ಮೋಡಕವಿದ ವಾತಾವರಣ ಕೀಟ ರೋಗ ಸಮೀಕ್ಷೆ

0
26

ಕಲಬುರಗಿ: ಮೋಡಕವಿದ ವಾತಾವರಣದಿಂದ ಹುಳು ಹಾಗೂ ಎಲೆ ಚುಕ್ಕೆರೋಗ ಉಲ್ಬಣವಾಗುವ ಸಾಧ್ಯತೆ ಇರುವುದರಿಂದ ರೈತರು ಹೊಲಗಳಲ್ಲಿನ ಬೆಳೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಕೆ.ವಿ.ಕೆ ಸಸ್ಯರೋಗ ತಜ್ಞರಾದ ಡಾ. ಜಹೀರ್ ಅಹಮ್ಮದ್ ತಿಳಿಸಿದರು.

ಸೇಡಂ ತಾಲೂಕಿನ ಸಮಖೇಡ್, ಮಳಖೇಡ್, ನೀಲಹಳ್ಳಿ, ಬೀರನಹಳ್ಳಿ, ನಿಡಗುಂದಾ, ಉಡಗಿ, ಆಡಕಿ, ಮುಧೋಳ, ಲಿಂಗಪಳ್ಳಿ ಭಾಗಗಳಲ್ಲಿ ಕಡಲೆ, ತೊಗರಿ, ಹತ್ತಿ, ಜೋಳ, ಕುಸುಬೆ ಬೆಳೆಯಲ್ಲಿ ಕೀಟ, ರೋಗ, ಪೋಷಕಾಂಶ ನ್ಯೂನತೆ ಬಾಧೆಯನ್ನು ಪತ್ತೆ ಹಚ್ಚಲಾಯಿತು.

Contact Your\'s Advertisement; 9902492681

ತೊಗರಿ ೭೫% ಹೂ ಬಿಟ್ಟಿರುತ್ತದೆ. ಮರುಕಾ ಜಾಡಮಿ ಬಾದೆಯ ಹತೊಟಿ ಇದರ ನಿರ್ವಹಣೆಗಾಗಿ: ರೈನಾಕ್ಸಿಪೈರ ೦.೧೫ ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ೬೦ ಮಿ.ಲೀ. ಪ್ರತಿ ಎಕರೆಗೆ ಬರುವಂತೆ ಅಥವಾ ಎಮಾಮ್ಕೆಟಿನ್ ಬೆಂಜೊಯಟ್ ೦.೨ಗ್ರಾಂ (ಎಕರೆಗೆ ೮೦ ಗ್ರಾಂ) ತೊಗರಿಯಲ್ಲಿ ಹೂ ಮತ್ತು ಕಾಯಿ ಉದಿರುವಿಕೆ ನಿಲ್ಲಿಸಲು ಮತ್ತು ಕಾಳು ದಪ್ಪಾಗಲು – ಪಲ್ಸ ಮ್ಯಾಜಿಕ್ ೨ಕೆಜಿ ಪ್ರತೀ ಎಕರೆಗೆ ಸಿಂಪಡಿಸಬೇಕು.

ಕ್ಷೇತ್ರ ಸಮೀಕ್ಷೆಯಲ್ಲಿ ಕೃಷಿ ಇಲಾಖಾ ಅಧಿಕಾರಿಗಳಾದ ಬಸರಾಜ ಕೋಡ್ಸ, ಬಾಲರಾಜ ಎಸ್. ಮತ್ತು ಸಂಜೀವಕುಮಾರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here