ಕಕ್ಕೇರಾ ಪಟ್ಟಣಕ್ಕೆ ವಾಲ್ಮೀಕಿ ಗುರುಪೀಠದ ಶ್ರೀಗಳ ಆಗಮನ

0
156

ಸುರಪುರ : ತಾಲೂಕಿನ ವಾಲ್ಮೀಕಿ ಸಮಾಜದ ಸಭೆಯನ್ನು ರಾಜನ ಹಳ್ಳಿಯಲ್ಲಿ ನಡೆಯುವ ಜಾತ್ರೆ ಪೂರ್ವ ಸಿದ್ಧತಾ ಸಭೆ ಹಾಗೂ ಮೀಸಲಾತಿ ಹೆಚ್ಚಳ ಕುರಿತು, ಮತ್ತು ಜನಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮುಖಂಡರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮುಖಂಡರು, ನಾಳೆ 27 ನವೆಂಬರ್ ಬೆಳಿಗ್ಗೆ 11 ಗಂಟೆಗೆ ತಾಲೂಕಿನ “ಕಕ್ಕೇರಾ” ಪಟ್ಟಣದ ಶ್ರೀವಾಲ್ಮೀಕಿ ಭವನದಲ್ಲಿ ಸಭೆಯನ್ನು ಕರೆಯಲಾಗಿದೆ, ಸಭೆಯಲ್ಲಿ ಪೂಜ್ಯ ಶ್ರೀ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ ಹಾಗೂ ಸುರಪುರದ ಹಾಲಿ ಶಾಸಕರು,ಮಾಜಿ ಶಾಸಕರು, ಜಿಲ್ಲಾ.ತಾಲೂಕಾ, ಗ್ರಾಮ ಪಂಚಾಯತ್ ಸದಸ್ಯರು, ಪುರಸಭೆ ಸದಸ್ಯರು,ನಗರ ಸಭೆ ಸದಸ್ಯರುಗಳ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿದೆ

Contact Your\'s Advertisement; 9902492681

ಈ ಸಭೆಗೆ ಸುರಪುರ ಹಾಗೂ ಹುಣಸಿಗಿ ತಾಲೂಕಿನ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಯುವಕರು ಹಾಗೂ ವಾಲ್ಮೀಕಿ ಸಂಘದ ವಿವಿಧ ಸಂಘಟನೆಯ ಮುಖಂಡರು ಹಾಗೂ ಗ್ರಾಮ ಘಟಕಗಳ ಅಧ್ಯಕ್ಷ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಭಾಗವಹಿಸಬೇಕೆಂದು ತಿಳಿಸಿದ್ದು, ಪೂಜ್ಯ ಜಗದ್ಗುರುಗಳು ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳು ನಮ್ಮ ತಾಲೂಕಿಗೆ ಆಗಮಿಸಿ, ಸಮಾಜ ಬಾಂಧವರಿಗೆ ಹಿತನುಡಿಗಳನ್ನು ಹೇಳಲಿದ್ದಾರೆ ಕಾರಣ ತಾವುಗಳು ಒಗ್ಗಟ್ಟಾಗಿ ಒಬ್ಬರು ಮತ್ತೊಬ್ಬರಿಗೆ ಮಾಹಿತಿಯನ್ನು ಕೊಟ್ಟು ಈ ಸಭೆಗೆ ಆಗಮಿಸಿ ಯಶಸ್ವಿಗೊಳಿಸುವಂತೆ ಕೊರಿದ್ದಾರೆ.

ಸಂಘದ ಮುಖಂಡರಾದ ಸೀತಾರಾಮ ನಾಯಕ ಪಾಟೀಲ್,
ಸಿದ್ದನಗೌಡ ಪಾಟೀಲ್ ಕರಿಭಾವಿ , ಗಂಗಾಧರ ನಾಯಕ್ ತಿಂಥಣಿ, ಸೋಮನಾಥ ಡೊಣ್ಣೆಗೇರಾ ನಗರ ಸಭೆ ಸದಸ್ಯರು ಸುರಪುರ,ರಮೇಶ್ ದೊರೆ ಆಲ್ದಾಳ,ತಿರುಪತಿಗೌಡ ಚಿಗರಿಹಾಳ ,ವೆಂಕಟೇಶ ಬೇಟೆಗಾರ, ಪರಮಣ್ಣ ಕಕ್ಕೇರಾ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here