ಕಲಬುರಗಿ: ಹಡಪದ (ಕ್ಷೌರಿಕ) ಸಮಾಜಕ್ಕೆ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಹಡಪದ (ಕ್ಷೌರಿಕ) ಸಮಾಜ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಡಪದ ಸುಗೂರ ಅವರು ಮಂಗಳವಾರ ಕಲಬುರಗಿ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಸಿಎಂ ಬಿಎಸ್‌ವೈನವರು ೨೦೧೭ರಂದು ಆಗ ವಿರೋಧ ಪಕ್ಷದ ನಾಯಕರಾಗಿದ್ದಾಗ ಹಡಪದ ಸಮಾಜದ ಜನ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ್ದಾಗ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ೨೪ ಗಂಟೆಯಲ್ಲಿಹಡಪದ ಕ್ಷೌರಿಕ ಸಮಾಜವನ್ನು ಪ್ರವರ್ಗ-೧ಕ್ಕೆ ಮತ್ತು ಎಸ್‌ಟಿಗೆ ಸೇರ್ಪಡೇ ಮಾಡಿ ಕೇಂದ್ರಕ್ಕೆ ಶಿಪಾರಸು ಮಾಡುವೆ ಎಂದು ಭರವಸೆ ನೀಡಿದ್ದರು. ಆದರೆ, ಇನ್ನೂವರೆಗೂ ಯಾವುದೇ ಭರವಸೆ ಈಡೇರಿಸಿಲ್ಲ. ಹೀಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಹಡಪದ ಕ್ಷೌರಿಕ ಸಮಾಜಕ್ಕೆ “ಹಜಾಮ್’ ಎಂಬ ಪದವು ಉರ್ದು ಪದವಾಗಿದ್ದುಈ ಪದ ಬಳಕ್ಕೆ ಮಾಡಿದರೆ ಕಾನೂನಿನ ಪ್ರಕಾರ ಅಟ್ರಾಸಿಟಿ ಕಾನೂನು ಜಾರಿಗೆ ತರುವಂತೆ ಮಾಡುವುದು, ಹಡಪದ ಸಮಾಜದ ಸೂಕ್ತವ್ಯಕ್ತಿಯನ್ನು ರಾಜಕೀಯದಲ್ಲಿ ನಾಮನೀರ್ದೇಶನ ಮಾಡುವೆ ಎಂದು ಹೇಳಿದ್ದರು. ಆದರೆ ಆ ಭರವಸೆ ಮಾತಿನಂತೆ ಬಿಎಸ್‌ವೈ ಹಡಪದ ಸಮಾಜಕ್ಕೆ ಕೊಟ್ಟ ಮಾತು ತಪ್ಪಿದ್ದಾರೆ. ಹೀಗಾಗಿ ಡಿ.ಕೆ.ಶಿವುಕುಮಾರ ಅವರು ಹಡಪದ ಸಮಾಜಕ್ಕೆ ಈಡೇರಿಸಲು ಸರಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು.