ವಾಗಣಗೇರಾ ಗ್ರಾಮದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ

0
153

ಸುರಪುರ: ತಾಲೂಕಿನ ವಾಗಣಗೇರಾ ಗ್ರಾಮದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ನಡೆಸಲಾಯಿತು.ಸಭೆಯಲ್ಲಿ ಭಾಗವಹಿಸಿದ್ದ ಸಿಆರ್‌ಪಿ ಶಿವಾನಂದ ಅವರು ಮಾತನಾಡಿ,ಮಕ್ಕಳು ದೇವರ ಸಮಾನ ಮಕ್ಕಳನ್ನು ಪೋಷಕರು ಮತ್ತು ಶಿಕ್ಷಕರು ಹೇಗೆ ಬೆಳೆಸುತ್ತಾರೊ ಹೇಗೆ ಕಲಿಸುತ್ತಾರೊ ಹಾಗೆ ಕಲಿಯುತ್ತಾರೆ.ಆದ್ದರಿಂದ ಮಕ್ಕಳಲ್ಲಿ ಮಾನವೀಯ ಮೌಲ್ಯ ಮತ್ತು ಉತ್ತಮವಾದ ಶಿಕ್ಷಣವನ್ನು ತುಂಬುವ ಕೆಲಸ ಎಲ್ಲರ ಮೇಲಿದೆ ಎಂದರು.

ಇಂದು ಮಕ್ಕಳ ಮೇಲೆ ಹಲ್ಲೆ ದೌರ್ಜನ್ಯ ಮತ್ತಿತರೆ ಕ್ರೂರ ಕ್ರೀಯೆಗಳು ನಡೆಯುತ್ತಿರುವುದನ್ನು ಕಾಣುತ್ತೇವೆ,ಅಂತಹ ದೌರ್ಜನ್ಯಗಳನ್ನು ತಡೆಯಲೆಂದು ಸರಕಾರ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಯೋಜನೆಯನ್ನು ಜಾರಿಗೊಳಿಸಿದೆ,ಇದರ ಹೆಚ್ಚಿನ ಹೊನೆ ಗ್ರಾಮ ಪಂಚಾಯತಿ ಮೇಲಿರುತ್ತದೆ,ಆದ್ದರಿಂದ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಮತ್ತು ಮಕ್ಕಳು ಸಹ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮಗಿರುವ ಸಮಸ್ಯೆ ಮತ್ತು ಹಲ್ಲೆ ದೌರ್ಜನ್ಯಗಳ ಕುರಿತು ಹೇಳಲು ಅವಕಾಶವಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಅಜೀಂ ಪ್ರೇಮ್‌ಜಿ ಪೌಂಡೇಶನ್‌ನ ಸಂಪನ್ಮೂಲ ವ್ಯಕ್ತಿ ಅನ್ವರ ಜಮಾದಾರ್ ಮಾತನಾಡಿ,ಮಕ್ಕಳ ಹಕ್ಕುಗಳ ಗ್ರಾಮ ಸಭೆಯ ಜೊತೆಗೆ ಓದುವ ಬೆಳಕು ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ,ಮಕ್ಕಳು ಗ್ರಂಥಾಲಯಗಳಿಗೆ ಬಂದು ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬಹುದಾಗಿದೆ.ಆದ್ದರಿಂದ ವಿದ್ಯಾರ್ಥಿಗಳು ಗ್ರಂಥಾಲಯಗಳಲ್ಲಿ ಹೆಸರು ನೊಂದಾಯಿಸಿಕೊಂಡು ಓದಿಗೆ ಮುಂದಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಹುಸೇನ್ ಪಾಷಾ ಶಾಲಾ ಮುಖ್ಯಗುರು ಗೋಣಿ ಬಸಪ್ಪ ಮುಖಂಡ ಶಿವರಾಜ ನಾಯಕ ಇನ್ನಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here