ಕಲಬುರಗಿ: ನೂತನ ಗ್ರಂಥಾಲಯ ಉದ್ಘಾಟನೆ

0
17

ಕಲಬುರಗಿ: ಕಲ್ಯಾಣ ಕರ್ನಾಟಕ ವಿಭಾಗದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ಮಾರ್ಗದರ್ಶಿ ತರಬೇತಿ ಕೇಂದ್ರ ಕಲಬುರಗಿಯಲ್ಲಿ ನೂತನ ಗ್ರಂಥಾಲಯವನ್ನು ನಿವೃತ್ತ ಉಪನ್ಯಾಸಕ ಗಂಗಾಧರ ತೆಗ್ಗಳ್ಳಿ ಹಾಗೂ ನಿವೃತ್ತ ಪ್ರಾಚಾರ್ಯ ನರೇಂದ್ರ ಬಡಶೇಶಿ ಅವರು ಜಂಟಿಯಾಗಿ ಉದ್ಘಾಟಿಸಿದರು.

ಗ್ರಂಥಾಲಯದ ಕುರಿತು ಪ್ರಾಸ್ತಾವಿಕವಾಗಿ ನಿವೃತ್ತ ಪ್ರಾಚಾರ್ಯ ನರೇಂದ್ರ ಬಡಶೇಶಿ ಅವರು ಮಾತನಾಡುತ್ತಾ ಈ ಭಾಗದ ವಿದ್ಯಾರ್ಥಿಗಳಿಗೆ ಏಕಾಗ್ರತೆಯಿಂದ ಸ್ಪರ್ಧಾತ್ಮ ಪರೀಕ್ಷೆಯನ್ನು ಯಶಸ್ವಿಯಾಗಿ ಅಧ್ಯಾಯನ ಮಾಡಲು ಇಂತಹ ಗ್ರಂಥಾಲಯದ ಅವಶ್ಯಕತೆ ಇದೆ ಎಂದು ಹೇಳಿದರು.

Contact Your\'s Advertisement; 9902492681

ಮುಂದೆ ಬರತಕ್ಕಂತ ದಿನಗಳಲ್ಲಿ ಈ ಭಾಗದಿಂದ ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್ ಉನ್ನತವಾದ ಅಧಿಕಾರಿಗಳು ಈ ಭಾಗದಿಂದ ಹೊರಹೊಮ್ಮಲೆಂದು ಆಶಿಸಿದರು.

ಗಂಗಾಧರ ತೆಗ್ಗಳ್ಳಿ ಅವರು ಮಾತನಾಡಿ ಗ್ರಂಥಾಲಯದ ವಿಶೇಷತೆ ಮತ್ತು ಅದರ ಸದುಪಯೋಗದ ಕುರಿತು ವಿದ್ಯಾರ್ಥಿಗಳಿಗೆ ಗ್ರಂಥಾಲಯವು ಜ್ಞಾನದ ಬಂಡಾರ ಹೊಂದಿರುವುದು ಅದರ ಸದುಪಯೋಗ ಪಡೆದುಕೊಂಡು ಸ್ಪರ್ಧಾತಿಗಳು ಯಶಸ್ವಿಯಾಗಲೆಂದು ಹಾರೈಸಿದರು.

ಸಂಸ್ಥೆಯ ಗೌರವ ನಿರ್ದೇಶಕರಾದ ಸಂತೋಷ ಮೇಟಗಾರ ಅವರು ನೂತನ ಗ್ರಂಥಾಲಯದ ಈ ಭಾಗದ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇದ್ದು, ಅದರ ನೇರವು ಪಡೆದುಕೊಳ್ಳಲೆಂದು ಸಲಹೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here