ಕಲಬುರಗಿ: ಇಂದು ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವರಿಗೆ ತಾಲೂಕ ಪಂಚಾಯತ ಸಭಾಗಣದಲ್ಲಿ ಘೇರವ್ ಹಾಕಿ ಪ್ರತಿಭಟನೆ ನಡೆಸಲಾಯಿತು.
ಶರಣಸಿರಸಗಿ ಪಂಚಾಯತನ ಕಂಪ್ಯೂಟರ್ ಅಪರೇಟರ್ ಅಧಿಕಾರ ದುರ್ಬಳಕ್ಕೆ ಮಾಡಿಕೊಂಡು ವಸತಿ ಯೋಜನೆಯಡಿ ಲಕ್ಷಾಂತರ ರೂಪಾಯಿಗಳು ಲೋಟಿ ಮಾಡಿರುವ ಆರೋಪಿಸಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
14ನೇ ಹಣಕಾಸು ಯೋಜನೆಯಡಿ ಅನುದಾನ ದುರ್ಬಳಕ್ಕೆ, ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ಹಾಗೂ ಸಹಾಯಕ ಇಂಜಿಯರ್ ಗೆ ಕೊಲೆ ಬೆದರಿಕೆ ಹಾಕಿರುವುದಾಗಿ ಮಲ್ಲಿಕಾರ್ಜುನ ತಳಕೇರಿ ಈ ಸಂದರ್ಭದಲ್ಲಿ ಸಿಇಓಗೆ ತಿಳಿಸಿದರು.
ಪ್ರಕರಣದ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮಕೈಗೊಳಬೇಕೆಂದು ಈ ಸಂದರ್ಭದಲ್ಲಿ ಎರಡು ಸಂಘಟನೆಯ ನಾಯಕರು ಒತ್ತಾಯಿಸಿದರು.
ಭೀಮ್ ಆರ್ಮಿಯ ವಿಭಾಗೀಯ ಅಧ್ಯಕ್ಷ ಅರುಣ್ ಭರಣಿ, ಸಂತೋಷ ಬಿ ಪಾಳಾ, ರಾಜು ಶ್ರೀಚಂದ, ಡಿಕೆ ಮದನಕರ್ ಸರ್, ಮಂಜುನಾಥ ಭಂಡಾರಿ ಸರ್, ಮಲ್ಲು ನಾಯಕ್ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಇದ್ದರು.