದರು.
ಯುವಕರನ್ನು ಸಂಫಟನೆ ಮುಖಾಂತರ ಮುಂದೆಬರುಬೇಕು. ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಎಸ್. ಹರವಾಳ ಮಾತನಾಡಿ, ಸ್ವಾಮಿವಿವೇಕಾನಂದ ಸೇವಾಸಂಸ್ಥೆಯಿಂದ ಹೊಲಿಗೆ ಹಾಗೂ ಕಂಪ್ಯೂಟರ್ ತರಬೇತಿದಾರರಿಗೆ ಉಚಿತ ತರಬೇತಿ ಪದೆದುಕೊಂಡು ಸ್ವಂತ ಉದ್ಯೋಗ ಮಾಡಬೇಕು ಎಂದು ಕರೆ ನೀಡಿದರು.
ಸಿದ್ರಾಮಶ್ವ ಮಾಳಾ, ವಿನೋದ ಕುಲಕರ್ಣಿ, ತಿಪ್ಪಣ್ಣ ಸರಡಗಿ, ಎಂ.ಎಂ.ಶಿರವಟ್ಟಿ, ರೇಖಾ ಕುಲಕರ್ಣಿ, ಶ್ರೀದೇವಿ, ಜಗದೇವಯ್ಯ ಇದ್ದರು.