ಶಹಾಬಾದ:ಪ್ರೋಟಾನ ಹಾಗೂ ಬಲ್ವಾನ್ ಕೀಟ ನಾಶಕ ಬಳಕೆ ಮಾಡಿ ಸುಮಾರು 18 ಎಕರೆ ತೊಗರಿ ಬೆಳೆ ಹಾಳಾಗಿಲ್ಲ.ಸದಿಗೆ (ಕಳೆ) ಸಾಯಲು ಹೊಡೆಯುವ ಎಣ್ಣೆಯನ್ನು ಕಲಿಸಿ ಹೊಡೆದಿದ್ದರಿಂದ ಹಾಳಾಗಿದೆ ಎಂಬ ಸತ್ಯ ಖೂದ್ದಾಗಿ ರೈತ ದಶರಥ ಚವ್ಹಾಣ ತಿಳಿಸಿರುವ ಸತ್ಯ ಬಯಲಿಗೆ ಬಂದಿದೆ.
ಹೌದು ಚಿತ್ತಾಪೂರ ತಾಲೂಕಿನ ನಾಲವಾರ ವಲಯದ ಯಾಗಾಪೂರ ಗ್ರಾಪಂ ವ್ಯಾಪ್ತಿಯ ಹೀರಾಮಣಿ ತಾಂಡಾದ ದಶರಥ ಚವ್ಹಾಣ ಅವರು ತಮ್ಮ 18 ಎಕರೆ ಹೊಲದಲ್ಲಿ ಬೆಳೆದ ತೊಗರಿ ನಕಲಿ ಕೀಟನಾಶಕ ಬಳಕೆಯಿಂದ ಹಾಳಾಗಿದೆ ಎಂದು ಪತ್ರಿಕೆಗೆ ಹೇಳಿಕೆ ನೀಡಿದ್ದರು. ಪತ್ರಿಕೆಯಲ್ಲಿ ಬಂದ ವರದಿಗೆ ಎಚ್ಚೆತ್ತ ಅಧಿಕಾರಿಗಳು ಪರಿಶೀಲನೆಗೆ ದಶರಥ ಚವ್ಹಾಣ ಅವರ ಹೊಲಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.ಅವರ ಹೊಲದ ಸುತ್ತಮುತ್ತಲಿನ ಹೊಲದಲ್ಲಿಯೂ ನೆಟೆ ರೋಗದಿಂದ ಬೆಳೆಗಳು ಒಣಗಿ ಹೋಗಿರುವುದು ಕಂಡು ಬಂದಿದೆ.ಅಲ್ಲದೇ ಅವರು ಬೆಳೆಗೆ ಹೊಡೆದ ಎಣ್ಣೆಯನ್ನು ತರಲು ಹೇಳಿದ್ದಾರೆ.ಆಗ ದಶರಥ ಅವರು ಕೀಟನಾಶಕಗಳನ್ನು ತರಲು ಕೆಲಸಗಾರರಿಗೆ ತಿಳಿಸಿದ್ದಾರೆ. ಹೊಲದಲ್ಲಿ ಕೆಲಸ ಮಾಡುವ ಕೆಲಸಗಾರರು ಕೀಟನಾಶಕಗಳಾದ ಪ್ರೋಟಾನ, ಬಲ್ವಾನ್ ಹಾಗೂ ಸದಿ ಸಾಯಲು ಹೊಡೆಯುವ ಎಣ್ಣೆ ಪೊಟ್ಟಣವನ್ನು ತಂದು ತೋರಿಸಿದ್ದಾರೆ. ಆಗ ಸಹಾಯಕ ಕೃಷಿ ಅಧಿಕಾರಿ ಸದಿಗೆ ಹೊಡೆಯುವ ಎಣ್ಣೆಯನ್ನು ಹೊಡೆದರೆ ಬೆಳೆಗೆ ಹಾನಿಯಾಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು. ಆಗ ಆಶ್ಚರ್ಯಚಕಿತನಾದ ದಶರಥ ಪ್ರೋಟಾನ, ಬಲ್ವಾನ ಜತೆ ಸದಿಗೆ ಹೊಡೆಯುವ ಎಣ್ಣೆಯನ್ನು ಕೆಲಸಗಾರರು ಗೊತ್ತಿಲ್ಲದೇ ಬೆಳೆಗೆ ಸಿಂಪರಣೆ ಮಾಡಿದ್ದಾರೆ.ಅದು ನನ್ನ ಗಮನಕ್ಕಿಲ್ಲ ಎಂದು ನಾಲವಾರ ಸಹಾಯಕ ಕೃಷಿ ಅಧಿಕಾರಿ ಸತೀಶ ಪವಾರ ಅವರಿಗೆ ತಿಳಿಸಿದ್ದಾನೆ. ಆಗ ನಿಜವಾದ ಸತ್ಯ ಬಯಲಿಗೆ ಬಂದಿದೆ.ಅಲ್ಲದೇ ಅವನಿಗೆ 18 ಎಕರೆ ಹೊಲ ಇಲ್ಲದಿರುವುದು ಕಂಡು ಬಂದಿದೆ.
ಸದಿಗೆ ಹೊಡೆಯುವ ಎಣ್ಣೆಯನ್ನು ಕೀಟನಾಶಕಗಳ ಜತೆ ಬೆಳೆಗೆ ಸಿಂಪರಣೆ ಮಾಡಿದ್ದರಿಂದ ಬೆಳೆ ಹಾಳಾಗಲು ಕಾರಣವಾಗಿದೆ.ಅದು ಕೃಷಿ ಅಧಿಕಾರಿ ಬಂದ ನಂತರ ಗೊತ್ತಾಗಿದೆ- ದಶರಥ ಚವ್ಹಾಣ ರೈತ.
ಪ್ರೋಟಾನ, ಬಲ್ವಾನ ಜತೆ ಸದಿಗೆ ಹೊಡೆಯುವ ಎಣ್ಣೆಯನ್ನು ಕೆಲಸಗಾರರು ಗೊತ್ತಿಲ್ಲದೇ ಬೆಳೆಗೆ ಸಿಂಪರಣೆ ಮಾಡಿದ್ದರಿಂದ ಬೆಳೆ ಹಾಳಾಗಿದೆ. ಅದು ನನ್ನ ಗಮನಕ್ಕೆ ಬಂದಿರಲಿಲ್ಲ.ಈಗ ಸತ್ಯ ಗೊತ್ತಾಗಿದೆ ಎಂದು ಖುದ್ದಾಗಿ ರೈತ ನಮ್ಮ ಮುಂದೆ ಹೇಳಿಕೊಂಡಿದ್ದಾನೆ- ಸತೀಶ ಪವಾರ ಕೃಷಿ ಅಧಿಕಾರಿ ನಾಲವಾರ.