ಯಾದಗಿರಿ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ತರಲು ಪ್ರಯತ್ನಿಸುವೆ: ಸುರೇಶ ಸಜ್ಜನ್

0
36

ಸುರಪುರ: ಅನೇಕ ಜನ ಸಹಕಾರಿಗಳು ಬಯಸುತ್ತಿರುವಂತೆ ನಮ್ಮ ಯಾದಗಿರಿ ಜಿಲ್ಲೆಗೂ ಡಿಸಿಸಿ ಬ್ಯಾಂಕ್‌ನ ಕೇಂದ್ರ ಕಚೇರಿಯನ್ನು ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್‌ನ ನೂತನ ನಿರ್ದೇಶಕ ಸುರೇಶ ಸಜ್ಜನ್ ತಿಳಿಸಿದರು.

ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್‌ಗೆ ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡ ನಂತರ ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಈಗಾಗಲೆ ತಮಗೆಲ್ಲರಿಗು ಗೊತ್ತಿರುವಂತೆ ನಮ್ಮ ಬಸವೇಶ್ವರ ಪತ್ತಿನ ಸಹಕಾರ ಸಂಘದ ಎಲ್ಲಾ ನಿರ್ದೇಶಕ ಆಡಳಿತ ಮಂಡಳಿ ನಿರ್ಣಯಿಸಿದಂತೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಬಂದಿದ್ದು ಅವಿರೋಧವಾಗಿ ಆಯ್ಕೆಯಾಗಿದೆ.ಆದ್ದರಿಂದ ನಮ್ಮೆಲ್ಲ ಆಡಳಿತ ಮಂಡಳಿ ಸದಸ್ಯರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಯಾದಗಿರಿ ಜಿಲ್ಲೆಯ ಎಲ್ಲಾ ಒಟ್ಟು ೮೦೦ ಸಹಕಾರ ಸಂಘಗಳು ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಬರುತ್ತವೆ,ಈ ಎಲ್ಲಾ ಸಹಕಾರಿ ಸಂಘಗಳ ಸದಸ್ಯರು ಸೇರಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಈ ಬ್ಯಾಂಕಲ್ಲಿ ನಡೆಯುತ್ತದೆ.ನಮ್ಮ ಭಾಗದ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಪ್ರಮಾಣ ಸಾಲ ದೊರೆಯಬೇಕಿತ್ತು ಅದು ರೈತರಿಗೆ ಅನ್ಯಾಯವಾಗಿದೆ ಎನ್ನಬೇಕಿದೆ.ಬೇರೆ ಜಿಲ್ಲೆಗಳಲ್ಲಿನ ರೈತರು ಕೃಷಿ ಪತ್ತಿನ ಸಹಕಾರಿ ಸಂಘದಿಂದ ೩ ಲಕ್ಷ ಸಾಲ ಪಡೆಯುತ್ತಾರೆ,ಆದೆರೆ ನಮ್ಮ ಜಿಲ್ಲೆಯಲ್ಲಿ ಇಷ್ಟು ಸಿಗುವುದಿಲ್ಲ.ಆದರೆ ಈ ಭಾಗದಲ್ಲಿ ನೀರಾವರಿ ಇರುವುದರಿಂದ ಭೂಮಿಯ ಬೆಲೆ ಎಕರೆಗೆ ೧೫ ರಿಂದ ೨೦ ಲಕ್ಷವಿದೆ.ಆದ್ದರಿಂದ ಇಲ್ಲಿಯ ರೈತರಿಗೆ ೩ ರಿಂದ ೪ ಲಕ್ಷ ಸಾಲ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ.ಡಿಸಿಸಿ ಬ್ಯಾಂಕ್ ಮೂಲಕ ಅನೇಕ ಸಹಕಾರ ಸಂಘಗಳು ಸಾಲ ಪಡೆದು ಮರು ಪಾವತಿ ಮಾಡುತ್ತಿಲ್ಲ.ಅದಕ್ಕೆ ಕೊರೊನಾ ಕಾರಣ ಹೇಳಲಾಗುತ್ತದೆ.ಅದಕ್ಕಾಗಿ ನಬಾರ್ಡ್ ಮತ್ತು ಅಪೇಕ್ಸ್ ಬ್ಯಾಂಕ್‌ಗಳ ಮೂಲಕ ಹೆಚ್ಚಿನ ಹಣವನ್ನು ತಂದು ರೈತರಿಗೆ ಸಾಲ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಬ್ಯಾಂಕಿನ ಹಿತದೃಷ್ಟಿಯಿಂದ ಎಲ್ಲರಲ್ಲಿ ವಿನಂತಿ ಮಾಡುವೆ ಎಲ್ಲರು ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸುವ ಮೂಲಕ ಡಿಸಿಸಿ ಬ್ಯಾಂಕ್ ಬೆಳೆಯಲು ಸಾಲ ಪಡೆದವರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕು.ಇನ್ನು ಎಲ್ಲಾ ಕಡೆಗಳಲ್ಲಿನ ಡಿಸಿಸಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಕೈಗಾರಿಕೋದ್ಯಮಿಗಳು ಹಣ ಠೇವಣಿ ಮಾಡುತ್ತಾರೆ,ಅದರಂತೆ ನಮ್ಮ ಜಿಲ್ಲೆಯಲ್ಲಿನ ಎಲ್ಲಾ ಕೈಗಾರಿಕೋದ್ಯಮಿಗಳು ಹಣವನ್ನು ಠೇವಣಿ ಮಾಡಿಸಲು ಪ್ರಯತ್ನ ಮಾಡುವೆ ಹಾಗು ಬೇರೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿಯನ್ನು ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಮನೋಹರ ಜಾಲಹಳ್ಳಿ ನಿರ್ದೇಶಕರಾದ ಶರಣಪ್ಪ ಕಳ್ಳಿಮನಿ ಮುಖಂಡರಾದ ಬಸವರಾಜ ಜಮದ್ರಖಾನಿ ಎಸ್.ಎಮ್.ಕನಕರಡ್ಡಿ ಮಂಜುನಾಥ ಗುಳಗಿ ಶಾಂತರಾಜ ಬಾರಿ ಮಂಜುನಾಥ ಬಳಿ ವಿರೇಶ ದೇಶಮುಖ ಮಂಜುನಾಥ ಜಾಲಹಳ್ಳಿ ಶಿವರುದ್ರ ಉಳ್ಳಿ ಚಂದ್ರಶೇಖರ ಡೊಣೂರ ವಿರೇಶ ಪಂಚಾಂಗಮಠ ಸೇರಿದಂತೆ ಅನೇಕರಿದ್ದರು.ಇದೇ ಸಂದರ್ಭದಲ್ಲಿ ಬ್ಯಾಂಕ್‌ನ ನಿರ್ದೇಶಕರು ಪತ್ರಕರ್ತರು ಮತ್ತು ಇತರೆ ಸಂಘ ಸಂಸ್ಥೆಗಳ ಮುಖಂಡರು ಸುರೇಶ ಸಜ್ಜನ್ ಅವರಿಗೆ ಸನ್ಮಾನಿಸಿ ಗೌರವಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here