ಸುರಪುರ: ನಗರದ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣ ಸಂಸ್ಥೆಯಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಡಾ: ಬಾಬಾ ಸಾಹೇಬ್ ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ನಂತರ ಪ್ರಾಂಶುಪಾಲರಾದ ಪರಶುರಾಮ ಚಾಮನಾಳ ಸಂವಿಧಾನದ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿ,ಭಾರತದ ಸಂವಿಧಾನವನ್ನು ಇಡೀ ಜಗತ್ತೆ ಮೆಚ್ಚಿದೆ,ಅಂತಹ ಸಂವಿಧಾನವನ್ನು ಡಾ:ಬಿ.ಆರ್.ಅಂಬೇಡ್ಕರರು ಬರೆದು ಕೊಟ್ಟಿದ್ದು,ಇದನ್ನು ಎಲ್ಲರು ಗೌರವಿಸುವ ಜೊತೆಗೆ ಸಂವಿಧಾನವನ್ನು ಓದೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ರೇಣುಕಾ ಕನಕಗಿರಿ ಉಪನ್ಯಾಸಕರಾದ ಮಲ್ಲು ಬಾದ್ಯಾಪುರ ಶರಣಪ್ಪ ಅನಸೂರ ಶರಣಪ್ಪ ಮುಡಬೂಳ ಶಿಲ್ಪಾ ಕನಕಗಿರಿ ಶರಣಪ್ಪ ನಿಂಗಣ್ಣಾ ಹೆಗ್ಗನದೊಡ್ಡಿ ರಮೇಶ ಟಣಕೇದಾರ ಹೀನಾ ಪರವಿನ್ ಸನಾ ಮುರದಾ ಇದ್ದರು. ಶ್ರೀ ಪ್ರಭು ಮಹಾವಿದ್ಯಾಲಯ: ನಗರದ ಶ್ರೀ ಪ್ರಭು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸಂವಿಧಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಪ್ರಾಂಶುಪಾಲ ಎಸ್.ಹೆಚ್.ಹೊಸ್ಮನಿ ಡಾ:ಬಿ.ಆರ್.ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ನಂತರ ಉಪನ್ಯಾಸಕ ಸಾಯಿಬಣ್ಣ ಮುಡಬೂಳ ಪ್ರಾಸ್ತಾವಿಕವಾಗಿ ಮಾತನಾಡಿ,ಭಾರತದ ಸಂವಿಧಾನ ಇಡೀ ದೇಶದ ಜನರ ದಾರಿ ದೀವಿಗೆ ಇದ್ದಂತೆ.ಎಲ್ಲರು ಮೂಲಭೂತ ಹಕ್ಕುಗಳನ್ನು ಹೊಂದಿದ್ದು ಅವುಗಳನ್ನು ದೊರಕಿಸುವ ಕೆಲಸ ಸಂವಿಧಾನ ಮಾಡುತ್ತದೆ,ಸಂವಿಧಾನ ಎಂಬುದು ದೇಶದ ಆತ್ಮವಿದ್ದಂತೆ,ಸಂವಿಧಾನದ ಆಶಯಗಳನ್ನು ಎಲ್ಲರು ಎತ್ತಿ ಹಿಡಿಯುವುದು ಪ್ರತಿ ಭಾರತೀಯನ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪನ್ಯಾಸರಕಾದ ಎಂ.ವಿಶ್ವನಾಥ ಹಾಗು ಡಾ: ವರ್ಮಾರವರು ಮಾತನಾಡಿದರು,ವೇದಿಕೆ ಮೇಲೆ ಪಿಯು ವಿಭಾಗದ ಪ್ರಾಚಾರ್ಯ ಎಮ್.ಡಿ.ವಾರೀಸ್ ಎಲ್.ಬಿ.ಕುಲಕರ್ಣಿ ಪ್ರಾಂಶುಪಾಲ ಎಸ್.ಹೆಚ್.ಹೊಸ್ಮನಿ ಅಧ್ಯಕ್ಷತೆ ವಹಿಸಿದ್ದರು.ಉಪನ್ಯಾಸಕ ಮಂಜುನಾಥ ಚೆಟ್ಟಿ ನಿರೂಪಿಸಿದರು,ಡಾ:ಉಪೇಂದ್ರ ನಾಯಕ ಸುಬೇದಾರ ಸ್ವಾಗತಿಸಿದರು,ಡಾ: ಸುರೇಶ ಮಾಮಡಿ ವಂದಿಸಿದರು.