ನಾಟಕ ಲೋಕಕ್ಕೆ ವಿಶ್ವಮಾನ್ಯತೆ ಕೊಟ್ಟವರು ಕಾರ್ನಾಡ್

0
71

ಕಲಬುರಗಿ: ಹೊಸ ಮತ್ತು ಹಳೆ ತಲೆಮಾರಿನ ಲೇಖಕರಿಗೆ ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡ್ ಸಾಕ್ಷಿಪ್ರಜ್ಷೆಯಂತಿದ್ದರು ಎಂದು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ ಎಸ್ ಪಾಟೀಲ್ ಅಭಿಪ್ರಾಯಪಟ್ಟರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ, ಕನ್ನಡ ಮತ್ತು ಆಂಗ್ಲ್ ವಿಭಾಗಗಳ ಸಹಯೋಗದೊಂದಿಗೆ ವಿಭಾಗದ ಅನುಭವ ಮಂಟಪದಲ್ಲಿ ಜರುಗಿದ ಸಂತಾಪ ಸೂಚಕ ಸಭೆಯಲ್ಲಿ ಅಗಲಿದ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ ನುಡಿ ನಮನ ಸಲ್ಲಿಸಿದರು.

Contact Your\'s Advertisement; 9902492681

ಕನ್ನಡ ನಾಟಕ ಪ್ರಕಾರವನ್ನು ವಿಶ್ವದರ್ಜೆಯ ಮಟ್ಟಿಗೆ ಏರಿಸಿ ಅದನ್ನು  ನಿರಂತರವಾಗಿ ಒಂದು ಪ್ರಕ್ರಿಯೆಯನ್ನಾಗಿ ಮಾಡಿದ ಶ್ರೇಯ ಕಾರ್ನಾಡರಿಗೆ ಸಲ್ಲುತ್ತದೆ. ಅವರ ನಿಧನದಿಂದ ನಾಡಿನ ಸಾಹಿತ್ಯ ಲೋಕ ಬಡವಾಗಿದೆ ಎಂದರು.

ಪತ್ರಿಕೋದ್ಯಮದ ವಿಭಾಗದ ಮುಖ್ಯಸ್ಥ ಟಿ ವಿ ಶಿವಾನಂದನ್ ಮಾತನಾಡಿ, ಕಾರ್ನಾಡರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ ಅದರ ಜೊತೆಗೆ ಅವರು ಸಾಮಾಜಿಕ ಸಮಸ್ಯೆಗಳಿಗೂ ಧ್ವನಿಯಾಗುತ್ತಿದ್ದರು. ಅವರಲ್ಲಿ ಅನ್ಯಾಯದ ವಿರುದ್ಧ ಮಾತನಾಡುವ ಶಕ್ತಿ ಇತ್ತು ಎಂದು ನುಡಿದರು.

ಆಂಗ್ಲ್ ವಿಭಾಗದ ಮುಖ್ಯಸ್ಥೆ ಡಾ. ಗೀತಮಾಲಾ ಎಲಿನೋರ್ ಮಾತನಾಡಿ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಮೇಲೆ ಪ್ರಭುತ್ವ ಹೊಂದಿದ್ದ ಕಾರ್ನಾಡರು ತಮ್ಮ ನಾಟಕಗಳಲ್ಲಿ ಸೂಕ್ಷ್ಮ ವಿಷಯಗಳನ್ನು ಹೇಳಿ ಜನರಲ್ಲಿರುವ ಅಂತಸತ್ವವನ್ನು ಬಡಿದೆಬ್ಬಿಸಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಎರಡು ನಿಮಿಷ ಮೌನಾಚಾರಣೆ ಮಾಡಿ ಸಂತಾಪ ಸೂಚಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here